ವಧುವಿಗೆ ಕೈಕೊಟ್ಟು ಪ್ರೇಯಸಿ ಮದುವೆಯಾದ ಯುವಕ
ಮೈಸೂರು

ವಧುವಿಗೆ ಕೈಕೊಟ್ಟು ಪ್ರೇಯಸಿ ಮದುವೆಯಾದ ಯುವಕ

December 10, 2020

ಮೈಸೂರು,ಡಿ.9(ಆರ್‍ಕೆ)- ಮದುವೆ ನಿಶ್ಚಯವಾಗಿದ್ದ ಯುವತಿಗೆ ಕೈಕೊಟ್ಟು ಮದುವೆಗೆ ಎರಡು ದಿನ ಮುಂಚೆಯೇ ಯುವಕನೋರ್ವ ಪ್ರೇಯಸಿಯೊಂದಿಗೆ ದೇವಸ್ಥಾನದಲ್ಲಿ ಮದುವೆಯಾಗಿರುವ ಪ್ರಸಂಗ ಮೈಸೂರಲ್ಲಿ ನಡೆದಿದೆ.

ಮೈಸೂರಿನ ಸುಣ್ಣದಕೇರಿ 3ನೇ ಕ್ರಾಸ್ ನಿವಾಸಿ ತಾಂಡೇಶ ಅವರ ಮಗ ಉಮೇಶ (29) ತಾನು ಪ್ರೀತಿಸುತ್ತಿದ್ದ ಯುವತಿ ಯೊಂದಿಗೆ ಮದುವೆ ಮಾಡಿಕೊಂಡು, ಮದುವೆ ನಿಶ್ಚಯವಾಗಿದ್ದ ಯುವತಿಗೆ ಆಘಾತ ಉಂಟುಮಾಡಿದ ಯುವಕ.

ಮೈಸೂರಿನ ಸುಣ್ಣದಕೇರಿಯ ಯುವತಿ ಯೊಂದಿಗೆ ಈ ಹಿಂದೆಯೇ ಗುರುಹಿರಿಯರೆಲ್ಲ ಸೇರಿ ನಿಶ್ಚಿತಾರ್ಥ ವನ್ನೂ ಮಾಡಿದ್ದರು. ಇಂದು (ಡಿ.9) ಮೈಸೂರಿನ ಕೆ.ಆರ್.ಮೊಹಲ್ಲಾದ ಶ್ರೀ ಮಹದೇಶ್ವರ ದೇವಸ್ಥಾನದ ಸಮು ದಾಯ ಭವನದಲ್ಲಿ ವಿವಾಹ ಮಹೋತ್ಸವವೂ ನಿಗದಿ ಯಾಗಿತ್ತು. ಇದಕ್ಕೆ ಸಿದ್ಧತೆಯೂ ನಡೆದಿತ್ತು. ಆದರೆ ಉಮೇಶ ಮದುವೆಗೆ ಎರಡು ದಿನ ಇರು ವಂತೆ ತಾನು ಈ ಹಿಂದೆ ಪ್ರೀತಿ ಸುತ್ತಿದ್ದ ಬನ್ನೂರು ಹೋಬಳಿಯ ಗ್ರಾಮವೊಂದರ ಯುವತಿಯೊಂದಿಗೆ ದೇವ ಸ್ಥಾನವೊಂದರಲ್ಲಿ ತಾಳಿಕಟ್ಟಿ ಮದುವೆಯಾಗಿ ರುವ ವಿಷಯ ತಿಳಿದು, ಮದುವೆ ಮಂಟಪ ದಲ್ಲಿ ಹಸೆಮಣೆ ಏರುವುದರಲ್ಲಿದ್ದ ವಧು ಮತ್ತು ಮನೆಯವರಿಗೆ ಆಘಾತವಾಯಿತು.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಕೆ.ಆರ್. ಠಾಣೆ ಇನ್‍ಸ್ಪೆಕ್ಟರ್ ಶ್ರೀನಿವಾಸ ಅವರು, ಖಾಸಗಿ ಬ್ಯಾಂಕೊಂ ದರಲ್ಲಿ ಕೆಲಸ ಮಾಡುತ್ತಿದ್ದ ಉಮೇಶ, ಕಳೆದ 4 ವರ್ಷಗಳಿಂದ ಅಲ್ಲೇ ಕೆಲಸ ಮಾಡು ತ್ತಿದ್ದ ಸಹೋದ್ಯೋಗಿ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಎಂದರು. ಸಬೂಬು ಹೇಳಿಕೊಂಡು ಕಾಲ ದೂಡು ತ್ತಿದ್ದ ಆತ, ಪ್ರೇಯಸಿಯೊಂದಿ ಗಿನ ಸಂಬಂಧವನ್ನು ಮರೆಮಾಚಿ ಸುಣ್ಣದಕೇರಿಯ ಮತ್ತೊಂದು ಹುಡುಗಿಯೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದ. ಈ ವಿಷಯ ತಿಳಿದ ಪ್ರೇಯಸಿ, ತಾನು ಆತನೊಂದಿಗೆ ತೆಗೆಸಿಕೊಂಡಿದ್ದ ಫೋಟೋ, ಮೆಸೇಜ್‍ಗಳ ವಿವಾಹ ನಿಶ್ಚಯ ವಾಗಿದ್ದ ಯುವತಿ ಪೋಷಕರಿಗೆ ತೋರಿಸಿ ದ್ದಳು ಎಂದು ಇನ್‍ಸ್ಪೆಕ್ಟರ್ ತಿಳಿಸಿದರು.

ಮದುವೆಯಾಗುವುದಾಗಿ ನಂಬಿಸಿ ತನಗೆ ಮೋಸ ಮಾಡಿದ್ದಲ್ಲದೆ, ಆ ವಿಷಯ ಮರೆ ಮಾಚಿ ಈಗ ಮತ್ತೊಬ್ಬ ಯುವತಿ ಯೊಂದಿಗೆ ವಿವಾಹವಾಗಲೆತ್ನಿಸಿದ್ದಾನೆ ಎಂದು ಪ್ರೇಯಸಿ ತಮ್ಮ ಠಾಣೆಗೂ ದೂರು ನೀಡಿದ್ದಳು. ಈ ಗೊಂದಲ ಉಂಟಾಗು ತ್ತಿದ್ದಂತೆಯೇ ವಿವಾಹ ನಿಶ್ಚಯವಾಗಿದ್ದ ವಧುವಿನ ಕಡೆಯವರು ಸೇರಿ ನ್ಯಾಯ ಪಂಚಾಯ್ತಿ ಮಾಡಿ, ಉಮೇಶ ಪ್ರೀತಿಸು ತ್ತಿದ್ದ ಯುವತಿಯೊಂದಿಗೆ ಮದುವೆ ಯಾಗಲು ಅವಕಾಶ ನೀಡಿದ ಹಿನ್ನೆಲೆ ಯಲ್ಲಿ ಅವರು 2 ದಿನ ಮುಂಚಿತವಾಗಿಯೇ ದೇವಸ್ಥಾನದಲ್ಲಿ ಮದುವೆಯಾದರು ಎಂದು ಶ್ರೀನಿವಾಸ ತಿಳಿಸಿದರು.

ನ್ಯಾಯ ಪಂಚಾಯ್ತಿ ಮಾಡುವಾಗ ಉಮೇಶ ಕಡೆಯವರು ಈಗಾಗಲೇ ನಿಶ್ಚಿ ತಾರ್ಥ, ಮದುವೆ ಸಿದ್ಧತೆಗೆ ಮಾಡಿದ್ದ ಖರ್ಚಿನ ಬಾಬ್ತು ಹಣವನ್ನು ಕೊಡಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಅವರು ಅದ ರಂತೆ ನಡೆದುಕೊಂಡಿಲ್ಲ ಎಂದು ವಧುವಿನ ತಂದೆ ಮಂಗಳವಾರ ದೂರು ನೀಡಿದ್ದಾರೆ ಎಂದ ಅವರು, ಈ ಸಂಬಂಧ ಎರಡೂ ಕಡೆಯವರನ್ನು ಕರೆಸಿ ವಿಚಾರಣೆ ನಡೆಸು ತ್ತಿದ್ದೇವೆ, ಇನ್ನೂ ಇತ್ಯರ್ಥವಾಗಿಲ್ಲ ಎಂದರು.

Translate »