ಮಹಾರಾಷ್ಟ್ರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಮತ್ತೆ 9 ಮೃತದೇಹ ಪತ್ತೆ, 11ಕ್ಕೇರಿದ ಸಾವಿನ ಸಂಖ್ಯೆ!
ಮೈಸೂರು

ಮಹಾರಾಷ್ಟ್ರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಮತ್ತೆ 9 ಮೃತದೇಹ ಪತ್ತೆ, 11ಕ್ಕೇರಿದ ಸಾವಿನ ಸಂಖ್ಯೆ!

August 26, 2020

ರಾಯಗಡ, ಆ.25- ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹದ್‍ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ ದುರಂತದಲ್ಲಿ ಅವಶೇಷಗಳಡಿಯಲ್ಲಿ ಮತ್ತೆ 9 ಮೃತ ದೇಹಗಳು ಪತ್ತೆಯಾಗಿದ್ದು ಇದರೊಂ ದಿಗೆ ಸಾವಿನ ಸಂಖ್ಯೆ 11ಕ್ಕೇರಿದೆ.

ಬಹುಮಹಡಿ ಕಟ್ಟಡ ಕುಸಿದು ಬೀಳು ತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾ ಚರಣೆ ನಡೆಸಿದ್ದು, ಗಾಯಗೊಂಡಿದ್ದ 18 ಮಂದಿಯನ್ನು ರಕ್ಷಣೆ ಮಾಡಿದ್ದರು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ 60ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಇದರಲ್ಲಿ 10 ವರ್ಷದ ಮಗು ಕೂಡ ಇದೆ ಎಂದು ಹೇಳಲಾಗು ತ್ತಿದೆ. ಕಟ್ಟಡದಲ್ಲಿ 45 ಫ್ಲ್ಯಾಟ್‍ಗಳಿದ್ದು, ಅವಶೇಷಗಳಡಿ ಸಿಲುಕಿಕೊಂಡಿದ್ದ 25 ಮಂದಿ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಇದೀಗ ಎನ್‍ಡಿ ಆರ್‍ಎಫ್ ಪಡೆಗಳು ಕೂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಘಟನೆ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿ ದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎನ್‍ಡಿಆರ್‍ಎಫ್ ಪಡೆಗಳೂ 25 ಮಂದಿಯನ್ನು ರಕ್ಷಣೆ ಮಾಡಿದ್ದು, ಘಟನೆಗೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

Translate »