ರಾಜ್ಯದಲ್ಲಿ 28 ಮಹಿಳೆಯರು ಸೇರಿ 56 ಮಂದಿಗೆ ಕೊರೊನಾ ಸೋಂಕು
ಮೈಸೂರು

ರಾಜ್ಯದಲ್ಲಿ 28 ಮಹಿಳೆಯರು ಸೇರಿ 56 ಮಂದಿಗೆ ಕೊರೊನಾ ಸೋಂಕು

May 9, 2020

ಸೋಂಕಿತರ ಸಂಖ್ಯೆ 761, ಹಸಿರು ವಲಯದಲ್ಲಿದ್ದ ಚಿತ್ರದುರ್ಗಕ್ಕೂ ಕೊರೊನಾ ಪ್ರವೇಶ
ಬೆಂಗಳೂರು, ಮೇ 8-ರಾಜ್ಯದಲ್ಲಿ ಶುಕ್ರವಾರ 28 ಮಹಿಳೆಯರು ಸೇರಿದಂತೆ 56 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು ಆತಂಕಕ್ಕೆಡೆ ಮಾಡಿದೆ. ಹಸಿರು ವಲಯದಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಮೂವರು ವೃದ್ಧರಿಗೆ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ. ಅಹಮದಾಬಾದ್‍ನಿಂದ ಒಂದೇ ಬಸ್‍ನಲ್ಲಿ ಬಂದ 33 ಜನರ ಪೈಕಿ ಚಿತ್ರದುರ್ಗದಲ್ಲಿ 64 ವರ್ಷ ವಯಸ್ಸಿನ ಮೂವರು ವೃದ್ಧರಿಗೆ ಸೋಂಕು ಪತ್ತೆಯಾ ಗಿದೆ. ಈ ಬಸ್‍ನಲ್ಲಿ ಬಂದವರು 18 ಮಂದಿ ಚಿತ್ರದುರ್ಗದಲ್ಲಿ ಮತ್ತು 15 ಮಂದಿ ತುಮ ಕೂರಿನಲ್ಲಿ ಇಳಿದಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ. ಇನ್ನುಳಿ ದಂತೆ ದಾವಣಗೆರೆಯಲ್ಲಿ 14, ಬೆಳಗಾವಿಯಲ್ಲಿ 11, ಉತ್ತರ ಕನ್ನಡದಲ್ಲಿ 12, ಬೆಂಗಳೂರಿನಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದು, ಇವರಲ್ಲಿ 5 ತಿಂಗಳ ಹೆಣ್ಣು ಮಗು, 3 ವರ್ಷದ ಇಬ್ಬರು ಬಾಲಕಿಯರು, 6, 8 ಮತ್ತು 9 ವರ್ಷದ ಬಾಲಕರು ಸೇರಿದ್ದಾರೆ. ಈವರೆಗೂ ಒಟ್ಟು 30 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ ಇಬ್ಬರು ಸೇರಿ ಒಟ್ಟು 12 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟಾರೆ 378 ಮಂದಿ ಗುಣಮುಖರಾಗಿ ಉಳಿದ 354 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Translate »