ನಿವೇಶನ ಮಾರಾಟಕ್ಕೆ ಎಲ್‍ಎಕ್ಸ್‍ನಲ್ಲಿ ಜಾಹಿರಾತು ನೀಡಿ 5 ಲಕ್ಷ ವಂಚನೆ
ಮೈಸೂರು

ನಿವೇಶನ ಮಾರಾಟಕ್ಕೆ ಎಲ್‍ಎಕ್ಸ್‍ನಲ್ಲಿ ಜಾಹಿರಾತು ನೀಡಿ 5 ಲಕ್ಷ ವಂಚನೆ

December 13, 2018

ಮೈಸೂರು: ಓಎಲ್‍ಎಕ್ಸ್ ಮೂಲಕ ನಿವೇಶನ ಖರೀದಿಸಲು ಹೋದ ವ್ಯಕ್ತಿಯೊಬ್ಬ, ನಕಲಿ ಮಾಲೀಕನಿಗೆ 5 ಲಕ್ಷ ಅಡ್ವಾನ್ ಹಣ ನೀಡಿ ಮೋಸ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ನಗರ ನಿವಾಸಿ ಹೇಮರಾಜು ಮೋಸ ಹೋದವರು.

ಯೋಗೇಶ್ ಮತ್ತು ಸತೀಶ್ 5 ಲಕ್ಷ ರೂ. ವಂಚಿಸಿದವರು. 2017ರ ಸೆ.3ರಂದು ಯೋಗೇಶ್ ಓಎಲ್‍ಎಕ್ಸ್‍ನಲ್ಲಿ ನಿವೇಶನ ಮಾರಾಟಕ್ಕಿದೆ ಎಂದು ಜಾಹಿರಾತು ನೀಡಿದ್ದು, ಇದನ್ನು ಗಮನಿಸಿದ ಹೇಮರಾಜು, ಯೋಗೇಶ್ ಅವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಯೋಗೇಶ್ ವಿಜಯನಗರದ 1ನೇ ಹಂತದಲ್ಲಿರುವ ನಿವೇಶನವನ್ನು ತೋರಿಸಿ ದ್ದಲ್ಲದೆ, ತನ್ನ ಸ್ನೇಹಿತ ಸತೀಶ್‍ನನ್ನು ಪರಿಚಯಿಸಿ, ಇವರೇ ನಿವೇಶನದ ಮಾಲೀಕ ಎಂದು ಹೇಮರಾಜು ಅವರನ್ನು ನಂಬಿಸಿದ್ದಾರೆ. ನಿವೇಶನದ ಬೆಲೆ 1.7 ಕೋಟಿ ರೂ., ಆಗಲಿದ್ದು, ಇದಕ್ಕೆ 5 ಲಕ್ಷ ರೂ. ಮುಂಗಡ ನೀಡಬೇಕು ಎಂದು ಸತೀಶ್ ಸಮ್ಮುಖದಲ್ಲಿ ಯೋಗೇಶ್, ಹೇಮರಾಜು ಅವರನ್ನು ಒಪ್ಪಿಸಿದ್ದಾರೆ. ಬಳಿಕ ಈ ಹಣವನ್ನು 2017ರ ಸೆ.16 ರಂದು ಶಿವರಾಂ ಪೇಟೆಯ ವಿಘ್ನೇಶ್ ಗ್ರಾಫಿಕ್ಸ್ ಅಂಗಡಿ ಯಲ್ಲಿ ಪಡೆದಿದ್ದಾರೆ.

ಹೇಮರಾಜು ನೋಡಿದ ನಿವೇಶನದ ದಾಖಲಾತಿಗಳನ್ನು ಪರಿಶೀಲಿಸಿ ದಾಗ ಅದು ನಂದಾ ಎಂಬುವರ ಹೆಸರಿನಲ್ಲಿರು ವುದು ತಿಳಿದು, ಈ ವಿಷಯವನ್ನು ಯೋಗೇಶ್ ಮತ್ತು ಸತೀಶ್ ಬಳಿ ಪ್ರಸ್ತಾಪಿಸಿದಾಗ, ನಂದಾ ಹೆಸರಿನಲ್ಲಿರುವ ನಿವೇಶನವನ್ನು ನಮ್ಮ ಹೆಸರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದು, ಅವರಿಂದ ರಿಜಿಸ್ಟರ್ ಆದ ಬಳಿಕ ನಿಮಗೆ ಹೆಸರಿಗೆ ವರ್ಗಾಯಿಸುವುದಾಗಿ ಸಬೂಬು ಹೇಳಿದ್ದಾರೆ. ಸ್ವಲ್ಪ ದಿನ ಕಳೆದು ಈ ವಿಷಯವಾಗಿ ಹೇಮರಾಜು, ತನಗೆ ತೋರಿಸಿರುವ ನಿವೇಶನವನ್ನು ರಿಜಿಸ್ಟರ್ ಮಾಡಿಕೊಡಿ, ಇಲ್ಲವೇ ಅಡ್ವಾನ್ ಹಣ ವಾಪಸ್ ನೀಡುವಂತೆ ಯೋಗೇಶ್ ಮತ್ತು ಸತೀಶ್ ಅವರನ್ನು ಕೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿ ಹೋದ ಹೇಮರಾಜು, ಯೋಗೇಶ್ ಮತ್ತು ಸತೀಶ್ ಅವರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

Translate »