ಫೋರಂ ಮಾಲ್‍ನಲ್ಲಿ ನಾಳೆಯಿಂದ ಶೇ.50 ರಿಯಾಯಿತಿ ಮಾರಾಟ
ಮೈಸೂರು

ಫೋರಂ ಮಾಲ್‍ನಲ್ಲಿ ನಾಳೆಯಿಂದ ಶೇ.50 ರಿಯಾಯಿತಿ ಮಾರಾಟ

January 7, 2021

ಮೈಸೂರು,ಜ.6-ವಾರಾಂತ್ಯ ಶಾಪಿಂಗ್ ಮಾಡುವವರಿಗೆ ಶುಭ ಸುದ್ದಿ. ಮೈಸೂರಿನ ನಜರ್ ಬಾದ್‍ನಲ್ಲಿರುವ ಫೋರಂ ಮಾಲ್‍ನಲ್ಲಿ ನಾಳೆಯಿಂದ ಭಾನುವಾರದವರೆಗೆ ಶೇ.50ರ ರಿಯಾಯಿತಿ ಮಾರಾಟವಿದೆ. 3ನೇ ವಾರ್ಷಿ ಕೋತ್ಸವ ಪ್ರಯುಕ್ತ ಈ ರಿಯಾಯಿತಿ ಕೊಡುಗೆ ನೀಡಲಾಗಿದೆ. ನವನವೀನ ಬ್ರಾಂಡೆಡ್ ಉಡುಪು ಗಳು, ಪ್ರಸಾದನ ಸಾಮಗ್ರಿ, ಆಹಾರ, ಪುಸ್ತಕ, ಲೇಖನ ಸಾಮಗ್ರಿ ಮೊದ ಲಾದವು ಶೇ.50ರ ರಿಯಾಯಿತಿ ದರದಲ್ಲಿ ಲಭ್ಯವಿದೆ. ಜತೆಗೆ ಕುಟುಂಬ ಸಮೇತ ಶಾಪಿಂಗ್ ಮಾಡುವವರಿಗೆ ಭರಪೂರ ಮನರಂಜನೆಯೂ ಇದೆ. ಇದು ಹೊಸ ವರ್ಷಾರಂಭದ ಸಂಭ್ರಮವೂ ಆಗಿದೆ. ಹೆಚ್ ಅಂಡ್ ಎಂ, ಲೈಫ್‍ಸ್ಟೈಲ್, ಹೋಮ್ ಸೆಂಟರ್, ಮ್ಯಾಕ್ಸ್, ಪೆಪೆ ಜೀನ್ಸ್, ಙÂಮ್‍ಸನ್ ವಾಚಸ್, ರುವೋಷ್, ಹಷ್ ಪಪ್ಪೀಸ್, ಕ್ರಾಕ್ಸ್, ಅಲೆನ್‍ಸೋಲಿ, ಸೋಚ್, ಫಾರೆವರ್ ನ್ಯೂ, ಬಾಡಿ ಷಾಪ್ ಮೊದಲಾದ ಹೆಸರಾಂತ ಬ್ರಾಂಡ್ ಕಂಪನಿಗಳ ಬಹು ಆಯ್ಕೆ ವಸ್ತುಗಳ ಖರೀದಿಗೆ ಒಳ್ಳೆಯ ಅವಕಾಶವಿದೆ. ಫೋರಂ ಮಾಲ್ ಸಕುಟುಂಬ ಪರಿವಾರ ಸಮೇತ ಶಾಪಿಂಗ್ ಮಾಡುವವರಿಗೆ, ಜೊತೆಗೆ ವಾರಾಂತ್ಯದ ಭರಪೂರ ಖುಷಿ ನಿರೀಕ್ಷೆಯಲ್ಲಿರುವವರಿಗೆ ಅತ್ಯುತ್ತಮ ತಾಣವಾಗಿದೆ.

Translate »