ಆನ್‍ಲೈನ್ ಮದ್ಯ ಮಾರಾಟ ಪ್ರಸ್ತಾಪ ಕೈಬಿಡುವುದು ಸೇರಿ ಚಿಲ್ಲರೆ ಮದ್ಯ ಮಾರಾಟಗಾರರ ಸಮಸ್ಯೆ ಬಗೆಹರಿಸುವಂತೆ ಸಿಎಂಗೆ ಮನವಿ 
ಮೈಸೂರು

ಆನ್‍ಲೈನ್ ಮದ್ಯ ಮಾರಾಟ ಪ್ರಸ್ತಾಪ ಕೈಬಿಡುವುದು ಸೇರಿ ಚಿಲ್ಲರೆ ಮದ್ಯ ಮಾರಾಟಗಾರರ ಸಮಸ್ಯೆ ಬಗೆಹರಿಸುವಂತೆ ಸಿಎಂಗೆ ಮನವಿ 

August 26, 2020

ಮೈಸೂರು, ಆ.25(ಪಿಎಂ)- ಆನ್‍ಲೈನ್ ಮದ್ಯ ಮಾರಾಟದ ಪ್ರಸ್ತಾಪ ಕೈಬಿಡಬೇಕೆಂಬುದೂ ಸೇರಿ ದಂತೆ ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರಿಗೆ ಎದುರಾಗಿರುವ ಸಮಸ್ಯೆಗಳ ಬಗೆಹರಿಸಬೇಕೆಂದು ಆಗ್ರಹಿಸಿ ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿ ಗಳ ಸಂಘದ ವತಿಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಗಿದೆ.

ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ನಾಲ್ಕೈದು ದಶಕಗಳಿಂದ ಮದ್ಯ ಮಾರಾಟ ವೃತ್ತಿಯನ್ನೇ ಅವಲಂಬಿತರಾಗಿರುವ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಆನ್‍ಲೈನ್ ಮದ್ಯ ಮಾರಾಟದ ಪ್ರಸ್ತಾಪ ಕೈಬಿಡ ಬೇಕೆಂದು ಮನವಿಯಲ್ಲಿ ಕೋರಲಾಗಿದೆ.

5 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆ ವುಳ್ಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ `ಸಿಎಲ್-6ಎ’ ಮತ್ತು `ಸಿಎಲ್-7’ ಸನ್ನದುಗಳನ್ನು ಪ್ರಾರಂಭಿಸಲು ಅನುಮತಿ ನೀಡಿರು ವುದು ಉದ್ಯಮದಲ್ಲಿ ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕಲಿದೆ. ಜೊತೆಗೆ ಇದು ಸುಪ್ರಿಂಕೋರ್ಟ್‍ನ ನಿರ್ದೇ ಶನಗಳ ಸ್ಟಷ್ಟ ಉಲ್ಲಂಘನೆಯಾಗಲಿದೆ. ಹೀಗಾಗಿ ಈ ಸಂಬಂಧ ನೀಡಿರುವ ಆದೇಶವನ್ನು ರದ್ದು ಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ರಾಜ್ಯದಲ್ಲಿ ಲಾಕ್‍ಡೌನ್ ಪೂರ್ವದಲ್ಲಿ 759 ಎಂಎಸ್ ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಅನುವು ಮಾಡಲಾಗಿದೆ. ಜೊತೆಗೆ ಏಪ್ರಿಲ್ ನಂತರ 91 ಮಳಿಗೆ ಗಳನ್ನು ಆರಂಭಿಸಲಾಗಿದ್ದು, ಒಟ್ಟಾರೆ 850 ಮಳಿಗೆ ಆರಂಭಿಸಲಾಗಿದೆ. ಇದೀಗ ರಾಜ್ಯದಲ್ಲಿ 2 ಹಂತದಲ್ಲಿ 1,363 ಎಂಎಸ್‍ಐಎಲ್ ಮಳಿಗೆ ಆರಂಭಿಸಲು ನಿರ್ಧ ರಿಸಲಾಗಿದೆ. ಆದರೆ ಕೊರೊನಾದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಹೊಸದಾಗಿ ಮತ್ತೆ ಎಂಎಸ್‍ಐಎಲ್ ಮಳಿಗೆ ತೆರೆಯುವುದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿದೆ.

ಕೊರೊನಾ ಲಾಕ್‍ಡೌನ್‍ನಿಂದ ಆದ ನಷ್ಟದ ಕುರಿತು ಈಗಾಗಲೇ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಸಲ್ಲಿಸಿರುವ ಮನವಿಗೆ ಸರ್ಕಾರ ಕೂಡಲೇ ಸ್ಪಂದಿಸಿ, ಪರಿಹಾರ ನೀಡಬೇಕು. ಪ್ರತಿ ಸನ್ನದು ದಾರರು ತೆರಿಗೆ ಪಾವತಿಸಿದ ಮದ್ಯವನ್ನೇ ಮಾರಾಟ ಮಾಡುತ್ತಿದ್ದು, ಲಂಚ-ಮಾಮೂಲಿ ಹಣಕ್ಕಾಗಿ ಸನ್ನದುದಾರರಿಗೆ ತೊಂದರೆ ನೀಡದಂತೆ ಅಬಕಾರಿ ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಬೇಕು. ಸಿಎಲ್-9, ಸಿಎಲ್-7, ಸಿಎಲ್-4 ಸೇರಿದಂತೆ ಇನ್ನಿತರ ನಮೂನೆಯ ಸನ್ನದುಗಳಲ್ಲಿ ಆಹಾರದೊಂದಿಗೆ ಮದ್ಯ ಸರಬರಾಜು ಮಾಡಲು (ಮೂಲ ಸ್ವರೂಪದಲ್ಲೇ) ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

 

 

Translate »