ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ
ಮೈಸೂರು

ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

August 10, 2020

ಮೈಸೂರು,ಆ.9(ಆರ್‍ಕೆಬಿ)-ಚಾಮರಾಜ ಕ್ಷೇತ್ರ ವ್ಯಾಪ್ತಿಯ 2 ಉದ್ಯಾನಗಳನ್ನು 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮ ಗಾರಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು.

ಶಾಸಕರ ವಿವೇಚನಾ ನಿಧಿ ಎಸ್‍ಎಫ್‍ಸಿ ಯೋಜನೆ ಅನುದಾನ ದಲ್ಲಿ 2ನೇ ವಾರ್ಡ್‍ನ ಮಹಾಲಕ್ಷ್ಮಿ ಸ್ವೀಟ್ಸ್ ಮುಂಭಾಗದ ಉದ್ಯಾನ ಹಾಗೂ ಉಮಾಮಹೇಶ್ವರಿ ದೇವಸ್ಥಾನ ಮುಂಭಾಗದ ಉದ್ಯಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಎರಡೂ ಉದ್ಯಾನಗಳ ಅಭಿವೃದ್ಧಿಗೆ ನೀಡಿದ ಅನುದಾನ ಸಾಲದೇ ಇದ್ದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನು ದಾನದಲ್ಲಿ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡಲಾಗುವುದು. ವಾರ್ಡ್‍ನಲ್ಲಿ ಅಗತ್ಯವಾಗಿರುವ ಅಭಿವೃದ್ಧಿ ಕೆಲಸಗಳಿಗೂ ಅನು ದಾನ ನೀಡಲಾಗುವುದು ಎಂದರು.

ಈ ವೇಳೆ ಪಾಲಿಕೆ ಸದಸ್ಯೆ ಪ್ರೇಮಾ ಶಂಕರೇಗೌಡ, ಮಾಜಿ ಉಪ ಮೇಯರ್ ಮಹದೇವಪ್ಪ, ಬಿಜೆಪಿ ಚಾಮರಾಜ ಕ್ಷೇತ್ರ ಸಮಿತಿ ಅಧ್ಯಕ್ಷ ಸೋಮಶೇಖರರಾಜು, ಯುವಮೋರ್ಚಾ ನಗರ ಅಧ್ಯಕ್ಷ ಕಿರಣ್‍ಗೌಡ, ಉಪಾಧ್ಯಕ್ಷ ಕುಮಾರ್‍ಗೌಡ, ಪ್ರಧಾನ ಕಾರ್ಯ ದರ್ಶಿ ಪುನೀತ್, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ, ಮುಖಂಡರಾದ ಚಿಕ್ಕವೆಂಕಟ, ಬೋರೇಗೌಡ, ಜಯಪ್ಪ, ಶ್ರೀಧರ್, ಕಾಳಿಂಗೇಗೌಡ, ನಟರಾಜು, ಶಿವರಾಂ, ಪುಷ್ಪಾ, ಗೀತಾ, ಶೋಭಾ, ಪದ್ಮಾ, ಕಿರಣ್ ಸುಖಧರೆ ಇನ್ನಿತರರಿದ್ದರು.

Translate »