ನ್ಯೂಸ್‍ಪೇಪರ್‍ನಲ್ಲಿ ಬಜ್ಜಿ,  ಬೋಂಡ ಮಾರಾಟ ನಿಷೇಧ
ಮೈಸೂರು

ನ್ಯೂಸ್‍ಪೇಪರ್‍ನಲ್ಲಿ ಬಜ್ಜಿ, ಬೋಂಡ ಮಾರಾಟ ನಿಷೇಧ

December 13, 2018

ಪಾಲಿಕೆಗಳ ವ್ಯಾಪ್ತಿಯಲ್ಲಿದ್ದ ಆದೇಶ ರಾಜ್ಯಾದ್ಯಂತ ಜಾರಿ
ಬೆಂಗಳೂರು: ಹೋಟೆಲ್ ಹಾಗೂ ಬೀದಿಬದಿಯ ವ್ಯಾಪಾರಸ್ಥರು ಬಜ್ಜಿ, ಬೋಂಡ ಸೇರಿದಂತೆ ಆಹಾರ ಪದಾರ್ಥಗಳನ್ನು ಮುದ್ರಿತ ನ್ಯೂಸ್‍ಪೇಪರ್‍ಗಳಲ್ಲಿ ಇಟ್ಟು ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿ ಸಿದೆ. ಬೆಂಗಳೂರು ಮಹಾನಗರಪಾಲಿಕೆ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ ಹಾಗೂ ತುಮಕೂರು ನಗರಗಳಿಗೆ ಮಾತ್ರ ಅನ್ವಯವಾಗು ವಂತೆ ಕಳೆದ ವರ್ಷದ ಜುಲೈ ತಿಂಗಳಲ್ಲಿ ಜಾರಿ ತರಲಾಗಿತ್ತು. ಈ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಿ, ಆಹಾರ ಸುರಕ್ಷತಾ ಆಯುಕ್ತರು ಆದೇಶಿಸಿದ್ದಾರೆ. ಕಾಂಗ್ರೆಸ್ಸಿನ ಆರ್.ಧರ್ಮಸೇನ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರು, ನ್ಯೂಸ್ ಪೇಪರ್‍ಗಳಲ್ಲಿ ನೀಡಿದ ಅಹಾರ ಪದಾರ್ಥ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಈ ಆದೇಶ ಹೊರಡಿಸಲಾಗಿದೆ. ನೂತನ ಆದೇಶದ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ನೀಡಲಾಗುವುದು. ಇದುವ ರೆಗೂ ರಾಜ್ಯದಲ್ಲಿ ಆದೇಶ ಉಲ್ಲಂಘಿಸಿದ 180 ಮಾರಾಟಗಾರರಿಗೆ ನೋಟೀಸ್ ನೀಡಲಾಗಿದೆ ಎಂದರು.

Translate »