ಜೆಎಸ್‍ಎಸ್ ಸಂಸ್ಥೆಯಿಂದ ಮೃಗಾಲಯಕ್ಕೆ 1 ಲಕ್ಷ ರೂ. ದೇಣಿಗೆ
ಮೈಸೂರು

ಜೆಎಸ್‍ಎಸ್ ಸಂಸ್ಥೆಯಿಂದ ಮೃಗಾಲಯಕ್ಕೆ 1 ಲಕ್ಷ ರೂ. ದೇಣಿಗೆ

August 26, 2020

ಮೈಸೂರು, ಆ.25(ಎಂಟಿವೈ)- ಲಾಕ್‍ಡೌನ್‍ನಿಂದಾಗಿ ಆದಾಯವಿಲ್ಲದೆ ಕಷ್ಟಕ್ಕೆ ಸಿಲುಕಿರುವ ಮೈಸೂರು ಮೃಗಾ ಲಯದ ಪ್ರಾಣಿ-ಪಕ್ಷಿಗಳ ಪಾಲನೆಗೆ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ 105ನೇ ಜಯಂತಿಯಂದು ಜೆಎಸ್‍ಎಸ್ ಮಹಾಸಂಸ್ಥಾನದಿಂದ ಮಂಗಳವಾರ 1 ಲಕ್ಷ ರೂ. ದೇಣಿಗೆ ನೀಡಲಾಯಿತು. 10 ವರ್ಷಗಳಿಂದ ಈ ಕ್ರಮ ನಡೆದುಕೊಂಡು ಬರುತ್ತಿದೆ.

ಮೃಗಾಲಯದ ಆವರಣದಲ್ಲಿ ಮಂಗಳವಾರ ಜೆಎಸ್‍ಎಸ್ ಮಹಾವಿದ್ಯಾಪೀಠದ ಆಡಳಿತ ನಿರ್ದೇಶಕ ಶಂಕರಪ್ಪ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ರವಿ ಅವರಿಗೆ ಚೆಕ್ ಹಸ್ತಾಂತರಿಸಿದರು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾ ಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಉಪ ನಿರ್ದೇಶಕ ಬಿ.ನಿರಂಜನಮೂರ್ತಿ ಉಪಸ್ಥಿತರಿದ್ದರು.

ದತ್ತು ಸ್ವೀಕಾರ: ಮೃಗಾಲಯದ ಪ್ರಾಣಿ-ಪಕ್ಷಿಗಳ ಆರೈಕೆಗಾಗಿ ಸಾಕಷ್ಟು ದೇಣಿಗೆ ಬರುತ್ತಿದೆ. ಬೆಂಗಳೂರಿನ ನಂದಿನ ಲೇಔಟ್ ನಿವಾಸಿ ವಿ.ಚೈತ್ರ 1 ಲಕ್ಷ ರೂ. ದೇಣಿಗೆ ನೀಡಿ ಹೆಣ್ಣಾನೆ ಮರಿ `ವೇದಾವತಿ’ಯನ್ನು 1 ವರ್ಷದ ಅವಧಿಗೆ ದತ್ತು ಪಡೆದರು. ಮಂಡ್ಯದ ಅದಿತಿ ಮಲ್ಲೇಶ್ 3,500 ರೂ. ನೀಡಿ ಬಿಳಿ ನವಿಲು, ಮೈಸೂರಿನ ಶೆಟ್ಟಿ ಟ್ಯೂಷನ್ ಸೆಂಟರ್ 2 ಸಾವಿರ ರೂ ನೀಡಿ ಮ್ಯಾಂಡರಿನ್ ಡಕ್, ಸುಜಾತ ಆರ್.ಶೆಟ್ಟಿ 2 ಸಾವಿರ ರೂ. ನೀಡಿ ರೋಸ್ ರಿಂಗ್ಡ್ ಪಕ್ಷಿ, ಮಂಡ್ಯದ ಸಿ.ಆರ್.ಸುಧಾ 2 ಸಾವಿರ ರೂ. ಪಾವತಿಸಿ ಬಡ್ಜರಿಗಾರ್ ಪಕ್ಷಿಯನ್ನು 1 ವರ್ಷ ಅವಧಿಗೆ ದತ್ತು ಸ್ವೀಕರಿ ಸಿದ್ದಾರೆ. ಬಿ.ಬಿ.ಐಷ ಜೀವನಿಧಿ ವೃದ್ಧಾಶ್ರಮ 2 ಸಾವಿರ ರೂ. ನೀಡಿ ನಾಗರಹಾವು, ಪಿ.ಆರ್.ಶೆಟ್ಟಿ ಸ್ಮಾರಕ ಸಂಸ್ಥೆ 1 ಸಾವಿರ ರೂ. ನೀಡಿ ಲವ್ ಬರ್ಡ್ ದತ್ತು ಸ್ವೀಕರಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರ ಆಗಮನವಿಲ್ಲದೆ ಆದಾಯ ಗಳಿಕೆ ಕ್ಷೀಣಿಸಿದ್ದು, ಮೃಗಾಲಯದ ನಿರ್ವಹಣೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಜನಸಾಮಾನ್ಯರು ಸೇರಿದಂತೆ ಪ್ರಾಣಿಪ್ರಿಯರು ದೇಣಿಗೆ ನೀಡಿ ಮೃಗಾಲಯದ ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆ ಕೈಜೋಡಿಸಿ ದ್ದಾರೆ. ದೇಶ-ವಿದೇಶದಲ್ಲಿರುವ ವನ್ಯಪ್ರಾಣಿಪ್ರಿಯರು ಮೃಗಾ ಲಯಕ್ಕೆ ಆರ್ಥಿಕ ನೆರವು ಪಡೆಯಲು ಸಹಕಾರಿಯಾಗ ಲೆಂಬ ಉದ್ದೇಶದಿಂದಲೇ ಮೃಗಾಲಯ ಪ್ರಾಧಿಕಾರವು `ಝೂಸ್ ಆಫ್ ಕರ್ನಾಟಕ’ ಮೊಬೈಲ್ ಆ್ಯಪ್ ಪರಿಚಯಿಸಿದೆ.

Translate »