ಮೈಸೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ
ಮೈಸೂರು

ಮೈಸೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ

December 13, 2018

ಮೈಸೂರು: ಪ್ರಸಕ್ತ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ರಾಜ್ಯಮಟ್ಟದ ಸ್ಪರ್ಧೆ ಡಿ.15ರಿಂದ 17ರವ ರೆಗೆ ಮೈಸೂರಿನಲ್ಲಿ ನಡೆಯಲಿದ್ದು, ಪ್ರತಿ ಜಿಲ್ಲೆಯಿಂದ 51 ವಿದ್ಯಾರ್ಥಿಗಳಂತೆ ಒಟ್ಟು 1,734 ಮಂದಿ ವಿವಿಧ ಸ್ಪರ್ಧೆಗಳಲ್ಲಿ ಭಾಗ ವಹಿಸಲಿದ್ದಾರೆ ಎಂದು ಮೈಸೂರು ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳು ಡಿ.15, 16 ಮತ್ತು 17ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಲಿವೆ. ಜಿಲ್ಲಾಡಳಿತ ಮತ್ತು ಸಾರ್ವ ಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸ್ಪರ್ಧೆ ಗಳು ನಡೆಯಲಿವೆ ಎಂದು ಹೇಳಿದರು.

ಇದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರತಿಷ್ಠಿತ ಕಾರ್ಯಕ್ರಮ. 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಹಾಗೂ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕಲೋತ್ಸವ ಸ್ಪರ್ಧೆಗಳು ನಡೆಯಲಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳು ಈ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಪ್ರತಿಭಾ ಕಾರಂಜಿ ಸ್ಪರ್ಧೆಗಳು ವೈಯಕ್ತಿಕ ಸ್ಪರ್ಧೆಯಾಗಿದ್ದು, ಕನ್ನಡ ಸೇರಿದಂತೆ 10 ವಿವಿಧ ಭಾಷೆಗಳ ಭಾಷಣ ಸ್ಪರ್ಧೆ, ಸಂಸ್ಕøತ ಮತ್ತು ಅರೇಬಿಕ್ ಭಾಷೆಗಳಲ್ಲಿ ಧಾರ್ಮಿಕ ಪಠಣ, ಜಾನಪದ ಗೀತೆ, ಭಾವಗೀತೆ, ಭರತ ನಾಟ್ಯ, ಛದ್ಮವೇಷ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಮಿಮಿಕ್ರಿ, ಚರ್ಚಾಸ್ಪರ್ಧೆ, ರಂಗೋಲಿ ಹಾಗೂ ಗಝಲ್ ಸ್ಪರ್ಧೆಗಳು ಪ್ರತಿಭಾ ಕಾರಂಜಿ ವಿಭಾಗದಲ್ಲಿ ನಡೆಯಲಿವೆ. ಅದೇ ರೀತಿ ಕಲೋತ್ಸವ ಸಾಮೂಹಿಕ ಸ್ಪರ್ಧೆಗಳಲ್ಲಿ ನೃತ್ಯ, ಸಂಗೀತ, ನಾಟಕ ಹಾಗೂ ದೃಶ್ಯಕಲೆ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಪ್ರತಿ ಜಿಲ್ಲೆಯಿಂದ 5 ಮಂದಿಯಂತೆ 170 ಮಂದಿ ನೋಡಲ್ ಅಧಿಕಾರಿಗಳು ಮತ್ತು ಶಿಕ್ಷಕರುಗಳು ಭಾಗÀವಹಿಸುತ್ತಿದ್ದಾರೆ. ಭಾಗ ವಹಿಸುವ ವಿದ್ಯಾರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿದ್ದು, ಇ-ಟೆಂಡರ್ ಮೂಲಕ ಆಹಾರ ಸರಬರಾಜುದಾರರನ್ನು ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ಸತ್ಯಸಾಯಿ ಶಾಲೆ, ನಿರ್ಮಲಾ ಕಾನ್ವೆಂಟ್, ಬಸವೇಶ್ವರ ಸಮುದಾಯ ಭವನ, ಶ್ರೀರಾಮ ಸಮುದಾಯ ಭವನ, ಮುಲಕ ನಾಡು ಸಮುದಾಯ ಭವನ, ಸರಸ್ವತಿ ಪುರಂನ ಜೆಎಸ್‍ಎಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಮಹಾಜನ ಶಾಲೆ, ಚಿನ್ಮಯ ವಿದ್ಯಾಲಯ, ಲಲಿತ ಪ್ರೌಢಶಾಲೆ, ರೋಟರಿ ಬೃಂದಾ ವನ ಶಾಲೆ, ತರಳಬಾಳು ವಿದ್ಯಾಸಂಸ್ಥೆ, ಇಂದಿರಾ ಪ್ರೌಢಶಾಲೆ, ಮಹಾಬೋಧಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜೊತೆಗೆ ಕಾರ್ಯ ಕ್ರಮ ನಡೆಯುವ ಸ್ಥಳ ಹಾಗೂ ವಸತಿ ವ್ಯವಸ್ಥೆಯ ಸ್ಥಳದಲ್ಲಿ ಪಾಲಿಕೆ ವತಿಯಿಂದ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡ ಲಾಗುತ್ತಿದೆ. ಜೊತೆಗೆ ವಸತಿ ವ್ಯವಸ್ಥೆ ನೀಡುವ ಸಂಸ್ಥೆಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸುವ ಸಲುವಾಗಿ ಪ್ರತಿ ಸಂಸ್ಥೆಗೆ ಮುಂಗಡವಾಗಿ 20 ಸಾವಿರ ರೂ. ಪಾವತಿ ಮಾಡಲಾಗಿದೆ. ಮಕ್ಕಳಿಗೆ ಯಾವುದೇ ಅವ್ಯವಸ್ಥೆ ಕಾಡದಂತೆ ಎಲ್ಲಾ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ತಿಳಿಸಿದರು.

ಸಿಎಂ ಕುಮಾರಸ್ವಾಮಿ ಅವರಿಂದ ಉದ್ಘಾ ಟನೆ: ಡಿ.15ರಂದು ಬೆಳಿಗ್ಗೆ 11ಕ್ಕೆ ಮುಕ್ತ ವಿವಿಯ ಪ್ರಧಾನ ವೇದಿಕೆಯಲ್ಲಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾ ಟನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್ ಪಾಲ್ಗೊಳ್ಳ ಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಸಂಸದರಾದ ಪ್ರತಾಪ್ ಸಿಂಹ, ಆರ್. ಧ್ರುವನಾರಾಯಣ್, ಎಲ್.ಆರ್. ಶಿವರಾಮೇ ಗೌಡ ಸೇರಿದಂತೆ ಇನ್ನಿತರ ಜನಪ್ರತಿನಿಧಿ ಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಿಗೆ ಭಾಗವಹಿಸುವ ವಿದ್ಯಾರ್ಥಿ ಗಳನ್ನು ಅವರು ತಂಗಿರುವ ಸ್ಥಳದಿಂದ ಸ್ಪರ್ಧೆಗಳು ನಡೆಯುವ ಸ್ಥಳಗಳಿಗೆ ಕರೆದು ಕೊಂಡು ಹೋಗಲು ಮತ್ತು ವಾಪಸ್ ಕರೆ ತರಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಮಾಡ ಲಾಗಿದೆ. ಸ್ಪರ್ಧಿಗಳು ಜಿಲ್ಲಾ ಹಂತದಲ್ಲಿಯೇ ಸ್ಪರ್ಧೆಗಾಗಿ ಆನ್‍ಲೈನ್‍ನಲ್ಲಿ ನೋಂದಣಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಯಶಸ್ವಿಯಾಗಿ ಕಾರ್ಯ ಕ್ರಮ ನಡೆಸಲು www.pratibhakaranji.co.in ವೆಬ್‍ಸೈಟ್ ತೆರೆಯಲಾಗಿದೆ ಎಂದರು. ಜಿಪಂ ಸಿಇಓ ಕೆ.ಜ್ಯೋತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಸ್.ಮಮತ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »