ಮೈಸೂರು ಜಿಲ್ಲೆಯಲ್ಲಿ `ವಿದ್ಯಾಗಮ’ ಶೇ.60 ಅನುಷ್ಠಾನ
ಮೈಸೂರು

ಮೈಸೂರು ಜಿಲ್ಲೆಯಲ್ಲಿ `ವಿದ್ಯಾಗಮ’ ಶೇ.60 ಅನುಷ್ಠಾನ

August 10, 2020

ಮೈಸೂರು, ಆ.9(ಎಸ್‍ಪಿಎನ್)- ಜಿಲ್ಲಾ ದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿ ಯಾದ ಬೆನ್ನಲ್ಲೇ, ಅದೇ ಮಾದರಿಯಲ್ಲಿ `ವಿದ್ಯಾಗಮ’ ಯೋಜನೆ ಅನುಷ್ಠಾನಗೊಳಿ ಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾ ಗಿದೆ. ಕೋವಿಡ್-19 ಭೀತಿ ಮತ್ತು ಜಿಟಿ ಜಿಟಿ ಮಳೆಯ ಕಾಟದ ನಡುವೆಯೂ ಜಿಲ್ಲೆ ಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆಗಸ್ಟ್ ತಿಂಗಳಲ್ಲಿ ಚುರುಕು ಪಡೆದುಕೊಂಡಿವೆ.

ಕಳೆದ 4 ತಿಂಗಳಿಂದ ಪಾಠ-ಪ್ರವಚನ ವಿಲ್ಲದೆ ಸುಮ್ಮನೆ ದಿನದೂಡುತ್ತಿದ್ದ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು, ಇದೀಗ ತಮ್ಮ ಮನೆ ಮುಂದಿನ ವರಾಂಡ, ಪಡಸಾಲೆ, ಅರಳಿ ಕಟ್ಟೆ ಹಾಗೂ ಸಮು ದಾಯ ಭವನ, ದೇವಸ್ಥಾನ ಆವರಣ ಹಾಗೂ ಚಂದನ ಟಿವಿ ಹಾಗೂ ಇಲಾಖೆಯ ಯೂಟ್ಯೂಬ್ ಚಾನಲ್ ಮೂಲಕ ಪಾಠ ಕೇಳುತ್ತಿದ್ದಾರೆ. ಇದರ ಮೇಲುಸ್ತುವಾರಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ.

ಪ್ರವಾಹ ಪೀಡಿತ ಗ್ರಾಮಗಳನ್ನು ಹೊರತುಪಡಿಸಿ, ಇತರೆ ಗ್ರಾಮಗಳಲ್ಲಿ ಶೈಕ್ಷ ಣಿಕ ಚಟುವಟಿಕೆಗಳು ಶೇ.60ರಿಂದ 65ರಷ್ಟು ಅನುಷ್ಠಾನಗೊಂಡಿವೆ. ಇದರ ಮೇಲುಸ್ತು ವಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಣ ಸಮನ್ವಯಾಧಿಕಾರಿಗಳಿಗೆ ವಹಿಸ ಲಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿಯೂ ಶೈಕ್ಷಣಿಕ ಚಟುವಟಿಕೆ ಚುರುಕು ಪಡೆಯಲು ಸಾಧ್ಯವಾಗಿದೆ ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್, ವಿದ್ಯಾಗಮ ಯೋಜನೆ ಯಶಸ್ವಿಯಾಗಿಸಿ ಎಂದು ಕೆಲ ದಿನಗಳ ಹಿಂದೆ ಸೂಚನೆ ನೀಡಿದ ಬಳಿಕ ಎಚ್ಚೆತ್ತ ಅಧಿಕಾರಿ ಗಳು ಕ್ರಮಕ್ಕೆ ಮುಂದಾದರು. ಮೈಸೂರು ಜಿಲ್ಲೆಯಲ್ಲಿ ವಿದ್ಯಾಗಮ ಯೋಜನೆ ಅನು ಷ್ಠಾನಕ್ಕೆ ಅಗತ್ಯ ಸಂಖ್ಯೆಯ ಶಿಕ್ಷಕರ ಮನ ವೊಲಿಸುವಲ್ಲಿ ಬಿಇಒಗಳು ಯಶಸ್ವಿಯಾಗಿ ದ್ದಾರೆ. ಅಲ್ಲದೆ, ಕ್ಲಸ್ಟರ್ ಮಟ್ಟದಲ್ಲಿ ಉಚಿತ ಪಠ್ಯಪುಸ್ತಕಗಳ ವಿತರಣೆ ಕಾರ್ಯವೂ ಶೇ.90ರಷ್ಟು ಮುಗಿದಿದೆ. ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯೂ ಆರಂಭ ಗೊಂಡಿದೆ ಎಂದು ಮಾಹಿತಿ ನೀಡಿದರು.

ಎಸ್‍ಎಟಿಎಸ್‍ನಲ್ಲಿ ಅಪ್‍ಲೋಡ್: ಹಿಂದಿನ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಇಲ್ಲದೇ ತೇರ್ಗಡೆಯಾಗಿದ್ದು, ಮುಂದಿನ ತರಗತಿ ಗಳಿಗೆ ಬಡ್ತಿ ಪಡೆದಿದ್ದಾರೆ. ಆ ವಿದ್ಯಾರ್ಥಿ ಗಳ ದಾಖಲಾತಿ ಎಸ್‍ಎಟಿಎಸ್ ತಂತ್ರಾಂಶ ದಲ್ಲಿ ಅಪ್‍ಲೋಡ್ ಮಾಡಲಾಗುತ್ತಿದೆ ಎಂದರು. ಹುಣಸೂರು ತಾಲೂಕಿನ ವಿದ್ಯಾ ಗಮಾ ಯೋಜನೆಯ ನೋಡೆಲ್ ಅಧಿಕಾರಿ ಪ್ರತಿಮಾ ಮಾತನಾಡಿ, ಹುಣಸೂರು ತಾಲೂಕಿನ ಬಹುತೇಕ ಶಾಲೆಗಳಲ್ಲಿ ಶೈಕ್ಷ ಣಿಕ ಚಟುವಟಿಕೆಗಳು ಆರಂಭವಾಗಿದ್ದು, ತಾಲೂಕಿನ ದೇವಗಳ್ಳಿ ಶಾಲೆಯ ಶಿಕ್ಷಕ ರೊಬ್ಬರು ಜೂನ್‍ನಿಂದಲೂ (ಕೋವಿಡ್ ನಿಯಮಗಳನ್ನು ಪಾಲಿಸಿ) ವಿದ್ಯಾರ್ಥಿಗಳಿಗೆ ಪಾಠಗಳನ್ನು ನಡೆಸುತ್ತಿದ್ದಾರೆ. ಈ ಕಾರ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಗಮನ ಸೆಳೆದಿದೆ. ಅಲ್ಲದೆ, ಪ್ರವಾಹ ಪೀಡಿತ ಹಾಗೂ ಹಾಡಿಗಳಲ್ಲಿ ಮಾತ್ರ ವಿದ್ಯಾಗಮ ಯೋಜನೆ ಅನುಷ್ಠಾನದಲ್ಲಿ ಹಿನ್ನಡೆಯಾಗು ತ್ತಿರುವ ಬಗ್ಗೆ ಮಾಹಿತಿ ನೀಡಿದರು.

Translate »