ಸೋಂಕಿತ ಗರ್ಭಿಣಿಯರಿಗಾಗಿ ಆಕ್ಸಿಜನ್‍ಯುಕ್ತ 50 ಹಾಸಿಗೆ ವಾರ್ಡ್
ಮೈಸೂರು

ಸೋಂಕಿತ ಗರ್ಭಿಣಿಯರಿಗಾಗಿ ಆಕ್ಸಿಜನ್‍ಯುಕ್ತ 50 ಹಾಸಿಗೆ ವಾರ್ಡ್

May 27, 2021

 ಮೈಸೂರಿನ ತುಳಸಿದಾಸ್ ಆಸ್ಪತ್ರೆ ಮೊದಲ ಮಹಡಿಯಲ್ಲಿ ಪ್ರತ್ಯೇಕ ವಾರ್ಡ್‍ಗಾಗಿ ಸಿದ್ಧತೆ
 10 ದಿನದಲ್ಲಿ ವಾರ್ಡ್ ಸೇವೆಗೆ ಮುಕ್ತ; ಪೂರ್ವ ಸಿದ್ಧತೆ ಸಭೆ ನಡೆಸಿದ ಮುಡಾ ಅಧ್ಯಕ್ಷ ರಾಜೀವ್

ಕೊರೊನಾ ಮೊದಲ ಅಲೆ ಸಂದರ್ಭ 60 ವರ್ಷ ಮೇಲ್ಪಟ್ಟ ವರು, 2ನೇ ಅಲೆ ವೇಳೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ. ಈಗ 18 ವರ್ಷದವರಿಗೂ ಲಸಿಕೆ ನೀಡಲಾಗುತ್ತಿದೆ. ಉಳಿದವರು ಮಕ್ಕಳು. ಹಾಗಾಗಿ ಅವರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.-ಡಾ.ರಾಜೇಂದ್ರ ಕುಮಾರ್, ಚೆಲುವಾಂಬ ಆಸ್ಪತ್ರೆ ಆರ್‍ಎಂಒ

ದೊಡ್ಡವರಿಂದ ಮಕ್ಕಳಿಗೂ ಸೋಂಕು ಹರಡುತ್ತದೆ. ಹಾಗಾಗಿ ಹಿರಿಯರು ಮನೆಯಲ್ಲಿ ಮಕ್ಕಳಿಂದ ಸಾಧ್ಯವಾದಷ್ಟು ದೂರವಿರಬೇಕು. ಹೊರಗೆ ಹೊರಟಾಗ ತಪ್ಪದೇ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಅಂತರ ಕಾಯ್ದುಕೊಳ್ಳ ಬೇಕು. ಹೀಗೆ ಮಾಡಿದರೆ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಬಹುದು. -ಡಾ.ಮಂಜುನಾಥ್,ಅರವಳಿಕೆ ವಿಭಾಗದ ಮುಖ್ಯಸ್ಥ, ಮೈಸೂರು ಮೆಡಿಕಲ್ ಕಾಲೇಜು

ಮೈಸೂರು, ಮೇ 26(ವೈಡಿಎಸ್)- ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಆಕ್ಸಿಜನ್ ಯುಕ್ತ 50 ಹಾಸಿಗೆಗಳ ಪ್ರತ್ಯೇಕ ವಾರ್ಡ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜೆಎಲ್‍ಬಿ ರಸ್ತೆಯ ತುಳಸಿದಾಸ್ ಆಸ್ಪತ್ರೆಯಲ್ಲಿ ಪ್ರಸ್ತುತ ಆಕ್ಸಿಜನ್ ಸೌಲಭ್ಯದ 100 ಬೆಡ್‍ಗಳ ವ್ಯವಸ್ಥೆ ಇದೆ. ವಾರ್‍ರೂಂ ಮತ್ತು ಟ್ರಯಾಜ್ ಸೆಂಟರ್‍ನಿಂದ ಕಳುಹಿಸಿ ದವರನ್ನು ಇಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 60 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 90 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರೊಟ್ಟಿಗೆ ಸುಗಮ ಹೆರಿಗೆ ಉದ್ದೇಶದಿಂದ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ತುರ್ತು ಚಿಕಿತ್ಸೆ ನೀಡಲು ಆಕ್ಸಿಜನ್‍ಯುಕ್ತ 50 ಹಾಸಿಗೆ ಗಳ ವಾರ್ಡ್ ತೆರೆಯಲಾಗುತ್ತಿದೆ.

ಈ ಸಂಬಂಧ ಸೇಠ್ ಮೋಹನ್‍ದಾಸ್ ತುಳಸಿದಾಸ್ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ವಿವಿ ಮೊಹಲ್ಲಾದಲ್ಲಿನ ಹೆರಿಗೆ ಆಸ್ಪತ್ರೆಯು ಸೋಂಕಿರುವ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ ಚಿಕಿತ್ಸೆ ನೀಡುತ್ತಿದೆ. ಆದರೆ, ಬೆಡ್ ಕೊರತೆ ಮತ್ತು ಕೆಲಸದ ಒತ್ತಡ ಹೆಚ್ಚಾಗಿ ದ್ದರಿಂದ ತುಳಸಿದಾಸ್ ಆಸ್ಪತ್ರೆಯಲ್ಲಿ ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ. 10 ದಿನಗಳಲ್ಲಿ ಸೇವೆಗೆ ವಾರ್ಡ್ ಮುಕ್ತವಾಗಲಿದೆ ಎಂದರು.

ಆಸ್ಪತ್ರೆಯ ಮೊದಲ ಮಹಡಿಯಲ್ಲಿಯೇ ಆಪರೇಷನ್ ಥಿಯೇಟರ್, ನಾರ್ಮಲ್ ಡೆಲಿವರಿಗೆ ಲೇಬರ್ ರೂಮ್ ಸಿದ್ಧಪಡಿಸ ಲಾಗಿದೆ. ಪೆÇೀಸ್ಟ್ ಆಪರೇಷನ್ ವಾರ್ಡ್, ಹೆರಿಗೆ ಆದವರಿಗೆ ಐಸಿಯು ಬೆಡ್, ನವಜಾತ ಶಿಶುಗಳಿಗೆ ನ್ಯೂಯೊಡೆಲ್ ಮತ್ತು ಅದಕ್ಕೆ ಸಂಬಂಧಿಸಿದ ಮಿಷನರಿಗಳನ್ನು ಸರ್ಕಾರ ದಿಂದ ತರಿಸಿಕೊಳ್ಳುವ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

`ಬಿಲ್ಡರ್ ಅಸೋಷಿಯೇಷನ್ ಆಫ್ ಇಂಡಿಯಾ’ ಒಂದು ಪಿಎಸ್‍ಎ ಯುನಿಟ್ ಕೂಡ ಹಾಕಿಕೊಡಲಿದೆ. ಅದು ಇನ್ನೊಂದು ತಿಂಗಳಲ್ಲಿ ಆಗಲಿದೆ. ಸದ್ಯ ಸಂಗ್ರಹದಲ್ಲಿ ರುವ ಆಕ್ಸಿಜನ್ ಸಮರ್ಪಕವಾಗಿ 100 ಬೆಡ್ ಗಳಿಗೆ ಪೂರೈಸಬಹುದಾಗಿದೆ. ವೈದ್ಯರು, ನರ್ಸ್‍ಗಳ ನಿಯೋಜನೆ ಮತ್ತು ಬೆಡ್‍ಗಳ ನಿರ್ವಹಣೆ ಸಂಬಂಧ ಚರ್ಚೆ ಮಾಡ ಲಾಗುತ್ತಿದ್ದು, 10 ದಿನದೊಳಗಾಗಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ವಿವಿಪುರಂ ಹೆರಿಗೆ ಆಸ್ಪತ್ರೆಯನ್ನು ನಾನ್ ಕೋವಿಡ್ ಆಸ್ಪತ್ರೆ ಯಾಗಿ ಪರಿವರ್ತಿಸಲಾಗುವುದು ಎಂದರು.

ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಮಾತನಾಡಿ, ವಿವಿಪುರಂ ಹೆರಿಗೆ ಆಸ್ಪತ್ರೆಯಲ್ಲಿ 30 ಬೆಡ್‍ಗಳ ವ್ಯವಸ್ಥೆ ಮಾತ್ರ ಇದೆ. ನಿತ್ಯ 15ರಿಂದ 20 ಗರ್ಭಿಣಿ ಯರು ಬರುತ್ತಿದ್ದು, 2-3 ಹೆರಿಗೆ ಮಾಡಲಾಗು ತ್ತಿದೆ. ನಂತರ ಕನಿಷ್ಟ 1 ವಾರ ಇಲ್ಲಿಯೇ ಇರಬೇಕಾಗುತ್ತದೆ. ಗರ್ಭಿಣಿಯರ ಸಂಖ್ಯೆ ಹೆಚ್ಚಿದರೆ ನಾನ್ ಕೋವಿಡ್ ಆಸ್ಪತ್ರೆಯಾದ ಚೆಲುವಾಂಬದಲ್ಲಿ ಒಂದು ಪ್ರತ್ಯೇಕ ವಾರ್ಡ್ ಮಾಡಿ ಇರಿಸಲಾಗುತ್ತಿದೆ. ನಾನ್ ಕೋವಿಡ್ ಆಸ್ಪತ್ರೆಯಾಗಿರುವ ಚೆಲುವಾಂಬದಲ್ಲಿ ಪ್ರತಿದಿನ 15 ಸಿಜೇರಿಯನ್, 20 ರಿಂದ 25 ನಾರ್ಮಲ್ ಡೆಲಿವರಿ ಆಗುತ್ತಿವೆ ಎಂದರು.

ವಿವಿಪುರಂ ಹೆರಿಗೆ ಆಸ್ಪತ್ರೆಯ ಎಎಂಒ ಡಾ.ಕೆಂಪೇಗೌಡ ಮಾತನಾಡಿ, ನಮ್ಮ ಆಸ್ಪತ್ರೆ ಯಲ್ಲಿ 30 ಬೆಡ್‍ಗಳಿದ್ದು, 26 ದಿನಗಳಲ್ಲಿ ಕೋವಿಡ್ ಸೋಂಕಿತ 210 ಗರ್ಭಿಣಿಯರು ದಾಖಲಾಗಿದ್ದಾರೆ. 146 ಹೆರಿಗೆ ಆಗಿವೆ. ಅದರಲ್ಲಿ 64 ಸಿಜೇರಿಯನ್ ಇವೆ. ಒಬ್ಬರು ಮೃತಪಟ್ಟಿದ್ದಾರೆ. ಹೆರಿಗೆ ಬಳಿಕ 20 ಮಂದಿಯನ್ನು ಚೆಲುವಾಂಬದ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ. ಕೆಲವರು ಹೋಮ್ ಐಸೊಲೇಷನ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು. ಸ್ತ್ರೀರೋಗ ತಜ್ಞೆ ಡಾ.ಚಂದ್ರ ಕಲಾ, ಪ್ರಸೂತಿ ತಜ್ಞೆ ಡಾ.ಸುಧಾ, ಮುಡಾ ಕಾರ್ಯದರ್ಶಿ ಸವಿತಾ, ಮಕ್ಕಳ ತಜ್ಞ ಡಾ.ರಾಜೇಂದ್ರ ಕುಮಾರ್ ಇದ್ದರು.

9 ಮಕ್ಕಳಿಗೆ ಪಾಸಿಟಿವ್: ಚೆಲುವಾಂಬ ಆಸ್ಪತ್ರೆ ಆರ್‍ಎಂಓ ಡಾ.ರಾಜೇಂದ್ರ ಕುಮಾರ್ ಮಾತನಾಡಿ, ಹುಟ್ಟಿದ 24 ಗಂಟೆಯ ನಂತರ ನವಜಾತ ಶಿಶುಗಳಿಗೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ. 9 ಮಕ್ಕಳಿಗೆ ಪಾಸಿಟಿವ್ ಇದ್ದರೂ ಸೊಂಕಿನ ಲಕ್ಷಣ ಗಳು ಕಂಡು ಬಂದಿರಲಿಲ್ಲ. ಈಗ ಎಲ್ಲ ಮಕ್ಕಳೂ ಪೂರ್ಣ ಗುಣಮುಖರಾಗಿ ಮನೆ ಗಳಿಗೆ ತೆರಳಿದ್ದಾರೆ ಎಂದು ತಿಳಿಸಿದರು.

Translate »