ಮೈಸೂರು ಡಿಸಿ `ಸ್ಪಂದನ’ ವಿಭಾಗದಲ್ಲಿ 506 ಅರ್ಜಿ ಬಾಕಿ
ಮೈಸೂರು

ಮೈಸೂರು ಡಿಸಿ `ಸ್ಪಂದನ’ ವಿಭಾಗದಲ್ಲಿ 506 ಅರ್ಜಿ ಬಾಕಿ

December 10, 2020

522 ಅರ್ಜಿ ಸಲ್ಲಿಕೆ; ಈವರೆಗೆ ಕೇವಲ 16 ದೂರು ಇತ್ಯರ್ಥ

ಶೀಘ್ರ ಕ್ರಮ ಕೈಗೊಳ್ಳುವಂತೆ ಇಲಾಖೆಗಳಿಗೆ ಎಡಿಸಿ ಸೂಚನೆ

ಮೈಸೂರು, ಡಿ.9(ಎಸ್‍ಪಿಎನ್)- ಮೈಸೂರು ಜಿಲ್ಲಾಧಿಕಾರಿಗಳ `ಸ್ಪಂದನ’ ವಿಭಾಗಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕಾಲಮಿತಿ ಯೊಳಗೆ ವಿಲೇವಾರಿ ಮಾಡದ ಅಧಿಕಾರಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು ವುದು ಎಂದು ಎಡಿಸಿ ಬಿ.ಎಸ್.ಮಂಜು ನಾಥಸ್ವಾಮಿ ತಿಳಿಸಿದರು.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು, ಜಿಲ್ಲಾಧಿಕಾರಿ ಗಳ ಸ್ಪಂದನ ವಿಭಾಗಕ್ಕೆ ಸಲ್ಲಿಕೆಯಾಗಿದ್ದ 522 ಅರ್ಜಿಗಳ ಪೈಕಿ 16 ಅರ್ಜಿಗಳು ವಿಲೇವಾರಿಯಾಗಿದ್ದು, ಇನ್ನೂ 506 ಅರ್ಜಿಗಳು ಬಾಕಿ ಉಳಿದಿವೆ. ಈ ಅರ್ಜಿಗಳ ವಿಲೇವಾರಿ ಬಗ್ಗೆ ನಿತ್ಯ ಜಿಲ್ಲಾ ವೆಬ್‍ಸೈಟ್ ವೀಕ್ಷಣೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತಿದೆ ಎಂದರು.

ಮೈಸೂರು ಜಿಲ್ಲಾ ಆರೋಗ್ಯ ಇಲಾಖೆಗೆ 1, ಲೀಡ್ ಬ್ಯಾಂಕ್ ಕಚೇರಿಗೆ 4, ಸೆಸ್ಕ್ ಮೈಸೂರು ವ್ಯವಸ್ಥಾಪಕ ನಿರ್ದೇಶಕ ಕಚೇರಿಗೆ 8, ಟಿ.ನರಸೀಪುರ ಬಿಇಓ ಕಚೇರಿಗೆ 1, ಆಹಾರ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ 4, ಭೂಗಣಿ ಇಲಾಖೆಗೆ 2, ಟಿಎಚ್‍ಓ ನಂಜನಗೂಡು ಕಚೇರಿಗೆ 1 ಅರ್ಜಿ ಸಲ್ಲಿಕೆಯಾಗಿದೆ. ಹುಣಸೂರು ತಹಸಿಲ್ದಾರ್ ಕಚೇರಿಗೆ 3, ಮೈಸೂರು ತಹಸಿಲ್ದಾರ್ ಕಚೇರಿಗೆ 45, ತಾಪಂ ಇಓ ಕಚೇರಿಗೆ 28, ನಂಜನಗೂಡು ತಹಸಿಲ್ದಾರ್ ಕಚೇರಿಗೆ 76, ತಾಲೂಕು ಇಓ ಕಚೇರಿಗೆ 40, ಪಿರಿಯಾ ಪಟ್ಟಣ ತಹಸಿಲ್ದಾರ್ ಕಚೇರಿಗೆ 61, ತಾಪಂ ಇಓ ಕಚೇರಿಗೆ 27, ಟಿ.ನರಸೀಪುರ ತಹಸಿಲ್ದಾರ್ ಕಚೇರಿಗೆ 39, ಇಓ ಕಚೇರಿಗೆ 19, ಕೆ.ಆರ್.ನಗರ ಇಓ ಕಚೇರಿಗೆ 1, ಸರಗೂರು ಇಓ ಕಚೇರಿಗೆ 1. ಎಡಿಎಲ್‍ಆರ್‍ನ ಮೈಸೂರು ಕಚೇರಿಗೆ 18, ನಂಜನ ಗೂಡು ಕಚೇರಿಗೆ 4, ಪಿರಿಯಾಪಟ್ಟಣ 7, ಡಿಡಿ ಹಿಂದುಳಿದ ವರ್ಗಗಳ ಇಲಾಖೆಗೆ 1 ಸೇರಿದಂತೆ ಇತರೆ ಇಲಾಖೆಗಳಿಗೆ ಸಲ್ಲಿಕೆಯಾಗಿದ್ದ ಒಟ್ಟು 522 ದೂರುಗಳನ್ನು ಆಯಾ ಇಲಾಖೆ ಮುಖ್ಯಸ್ಥರಿಗೆ ರವಾನಿಸಲಾಗಿದೆ ಎಂದು ತಿಳಿಸಿದರು.

`ಕಪ್ಪಸೋಗೆ ವಿಶೇಷಚೇತನ ಕೃಷಿಕ ಮಹೇಂದ್ರ’ ಹಾಗೂ ಎರಡೂ ಕಾಲು ಸ್ವಾಧೀನ ಇಲ್ಲದ ವಿಶೇಷಚೇತನ `ಬರಡನಪುರ ನಂಜಪ್ಪ’ ಅವರ ಸಮಸ್ಯೆ ಕುರಿತು `ಮೈಸೂರು ಮಿತ್ರ’ದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿಗೆ ಸ್ಪಂದಿಸಿದ ಎಡಿಸಿ, ಈ ಇಬ್ಬರೂ ವಿಶೇಷ ಚೇತನರ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮೈಸೂರು ಜಿಲ್ಲಾ ಕುಂದು-ಕೊರತೆ ನಿವಾರಣೆ ಕೋಶ `mಥಿsoಡಿe.ಟಿiಛಿ.iಟಿ’  ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿ ಸ್ವೀಕೃತಿ ಪಡೆಯಬಹುದು. ದೂರು ವಿಲೇವಾರಿ ಆದ ಬಗೆಗೂ ವೆಬ್‍ಸೈಟ್‍ನಲ್ಲೇ ಮಾಹಿತಿ ಪಡೆಯಬಹುದು ಎಂದು ಮಾಹಿತಿ ನೀಡಿದರು.

 

 

Translate »