ಜನವಸತಿ ಪ್ರದೇಶಕ್ಕೆ ನುಗ್ಗಿದ ಲಾರಿ: ಮನೆಗಳು ಜಖಂ
ಮೈಸೂರು ಗ್ರಾಮಾಂತರ

ಜನವಸತಿ ಪ್ರದೇಶಕ್ಕೆ ನುಗ್ಗಿದ ಲಾರಿ: ಮನೆಗಳು ಜಖಂ

May 10, 2020

ಹುಣಸೂರು, ಮೇ 9(ಕೆಕೆ)-ಪಾನಮತ್ತ ಚಾಲಕ ನೋರ್ವ ಜನವಸತಿ ಪ್ರದೇಶದ ಕಿರಿದಾದ ರಸ್ತೆ ಯಲ್ಲಿ ಲಾರಿ ನುಗ್ಗಿಸಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಸಂಜೆ ನಗರದಲ್ಲಿ ನಡೆದಿದೆ. ವೆಸ್ಟ್ ಬೆಂಗಾಲ್‍ನ ಮಾಂಜಿ ಎಂಬಾತ ಲಾರಿ (ಡಬ್ಲ್ಯೂಬಿ 41 ಡಿ9854)ಯಲ್ಲಿ ಅಕ್ಕಿ ತುಂಬಿಕೊಂಡು ಕೇರಳಕ್ಕೆ ಅನ್‍ಲೋಡ್ ಮಾಡಿ ವಾಪಸ್ಸಾಗುತ್ತಿದ್ದ. ಈ ವೇಳೆ ಪಾನಮತ್ತನಾಗಿದ್ದ ಚಾಲಕ ಮಾಂಜಿ, ನಗರದ ಮುಖ್ಯರಸ್ತೆಯಲ್ಲಿ ತೆರಳುವ ಬದಲು ದಾರಿ ತಪ್ಪಿ ನಗರದೊಳಗೆ ಪ್ರವೇಶಿ ಸಿದ್ದಾನೆ. ವೇಗದ ಚಾಲನೆಯಲಿದ್ದ ಹತ್ತು ಚಕ್ರದ ಭಾರೀ ವಾಹನ ಏಕಾಏಕಿ ನಗರದ ಲಕ್ಷ್ಮಿವಿಲಾಸ್ ಸರ್ಕಲ್ ಬಳಿಯ ಹಳೇ ತರಕಾರಿ ಮಾರುಕಟ್ಟೆಯ ಜನವಸತಿ ಪ್ರದೇಶದ ಕಿರಿದಾದ ರಸ್ತೆಗಿಳಿದಿದ್ದು, ವಾಹನ ನಿಯಂತ್ರಣಕ್ಕೆ ಅಳವಡಿಸಿದ್ದ ಕಲ್ಲುಗಳನ್ನು ಮುರಿದುಕೊಂಡು ಮನೆಗಳತ್ತ ನುಗ್ಗಿದೆ. ಇದರಿಂದ ಐದಾರು ಮನೆಗಳು ಜಖಂಗೊಂಡಿವೆ. ಲಾಕ್‍ಡೌನ್ ಹಿನ್ನೆಲೆ ಜನರು ಇಲ್ಲದಿದ್ದರಿಂದ ಭಾರೀ ಅಪಾಯ ತಪ್ಪಿದ್ದು, ಸಾವು ನೋವುಗಳು ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿದ ನಗರ ಠಾಣೆ ಪೆÇಲೀಸರು ಲಾರಿ ಸಮೇತ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »