ಮುಂಬೈ, ಸೆ.26- ಡ್ರಗ್ಸ್ ಕೇಸ್‍ಗೆ ಸಂಬಂಧಪಟ್ಟಂತೆ ಇಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವ ರನ್ನು ಎನ್‍ಸಿಬಿ ಅಧಿ ಕಾರಿಗಳು ವಿಚಾ ರಣೆ ನಡೆಸಿದ್ದಾರೆ. ದೀಪಿಕಾ ತಮ್ಮ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಜತೆಗೆ ಡ್ರಗ್ಸ್ ಬಗ್ಗೆ ನಡೆಸಿದ ವಾಟ್ಸ್‍ಪ್ ಚಾಟ್ ಫೆÇೀಟೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಎನ್‍ಸಿಬಿ ಸಮನ್ಸ್ ನೀಡಿತ್ತು. ಅಧಿಕಾರಿಗಳಿಂದ ವಿಚಾ ರಣೆಗೊಳಗಾದ ಕರಿಷ್ಮಾ, ಡ್ರಗ್ಸ್ ಕುರಿತು ಚಾಟ್ ನಡೆದಿರುವ ವಾಟ್ಸ್‍ಆಪ್ ಗ್ರೂಪ್‍ಗೆ ದೀಪಿಕಾ ಅವರೇ ಅಡ್ಮಿನ್ ಆಗಿದ್ದರು ಎಂಬ ವಿಷಯವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಹಾಗೇ ಇಂದು ದೀಪಿಕಾ ಪಡುಕೋಣೆಯವರೂ ಕೂಡ ತಾವು ಡ್ರಗ್ಸ್‍ಗೆ ಸಂಬಂಧಪಟ್ಟಂತೆ 2017ರಲ್ಲಿ ಕರಿಷ್ಮಾ ಜತೆಗೆ ಚಾಟ್ ಮಾಡಿರುವುದು ಸತ್ಯ ಎಂದು ಎನ್‍ಸಿಬಿ ಎದುರು ಒಪ್ಪಿಕೊಂಡಿದ್ದಾರೆ. ಇಂದು ಬೆಳಗ್ಗೆ ದಕ್ಷಿಣ ಮುಂಬೈನಲ್ಲಿ ಇರುವ ಎನ್‍ಸಿಬಿ ಕಚೇರಿಗೆ ಹಾಜರಾದ ದೀಪಿಕಾ ಪಡುಕೋಣೆಯವರನ್ನು ತನಿಖಾದಳದ ನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ನೇತೃತ್ವದ ಐವರು ಅಧಿಕಾರಿಗಳ ತಂಡ ಸುಮಾರು 5 ತಾಸುಗಳ ಕಾಲ ವಿಚಾರಣೆ ನಡೆಸಿದೆ.