ನಾಗಮಂಗಲದಲ್ಲಿ ಮೂವರು ಸರಗಳ್ಳರ ಬಂಧನ
ಮಂಡ್ಯ

ನಾಗಮಂಗಲದಲ್ಲಿ ಮೂವರು ಸರಗಳ್ಳರ ಬಂಧನ

May 27, 2021

ಮಂಡ್ಯ, ಮೇ 26(ಮೋಹನ್‍ರಾಜ್)- ಮೋಜು, ಮಸ್ತಿಗಾಗಿ ಹಣ ಹೊಂದಿಸಲು ಗ್ರಾಮೀಣ ಪ್ರದೇಶದ ನಿರ್ಜನ ಪ್ರದೇಶ ಗಳಲ್ಲಿ ಬೈಕ್‍ಗಳಲ್ಲಿ ಹಾಗೂ ನಡೆದುಕೊಂಡು ಹೋಗುವ ಒಂಟಿ ಮಹಿಳೆ ಹಾಗೂ ದಂಪತಿ ಗಳನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಸುಲಿಗೆ ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಸರಗಳ್ಳರನ್ನು ನಾಗಮಂಗಲ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಶ್ರೀನಗರದ ಎಸ್.ಕುಮಾರ (20), ಕುಮಾರಸ್ವಾಮಿ ಲೇಔಟ್‍ನ ವಿ.ಲಿಖಿತ್ (23) ಹಾಗೂ ಮಾಗಡಿ ರಸ್ತೆಯ ಪಿ.ನಿಖಿಲ್ (19) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಇನ್ನೂ ಮೂವ ರನ್ನು ಬಂಧಿಸಲು ತನಿಖೆ ಮುಂದುವರೆಸ ಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಎಂ.ಅಶ್ವಿನಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತರಿಂದ 300 ಗ್ರಾಂ ತೂಕದ ಸುಮಾರು 15 ಲಕ್ಷ ರೂ. ಮೌಲ್ಯದ ಚಿನ್ನಾ ಭರಣ, ಒಂದು ಪಲ್ಸರ್ ಬೈಕ್, ಒಂದು ಕೆಟಿಎಂ ಡ್ಯೂಕ್ ಬೈಕ್, ಒಂದು ಬಟನ್ ಚಾಕನ್ನು ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ 6, ಮೈಸೂರು ನಗರದಲ್ಲಿ 2, ಬೆಂಗಳೂರು ಜಿಲ್ಲೆಯಲ್ಲಿ 5, ಹಾಸನ ಜಿಲ್ಲೆಯಲ್ಲಿ 2, ಶಿವಮೊಗ್ಗದಲ್ಲಿ 1, ರಾಮನಗರದಲ್ಲಿ 2, ಕೋಲಾರದಲ್ಲಿ 3, ಕೆಜಿಎಫ್‍ನಲ್ಲಿ 1, ಚಿಕ್ಕಬಳ್ಳಾಪುರದಲ್ಲಿ 2, ತುಮ ಕೂರಿನಲ್ಲಿ 1 ಸೇರಿದಂತೆ ಒಟ್ಟು 26 ಪ್ರಕರಣ ಗಳು ದಾಖಲಾಗಿವೆ ಎಂದು ವಿವರಿಸಿದರು.

ಆರೋಪಿಗಳಾದ ಲಿಖಿತ್ ಹಾಗೂ ನಿಖಿಲ್‍ಗೆ ಮದ್ಯಪಾನ, ಹುಕ್ಕಾ ಸೇವನೆ, ಹುಡುಗಿ ಯರ ಚಟ ಸೇರಿದಂತೆ ಮುಂತಾದ ದುಶ್ಚಟ ಗಳಿಗೆ ದಾಸರಾಗಿದ್ದರು. ಇದಕ್ಕಾಗಿ ಹಣ ಹೊಂದಿಸಲು ಗ್ರಾಮೀಣ ಪ್ರದೇಶದ ಒಂಟಿ ಮಹಿಳೆಯರು ಹಾಗೂ ದಂಪತಿಗಳನ್ನು ಟಾರ್ಗೆಟ್ ಮಾಡಿಕೊಂಡು ಬೈಕ್‍ನಲ್ಲಿ ಹಿಂಬದಿ ಯಿಂದ ಹೋಗಿ ಅಡ್ಡಲಾಗಿ ನಿಲ್ಲಿಸಿ ಚಾಕು ತೋರಿಸಿ ಚಿನ್ನದ ಮಾಂಗಲ್ಯ ಸರಗಳನ್ನು ಕಿತ್ತುಕೊಳ್ಳುತ್ತಿದ್ದರು. ನಂತರ ಅದನ್ನು ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಮೋಜು, ಮಸ್ತಿ ಮಾಡುತ್ತಿ ದ್ದರು. ಆದರೆ ಇವರು ಮಾಂಗಲ್ಯವನ್ನು ದೇವರ ಹುಂಡಿಗೆ ಹಾಕಿ, ಸರವನ್ನು ಮಾತ್ರ ಮಾರಾಟ ಮಾಡುತ್ತಿದ್ದರು ಎಂದು ಎಸ್‍ಪಿ ಅಶ್ವಿನಿ ತಿಳಿಸಿದರು.

ಮತ್ತೊಬ್ಬ ಆರೋಪಿ ಕುಮಾರ್ ನಾಗಮಂ ಗಲ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಲ್ಲಿ ಭಾಗಿಯಾಗಿದ್ದನು. ಅಲ್ಲದೆ, ರಾಮ ನಗರ ಹಾಗೂ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಡುಗಿಯ ವಿಚಾರದಲ್ಲಿ ಭರತ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ರಾಮನಗರ ಜಿಲ್ಲಾ ಉಪ ಕಾರಾಗೃಹಲ್ಲಿದ್ದನು. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲವೂ ಬೆಳಕಿಗೆ ಬಂದಿತು ಎಂದರು.

ಏ.26ರಂದು ರಾತ್ರಿ 8.15ರ ಸಮಯ ದಲ್ಲಿ ನಾಗಮಂಗಲ ತಾಲೂಕಿನ ತುಪ್ಪದ ಮಡು ಗ್ರಾಮದ ಮಂಜೇಶ ಎಂಬುವರ ಪತ್ನಿ ಟಿ.ಸಿ.ಲಕ್ಷ್ಮೀ ನಾಗಮಂಗಲದಿಂದ ತಮ್ಮ ಗ್ರಾಮಕ್ಕೆ ಸ್ಕೂಟರ್‍ನಲ್ಲಿ ಹೋಗು ತ್ತಿದ್ದಾಗ ಮೂಡಲಕೊಪ್ಪಲು-ತುಪ್ಪದಮಡು ಗ್ರಾಮಗಳ ಗೇಟ್ ಮಧ್ಯೆ ಇರುವ ದೊಡ್ಡ ಅತ್ತಿಮರದ ಬಳಿ ಹೋಗುತ್ತಿದ್ದಾಗ ಕೆಟಿಎಂ ಡ್ಯೂಕ್ ಬೈಕ್‍ನಲ್ಲಿ ಬಂದ ಲಿಖಿತ್ ಹಾಗೂ ನಿಖಿಲ್ ಅಡ್ಡಗಟ್ಟಿ ಚಾಕು ತೋರಿಸಿ ಅವರ ಬಳಿ ಇದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಅವರ ಚಲನವಲನಗಳು ನಾಗಮಂಗಲದ ಒಂದು ಅಂಗಡಿಯಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದನ್ನು ಗಮನಿಸಿದ ಮುಖ್ಯ ಪೇದೆ ಎಂ.ಶ್ರೀನಿವಾಸ್, ತಮ್ಮ ಕರ್ತವ್ಯ ಮುಗಿಸಿಕೊಂಡು ತಾಲೂ ಕಿನ ದೇವಲಾಪುರ ಹ್ಯಾಂಡ್‍ಪೋಸ್ಟ್ ಹತ್ತಿರ ಅನುಮಾನಾಸ್ಪದವಾಗಿ ನಂಬರ್ ಪ್ಲೇಟ್ ಇಲ್ಲದ ಕೆಟಿಎಂ ಡ್ಯೂಕ್‍ಬೈಕ್‍ನಲ್ಲಿ ಬರುತ್ತಿದ್ದ ಇಬ್ಬರನ್ನು ನೋಡಿದ್ದಾರೆ. ಸಿಸಿಟಿವಿ ಯಲ್ಲಿ ನೈಕ್ ಬ್ರಾಂಡ್‍ನ ಟೀ ಶರ್ಟ್ ನಲ್ಲಿದ್ದ ರೈಟ್ ಮಾರ್ಕ್ ಮನಗಂಡಿದ್ದ ಪೇದೆ ಶ್ರೀನಿವಾಸ್, ಆ ಇಬ್ಬರನ್ನು ಹಿಡಿದು ವಿಚಾ ರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲ ಪೊಲೀಸ್ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ನಗದು ಬಹುಮಾನ ಘೋಷಿಸಿ ಪ್ರಶಂಸಿಸಲಾ ಯಿತು. ಗೋಷ್ಠಿಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ, ಡಿವೈಎಸ್ಪಿ ನವೀನ್‍ಕುಮಾರ್, ಸಿಪಿಐ ಕೆ.ಎನ್. ಸುಧಾಕರ್ ಇದ್ದರು.

Translate »