ನೆನೆಗುದಿಗೆ ಬಿದ್ದಿರುವ ಪ್ರಮುಖ ರಸ್ತೆ ಕಾಮಗಾರಿ:  ಹರೀಶ್‍ಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ
ಮೈಸೂರು

ನೆನೆಗುದಿಗೆ ಬಿದ್ದಿರುವ ಪ್ರಮುಖ ರಸ್ತೆ ಕಾಮಗಾರಿ: ಹರೀಶ್‍ಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ

September 3, 2021

ಮೈಸೂರು, ಸೆ.2- ಕಳೆದ ಸುಮಾರು ಒಂದೂವರೆ ವರ್ಷದಿಂದ ಕುಂಟುತ್ತಾ ಸಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮ ಗಾರಿಯನ್ನು ಶೀಘ್ರವೇ ಪೂರ್ಣಗೊಳಿಸ ಬೇಕು ಎಂದು ಆಗ್ರಹಿಸಿ ಮೈಸೂರಿನ ವಿಜಯ ನಗರ ಮೊದಲನೇ ಹಂತದಲ್ಲಿರುವ ಉಪ ನೋಂದಾಣಾಧಿಕಾರಿಗಳ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.

ರಸ್ತೆ ಅಭಿವೃದ್ಧಿಪಡಿಸುವ ಸಲುವಾಗಿ ವಿಜಯನಗರ ವಾಟರ್ ಟ್ಯಾಂಕ್‍ನಿಂದ ಶಾಸಕ ಜಿ.ಟಿ.ದೇವೇಗೌಡ ಅವರ ಮನೆ ವರೆಗೆ ರಸ್ತೆಯನ್ನು ಸಂಪೂರ್ಣ ಅಗೆದು ಬಿಟ್ಟಿದ್ದು, ಕಳೆದ ಒಂದೂವರೆ ವರ್ಷ ದಿಂದ ಕಾಮಗಾರಿ ಪೂರ್ಣಗೊಳಿಸದೇ ಇರುವ ಕಾರಣ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಅಲ್ಲದೇ ಈ ರಸ್ತೆಯಲ್ಲಿರುವ ಅಂಗಡಿ- ಮುಂಗಟ್ಟುಗಳ ಮಾಲೀಕರು, ಮನೆಗಳ ನಿವಾಸಿಗಳು ಧೂಳು ಕುಡಿಯುವಂತಾ ಗಿದೆ. ಜೊತೆಗೆ ವಾಹನಗಳು ಓಡಾಡಿ ದಾಗ ಅಂಗಡಿಯಲ್ಲಿರುವ ಪದಾರ್ಥಗಳು ಧೂಳಿನಿಂದ ಆವೃತವಾಗುತ್ತವೆ.

ರಸ್ತೆ ಅಗೆದು ಹಾಗೇ ಬಿಟ್ಟಿರುವುದರಿಂದ ತೀವ್ರ ಹಳ್ಳ-ಕೊಳ್ಳಗಳಾಗಿವೆ. ಕೆಲವೆಡೆ ಒಂದು ಅಡಿಗಿಂತಲೂ ಹೆಚ್ಚು ಹಳ್ಳ ಬಿದ್ದಿದೆ. ಕಾರು ಚಾಲನೆ ಮಾಡುವಾಗ ಚಕ್ರ ಹಳ್ಳಕ್ಕೆ ಇಳಿ ದರೆ ಅದರ ಬಾಡಿ ರಸ್ತೆಗೆ ಬಡಿಯುತ್ತದೆ ಎಂದು ಕಾರು ಚಾಲಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಗುಂಡಿ ಬಿದ್ದ ರಸ್ತೆಯಲ್ಲಿ ದ್ವಿಚಕ್ರ ಸವಾರರು ದಿನಂಪ್ರತಿ ಬಿದ್ದು, ಗಾಯ ಮಾಡಿಕೊಳ್ಳುವುದು ಸರ್ವೇಸಾಮಾನ್ಯ ವಾಗಿದೆ. ಕಾಮಗಾರಿಯನ್ನು ವೈಜ್ಞಾನಿಕ ವಾಗಿ ನಡೆಸುತ್ತಿಲ್ಲ ಎಂದು ಆ ಭಾಗದ ನಾಗರಿಕರು ಅಸಮಾಧಾನಗೊಂಡಿದ್ದು, ರಸ್ತೆ ಬದಿಯ ಕಾಂಪೌಂಡ್ ಮೇಲೆ ‘ಜನ ಪ್ರತಿನಿಧಿಗಳೇ ಎಲ್ಲಿದ್ದೀರಾ, ಏನೂ ಮಾಡು ತ್ತಿದ್ದೀರಾ’, ‘ಯಾರಿಗೆ ಬೇಕು ಜೋಡಿ ರಸ್ತೆ, ಏತಕೆ ಬೇಕು ಜೋಡಿ ರಸ್ತೆ’, ‘ನಮ್ಮ ಫುಟ್ ಪಾತ್ ಏನಾಯಿತು’… ಸೇರಿದಂತೆ ಹಲ ವಾರು ಬಗೆಯ ಭಿತ್ತಿ ಪತ್ರಗಳನ್ನು ಪ್ರದ ರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ನೇತೃತ್ವದಲ್ಲಿ ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಧು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್, ಡೆಲ್ಲಿ ರವಿ, ಎನ್.ರವಿ, ನಾಗೇಶ್, ಶ್ರೀನಿವಾಸ್, ಮೂರ್ತಿ, ಅಭಿನಾಶ್ ಸೇರಿ ದಂತೆ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಶಾಸಕ ಎಲ್.ನಾಗೇಂದ್ರ ಮತ್ತು ಕಾರ್ಪೋರೇಟರ್ ಸುಬ್ಬಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಳೆದ ಮೂರು ವರ್ಷದಿಂದ ಈ ರಸ್ತೆ ಹಾಳಾಗಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚ ರಿಸಲು ನರಕಯಾತನೆಪಡುವಂತಾಗಿದೆ. ಶಾಸಕರು ಮತ್ತು ಈ ಭಾಗದ ಪಾಲಿಕೆ ಸದಸ್ಯರು ಈ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋ ಪಿಸಿದರು. ಅಲ್ಲದೆ ಇಲ್ಲಿನ ಕಾರ್ಪೊ ರೇಟರ್ ಆಯ್ದ ರಸ್ತೆಗಳಿಗೆ ಡಾಂಬರ್ ಭಾಗ್ಯ ಕಲ್ಪಿಸಿದ್ದಾರೆ. ಕನ್ನಡ ಸಾಹಿತ್ಯ ಭವನ ರಸ್ತೆ ಹಾಳಾಗಿ ಹಲವು ವರ್ಷಗಳು ಕಳೆ ದಿದೆ. ಅದರತ್ತ ಇವರು ಗಮನಹರಿಸಿಲ್ಲ. ಈಗ ನಡೆಯುತ್ತಿರುವ ಈ ರಸ್ತೆ ಕಾಮಗಾರಿಯೂ ಮೇಲ್ನೋಟಕ್ಕೆ ಕಳಪೆಯಾಗಿ ಕಂಡು ಬರು ತ್ತಿದೆ. ಪಾಲಿಕೆ ಆಯುಕ್ತರು ಸೂಕ್ತ ಪರಿ ಶೀಲನೆ ನಡೆಸಬೇಕು ಎಂದು ಆಗ್ರಹಿಸಿದ ರಲ್ಲದೆ, ಶೀಘ್ರವೇ ರಸ್ತೆ ಕಾಮಗಾರಿ ಪೂರ್ಣ ಗೊಳಿಸಿ ಸಾರ್ವಜನಿಕರ ಸಂಕಷ್ಟವನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.

Translate »