ಮೈಸೂರಲ್ಲಿ ಬುಧವಾರ 524 ಪ್ರಕರಣ ದಾಖಲು
ಮೈಸೂರು

ಮೈಸೂರಲ್ಲಿ ಬುಧವಾರ 524 ಪ್ರಕರಣ ದಾಖಲು

January 13, 2022

ಮೈಸೂರು,ಜ.12(ಎಸ್‍ಪಿಎನ್)-ಮೈಸೂರು ಜಿಲ್ಲೆಯಲ್ಲಿ ಸತತ 5ನೇ ದಿನವೂ ಕೋವಿಡ್-19 ಸೋಂಕು ಹೆಚ್ಚಾ ಗಿದ್ದು, ಬುಧವಾರ 524 ಪ್ರಕರಣ ದೃಢಪಟ್ಟಿದೆ. ಅಲ್ಲದೆ 114 ಮಂದಿ ಗುಣಮುಖರಾಗಿದ್ದಾರೆ. ಇಂದು ಒಬ್ಬರು ಸಾವ ನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 1.82,725 ಮಂದಿಗೆ ಸೋಂಕು ತಗುಲಿದ್ದು, 1,78,018 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2,277 ಸಕ್ರಿಯ ಪ್ರಕರಣಗಳಿವೆ. ಇಂದು ಒಬ್ಬರು ಸಾವನ್ನಪ್ಪಿದ್ದು, ಈವರೆಗೆ 2,430 ಮಂದಿ ಸಾವನ್ನಪ್ಪಿದ್ಧಾರೆ.

ಜಿಲ್ಲೆಯಲ್ಲಿ 1-5 ವರ್ಷದೊಳಗೆ 4, 6-10 ವರ್ಷ ದೊಳಗೆ 4, 11-17 ವರ್ಷದೊಳಗೆ 60 ಪ್ರಕರಣ ಸೇರಿದಂತೆ ಒಟ್ಟು 68 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಹೆಚ್.ಡಿ.ಕೋಟೆ 4, ಹುಣಸೂರು 8, ಕೆ.ಆರ್.ನಗರ 6, ಮೈಸೂರು ನಗರ 442, ಮೈಸೂರು ತಾಲೂಕು 36, ನಂಜನಗೂಡು 9, ಪಿರಿಯಾಪಟ್ಟಣ 8, ಸಾಲಿಗ್ರಾಮ 2, ಸರಗೂರು 1, ತಿ.ನರಸೀಪುರ 8 ಸೇರಿದಂತೆ ಒಟ್ಟು 524 ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಟ್ಟು ಹೋಂ ಐಸೊಲೇಷನ್‍ನಲ್ಲಿ ಚಿಕಿತ್ಸೆ ಪಡೆದು 4,711 ಮಂದಿ 7 ದಿನ ಪೂರೈಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 101 ಮತ್ತು ಖಾಸಗಿ ಆಸ್ಪತ್ರೆಯಲ್ಲಿ 43 ಮಂದಿ ಹಾಗೂ ಸರ್ಕಾರಿ ಕೋವಿಡ್ ಕೇರ್ ಸೆಂಟರ್‍ನಲ್ಲಿ 38 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತೆಯೇ ಹೋಂ ಐಸೊಲೇಷನ್‍ನಲ್ಲಿ 2,095 ಮಂದಿ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 8,797 ಮಂದಿಗೆ ಕೋವಿಡ್-19 ಪರೀಕ್ಷೆಯಲ್ಲಿ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರು 524, ಕೊಡಗು 69, ಹಾಸನ 409, ಚಾಮ ರಾಜನಗರ 106, ಮಂಡ್ಯ 319, ಬಾಗಲಕೋಟೆ 13, ಬಳ್ಳಾರಿ 180, ಬೆಳಗಾವಿ 269, ಬೆಂಗಳೂರು ಗ್ರಾಮಾಂತರ 310, ಬೆಂಗಳೂರು ನಗರ 15,617, ಬೀದರ್ 111, ಚಿಕ್ಕಬಳ್ಳಾ ಪುರ 141, ಚಿಕ್ಕಮಗಳೂರು 87, ಚಿತ್ರದುರ್ಗ 86, ದಕ್ಷಿಣ ಕನ್ನಡ 519, ದಾವಣಗೆರೆ 137, ಧಾರವಾಡ 264, ಗದಗ 43, ಹಾವೇರಿ 14, ಕಲಬುರಗಿ 188, ಕೋಲಾರ 282, ಕೊಪ್ಪಳ 47, ರಾಯಚೂರು 91, ರಾಮನಗರ 135, ಶಿವಮೊಗ್ಗ 201, ತುಮಕೂರು 594, ಉಡುಪಿ 361, ಉತ್ತರಕನ್ನಡ 199, ವಿಜಯಪುರ 64, ಯಾದಗಿರಿ 10 ಪ್ರಕರಣ ಸೇರಿದಂತೆ 21,390 ಪ್ರಕರಣ ದಾಖಲಾಗಿದ್ದು, 1,541 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದು ವರೆಗೆ ಸೋಂಕಿತರ ಸಂಖ್ಯೆ 30,99,519ಕ್ಕೇರಿದೆ. 29,68, 002 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣ 93,099, ಇಂದು ರಾಜ್ಯದಲ್ಲಿ 10 ಮಂದಿ ಸಾವನ್ನಪ್ಪಿದ್ದು, 38,389 ಮಂದಿ ಸಾವನ್ನಪ್ಪಿದ್ದಾರೆ.

Translate »