ಡಿ.15, 16ರಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಮಾವೇಶ
ಮೈಸೂರು

ಡಿ.15, 16ರಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಮಾವೇಶ

December 13, 2018

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಡಿ.15 ಮತ್ತು 16ರಂದು ಆಯೋ ಜಿಸಿರುವ ಮೈಸೂರು ನಗರ ಮತ್ತು ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾ ಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ನಂಜನಗೂಡು ರಸ್ತೆಯ ಶ್ರೀ ಗಣ ಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಈ 2 ದಿನಗಳು ಸಮಾ ವೇಶ ನಡೆಯಲಿದೆ. ಡಿ.15ರಂದು ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪರಕಾಲ ಮಠದ ಶ್ರೀ ಸ್ವತಂತ್ರ ಅಭಿನವಗೀಶ ಬ್ರಹ್ಮತಂತ್ರ ಸ್ವತಂತ್ರ ಸ್ವಾಮೀಜಿ, ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕರಾದ ಎಸ್.ಎ.ರಾಮದಾಸ್, ಸುರೇಶ್‍ಕುಮಾರ್, ಕೆ.ವಿ. ನಾರಾಯಣಸ್ವಾಮಿ, ಯು.ಬಿ.ವೆಂಕಟೇಶ್, ಮಾಜಿ ಶಾಸಕ ವೈ.ಎಸ್.ವಿ.ದತ್ತ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಪಾಲ್ಗೊ ಳ್ಳಲಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಎರಡು ದಿನಗಳು ನಡೆಯುವ ಸಮಾವೇಶವು ಧಾರ್ಮಿಕ ಪೂಜಾ ಕೈಂಕರ್ಯದಿಂದ ಆರಂಭವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಗೋಷ್ಠಿಗಳು, ಚರ್ಚೆ, ಸಂವಾದ ಗಳು ನಡೆಯಲಿದ್ದು, ಡಿ.16ರ ಬೆಳಿಗ್ಗೆ 7.30ಕ್ಕೆ ಶೋಭಾಯಾತ್ರೆ ಏರ್ಪಡಿಸಿದ್ದು, ಶಂಕರಮಠದಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದವ ರೆಗೂ ಶೋಭಾಯಾತ್ರೆ ನಡೆಯಲಿದೆ.

ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ತ್ರಿಮತಸ್ಥ ಬ್ರಾಹ್ಮಣರು ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಒಗ್ಗಟ್ಟಿನ ಸಂದೇಶ ಸಾರುವ ಮೂಲಕ ಯಶಸ್ವಿಗೊಳಿಸಬೇಕಿದ್ದು, ಬೇರೆ ಬೇರೆ ಜಿಲ್ಲೆ ಯಿಂದ ಸಮುದಾಯದ ಬಂಧುಗಳು ಆಗಮಿಸಬಹುದು ಎಂದರು. ಸಮಾವೇಶದ ಕಾರ್ಯಾಧ್ಯಕ್ಷರಾದ ಗೋಪಾಲ್‍ರಾವ್, ಎಂ.ಕೃಷ್ಣ ದಾಸ್ ಪುರಾಣಿಕ್, ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಿಕೆ ಸದಸ್ಯರೂ ಆದ ಮಾ.ವಿ.ರಾಮಪ್ರಸಾದ್, ಖಜಾಂಚಿ ಅಪೂರ್ವ ಎನ್.ಸುರೇಶ್, ಸಮುದಾಯದ ಮುಖಂಡರಾದ ಎಂ.ಡಿ. ಪಾರ್ಥಸಾರಥಿ, ಅಜಯ್‍ಶಾಸ್ತ್ರಿ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »