5 ದಶಕ ಹಿಂದೆಯೇ ಜೆಎಸ್‍ಎಸ್ ಕಾಲೇಜಿನಲ್ಲಿ ಕನ್ನಡ-ಸಂಸ್ಕøತಿ ವಿಭಾಗ ಆರಂಭಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ
ಮೈಸೂರು

5 ದಶಕ ಹಿಂದೆಯೇ ಜೆಎಸ್‍ಎಸ್ ಕಾಲೇಜಿನಲ್ಲಿ ಕನ್ನಡ-ಸಂಸ್ಕøತಿ ವಿಭಾಗ ಆರಂಭಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ

August 26, 2020

ಮೈಸೂರು, ಆ.25(ಆರ್‍ಕೆಬಿ)- ಶ್ರೀ ಶಿವ ರಾತ್ರಿ ರಾಜೇಂದ್ರ ಸ್ವಾಮೀಜಿ 5 ದಶಕಗಳ ಹಿಂದೆಯೇ ಜೆಎಸ್‍ಎಸ್ ಕಾಲೇಜುಗಳಲ್ಲಿ ಕನ್ನಡ-ಸಂಸ್ಕøತಿ ವಿಭಾಗ ತೆರೆದಿದ್ದರು. ಜೆಎಸ್‍ಎಸ್ ಸಂಸ್ಥೆಯಲ್ಲಿ ಓದಿದ ನಾನು ಕನ್ನಡ ಸಂಸ್ಕøತಿ ಸಚಿವನಾದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ನೆನಪಿಸಿಕೊಂಡರು.

ಮೈಸೂರು ಶರಣ ಮಂಡಳಿಯಿಂದ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮೀಜಿ 105ನೇ ಜಯಂತಿ ಆಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಮೈಸೂರು ಪತ್ರಕರ್ತರ ಭವನದಲ್ಲಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಜನತಂತ್ರವಾದಿಗಳಾಗಿದ್ದ ಸ್ವಾಮೀಜಿ ಲಕ್ಷಾಂ ತರ ಮಂದಿಗೆ ಅನ್ನ, ಶಿಕ್ಷಣ, ಆರೋಗ್ಯ ದಾಸೋಹ ನಡೆಸಿದರು. ಗ್ರಾಮೀಣ ಭಾಗ ದಲ್ಲೂ ಕಾಲೇಜು, ಹಾಸ್ಟೆಲ್ ಆರಂಭಿಸಿ ದರು. ಅವರು ಹಾಕಿದ ಬುನಾದಿಯನ್ನು ಈಗಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮರ್ಥವಾಗಿ, ಅರ್ಥಪೂರ್ಣವಾಗಿ ಮುನ್ನ ಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಆದ ರ್ಶನಗಳೇ ನಮಗೆ ಆಶೀರ್ವಾದ ಎಂದರು.

ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ ಕರ್ತೃ ಸಿದ್ಧಾಂತಿ ಕೆ.ಜಿ.ಪುಟ್ಟಹೊನ್ನಯ್ಯ, ರಾಷ್ಟ್ರಪತಿ ಸೇವಾ ಪ್ರಶಸ್ತಿ ಪುರಸ್ಕøತ ಎಎಸ್‍ಪಿ ಅರುಣ್ ನಾಗೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ.ರಾಮು, ಪತ್ರ ಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರೊ.ಡಿ.ಎಸ್.ಸದಾಶಿವಮೂರ್ತಿ, ಮೈಸೂರು ಶರಣ ಮಂಡಳಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು.

Translate »