ಮೈಸೂರಿನ ಪ್ರಮುಖ ವೃತ್ತದಲ್ಲಿ ದೇವರಾಜ ಅರಸು ಪ್ರತಿಮೆ ಸ್ಥಾಪನೆಗೆ ಕದಸಂಸ ಮನವಿ
ಮೈಸೂರು

ಮೈಸೂರಿನ ಪ್ರಮುಖ ವೃತ್ತದಲ್ಲಿ ದೇವರಾಜ ಅರಸು ಪ್ರತಿಮೆ ಸ್ಥಾಪನೆಗೆ ಕದಸಂಸ ಮನವಿ

August 26, 2020

ಮೈಸೂರು,ಆ.25(ವೈಡಿಎಸ್)-ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಪ್ರತಿಮೆಯನ್ನು ಮೈಸೂರು ನಗರದ ಪ್ರಮುಖ ವೃತ್ತದಲ್ಲಿ ಸ್ಥಾಪನೆ ಮಾಡಬೇಕು ಎಂದು ಕದಸಂಸ ರಾಜ್ಯ ಸರ್ಕಾರವನ್ನು ಮನವಿ ಮಾಡಿದೆ.

ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಬುದ್ಧವಾದ) ಜಿಲ್ಲಾ ಸಮಿತಿ ಮಂಗಳವಾರ ಆಯೋ ಜಿಸಿದ್ದ ಡಿ.ದೇವರಾಜ ಅರಸು 105ನೇ ಜಯಂತಿ ಅಂಗ ವಾಗಿ ವಂಚಿತ ಸಮುದಾಯಗಳ ಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ಅರಸು ಅವರು ಶೋಷಣೆಗೊಳಗಾದ ಸಮು ದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಹಗಲಿ ರುಳು ಶ್ರಮಿಸಿದ ಮಹಾನಾಯಕ. ಅಸ್ಪøಷ್ಯತೆಯಿಂದ ನರಳು ತ್ತಿದ್ದ ದಲಿತರಿಗೆ ಸಾಮಾಜಿಕ ಸಮಾನತೆ ದೊರಕುವಂತೆ ಮಾಡಿದರು. ಉಳುವವನೆ ಭೂಮಿ ಒಡೆಯ ಎಂಬ ಹಕ್ಕು ಕೊಡಿಸಿದರು. ರಾಜಕೀಯದಿಂದ ದೂರವಿದ್ದ ಹಿಂದುಳಿದ ವರ್ಗದವರಿಗೆ ಸ್ಥಾನ-ಮಾನ ಕೊಡಿಸಿದರು. ಅವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.

ದಸಂಸ ಹಿರಿಯ ನಾಯಕ ಹರಿಹರ ಆನಂದಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸಫಾಯಿ ಕರ್ಮ ಚಾರಿ ಜಾಗೃತಿ ಸಮಿತಿ ಸದಸ್ಯ ಕೆ.ನಂಜಪ್ಪ ಬಸವನಗುಡಿ, ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಜಾಗೃತಿ ಸಮಿತಿ ಸದಸ್ಯ ಹೆಚ್.ಬಿ.ದಿವಾಕರ್, ದಸಂಸ ಜಿಲ್ಲಾ ಸಂಚಾಲಕ ದೇವೇಂದ್ರ ಕೆ.ಎಂ.ವಾಡಿ ಮತ್ತಿತರರಿದ್ದರು.

ನಿರ್ಣಯಗಳು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ನಮೂದಿಸಿರುವ ಎಸ್‍ಸಿ, ಎಸ್‍ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸ ಬೇಕು. ಹುಟ್ಟಿನ ಕುರಿತ ದಾಖಲೆಯೇ ಇಲ್ಲದ, ರಸ್ತೆಬದಿ ಬದುಕುವ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಸರ್ಕಾರ ತಕ್ಷಣವೇ ವಾಸಿಸಲು ಮನೆ, ಮೂಲ ಸೌಲಭ್ಯ ಕಲ್ಪಿಸಬೇಕು ಎಂಬ ನಿರ್ಣಯಗಳನ್ನು ಕಾರ್ಯಕ್ರಮದ ನಂತರ ನಡೆದ ಸಭೆಯಲ್ಲಿ ಕೈಗೊಳ್ಳಲಾಯಿತು.

ನಿರ್ಗತಿಕ ಅಲೆಮಾರಿ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇವರ ಮಕ್ಕಳಿಗೆ ಸರ್ಕಾರವೇ ವಸತಿ ಶಾಲೆಗಳನ್ನು ಪ್ರತ್ಯೇಕವಾಗಿ ಆರಂಭಿಸಿ ಉನ್ನತ ಶಿಕ್ಷಣ ದವರೆಗೆ ಶಿಕ್ಷಣ ನೀಡಬೇಕು. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾ ವಂತ ಪದವಿ ಯುವಕ-ಯುವತಿಯರಿಗೆ ಸ್ಪರ್ಧಾ ತ್ಮಕ ಪರೀಕ್ಷಾ ಕೇಂದ್ರಗಳನ್ನು ಉಚಿತವಾಗಿ ಆರಂಭಿಸ ಬೇಕು. ಪೌರಕಾರ್ಮಿಕ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಸರ್ಕಾರವೇ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದೆ.

Translate »