ತಿ.ನರಸೀಪುರ ತಾಲೂಕು ಆಡಳಿತದ ನಿರ್ಲಕ್ಷ್ಯ: ಲಾಕ್‍ಡೌನ್ ಉಲ್ಲಂಘನೆ
ಮೈಸೂರು ಗ್ರಾಮಾಂತರ

ತಿ.ನರಸೀಪುರ ತಾಲೂಕು ಆಡಳಿತದ ನಿರ್ಲಕ್ಷ್ಯ: ಲಾಕ್‍ಡೌನ್ ಉಲ್ಲಂಘನೆ

May 10, 2020

ತಿ.ನರಸೀಪುರ, ಮೇ 9(ಎಸ್‍ಕೆ)-ತಾಲೂಕು ಆಡಳಿತದ ನಿರ್ಲಕ್ಷ್ಯದ ನಡೆಯಿಂದಾಗಿ ವ್ಯಾಪಾರಸ್ಥರಲ್ಲಿ ಅಂಗಡಿ-ಮುಂಗಟ್ಟು ತೆರೆ ಯಲು ನಿಗದಿಪಡಿಸಿರುವ ಸಮಯದಲ್ಲಿ ಗೊಂದಲ ಉಂಟಾಗಿದೆ. ಇದರಿಂದ ಲಾಕ್‍ಡೌನ್ ನಿಯಮ ಉಲ್ಲಂಘನೆಯಾಗುತ್ತಿದೆ.

ತಾಲೂಕಿನಲ್ಲಿ ಲಾಕ್‍ಡೌನ್ ಸಡಿಲಗೊ ಳಿಸಿರುವ ತಾಲೂಕು ಆಡಳಿತ ವಾಣಿಜ್ಯ ಚಟು ವಟಿಕೆ ನಡೆಸಲು ಸಮಯ ನಿಗದಿಪಡಿ ಸುವ ವಿಷಯದಲ್ಲಿ ಎಡವಿದ್ದು, ದಿನಕ್ಕೊಂದು ಬದಲಾವಣೆ ಮೂಲಕ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಲ್ಲಿ ಗೊಂದಲ ಮೂಡಿದೆ.

ಪಟ್ಟಣದಲ್ಲಿ ಸೋಮವಾರದಿಂದ ಎಲ್ಲಾ ರೀತಿಯ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಶಾಸಕ ಅಶ್ವಿನ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ ವಾಣಿಜ್ಯೋದ್ಯಮಿಗಳ ಸಭೆ ನಡೆದ ವೇಳೆ ಬೆ.7ರಿಂದ ಮ.12ರವರೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಈ ಸಮಯ ದಲ್ಲಿ ವ್ಯಾಪಾರ ನಡೆಯುವುದಿಲ್ಲ ಎಂದು ವ್ಯಾಪಾರಿಗಳು ಮಾಡಿದ ಮನವಿ ಮೇರೆಗೆ ಬುಧವಾರ ನಡೆದ ಸಭೆಯಲ್ಲಿ ಬೆ.9ರಿಂದ ಮ.2ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಈ ಸಂಬಂಧ ತಾಲೂಕು ಆಡಳಿತ ವ್ಯಾಪಾರಸ್ಥರಿಗೆ ಯಾವುದೇ ಮಾಹಿತಿ ನೀಡ ದಿರುವುದರಿಂದ ಸಮಯ ನಿಗದಿ ಬಗ್ಗೆ ವ್ಯಾಪಾರಸ್ಥರು ಗೊಂದಲಕ್ಕೀಡಾಗಿದ್ದಾರೆ.

ಲಾಕ್‍ಡೌನ್ ಉಲ್ಲಂಘನೆ: ಹೊಸದಾಗಿ ನಿಗದಿಪಡಿಸಿರುವ ಸಮಯದ ಬಗ್ಗೆ ಅರಿ ವಿಲ್ಲದ ವ್ಯಾಪಾರಸ್ಥರು ಬೆಳಿಗ್ಗೆ 6 ಗಂಟೆ ಯಿಂದಲೇ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ತಾಲೂಕು ಆಡಳಿತದ ಯಾವುದೇ ಆದೇಶಗಳ ಪಾಲನೆ ಯಾಗುತ್ತಿಲ್ಲ. ಕೆಲವೊಂದು ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದ್ದರೂ ಸಹ ತಾಲೂಕು ಆಡಳಿತಕ್ಕೆ ಸೆಡ್ಡು ಹೊಡೆದು ಕೆಲ ವ್ಯಾಪಾರಿ ಗಳು ತಮ್ಮ ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಅವಕಾಶ ನಿರಾಕರಣೆಯಾಗಿರುವ ಟೀ ಕ್ಯಾಂಟೀನ್ ಹಾಗೂ ಪಾರ್ಲರ್‍ಗಳು ಸಹ ಯಾವುದೇ ಅಂಜಿಕೆಯಿಲ್ಲದೆ ರಾಜಾರೋಷ ವಾಗಿ ಅಂಗಡಿ ತೆರೆದು ವ್ಯವಹಾರದಲ್ಲಿ ತೊಡಗಿರುವುದು ಅಲ್ಲಲ್ಲಿ ಸಾಮಾನ್ಯವಾಗಿದೆ.

ಗಮನಹರಿಸದ ಪುರಸಭೆ: ಕೊರೊನಾ ಸೋಂಕು ನಿಯಂತ್ರಣದ ಹೊಣೆ ಹೊತ್ತಿ ರುವ ಪುರಸಭೆಯ ಮಾಸ್ಕ್ ಧರಿಸದವರ ಮೇಲೆ ದಂಡ ವಿಧಿಸುವ ಮೂಲಕ ಸಾಧನೆ ಮಾಡಿದಂತೆ ಬೀಗುವುದು ಬಿಟ್ಟರೆ ನಗರ ದಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘನೆ ಯಾಗುತ್ತಿರುವ ಕುರಿತು ಗಮನಹರಿಸದಿ ರುವುದು ವಿಪರ್ಯಸವೇ ಸರಿ.

ಪಾಲನೆಯಾಗದ ಮುನ್ನೆಚ್ಚರಿಕಾ ಕ್ರಮ: ತಾಲೂಕಿನಾದ್ಯಂತ ಲಾಕ್‍ಡೌನ್ ತುಸು ಸಡಿಲಿಕೆ ಯಾಗುತ್ತಿದ್ದಂತೆ ಜನರು ಬೇಕಾಬಿಟ್ಟಿ ಸಂಚರಿಸುತ್ತಿದ್ದಾರೆ. ಸಾರ್ವಜನಿಕ ರಿಂದಲೂ ಯಾವುದೇ ನಿಯಮಗಳ ಪಾಲನೆಯಾಗುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡುವುದಿರಲಿ, ಮಾಸ್ಕ್ ಧರಿಸದೇ ಅಡ್ಡಾಡುತ್ತಿರುವುದು ಆತಂಕ ಸೃಷ್ಟಿಸಿದೆ.

ಜವಳಿ ಅಂಗಡಿಗಳು ಹಾಗೂ ದಿನಸಿ ಅಂಗಡಿಗಳು ತಾಲೂಕು ಆಡಳಿತದ ಆದೇಶ ಪಾಲನೆ ಮಾಡದೇ ಗುಂಪು ಗೂಡಿಸಿ ಕೊಂಡು ವ್ಯಾಪಾರ ಮಾಡುತ್ತಿದ್ದು, ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಈ ಮೊದಲು ಪೆÇಲೀಸರು ಅರ್ಧ ಗಂಟೆಗೊಮ್ಮೆ ಗಸ್ತು ತಿರುಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಜೊತೆಗೆ ಸುಖಾಸುಮ್ಮನೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದವರಿಗೆ ಬಿಸಿ ಮುಟ್ಟಿಸುತ್ತಿ ದ್ದರು. ಆದರೆ ಈಗ ಅವರು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅಚ್ಚರಿ ಮೂಡಿ ಸಿದೆ. ಒಟ್ಟಾರೇ ಲಾಕ್‍ಡೌನ್ ಸಡಿಲ ಗೊಳ್ಳು ತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯ ದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಆತಂಕ ಮೂಡಿಸಿರುವ ಉದಾಹರಣೆಯನ್ನು ನೋಡಿ ತಾಲೂಕಿನ ಜನತೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

Translate »