ಕಾವಾ ಹಳೆ ವಿದ್ಯಾರ್ಥಿಗಳಿಂದ ಸಂಚಾರ ಪೊಲೀಸರು, ವಾಹನ ಸವಾರರಿಗೆ 600 ಮಾಸ್ಕ್ ಉಚಿತ ವಿತರಣೆ
ಮೈಸೂರು

ಕಾವಾ ಹಳೆ ವಿದ್ಯಾರ್ಥಿಗಳಿಂದ ಸಂಚಾರ ಪೊಲೀಸರು, ವಾಹನ ಸವಾರರಿಗೆ 600 ಮಾಸ್ಕ್ ಉಚಿತ ವಿತರಣೆ

July 19, 2020

ಮೈಸೂರು, ಜು.18(ಎಂಟಿವೈ)- ಕೊರೊನಾ ಸೋಂಕಿತರ ಸಂಖ್ಯೆ ನಗರ ದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂ ರಿನ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜು (ಕಾವಾ) ಹಳೆ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಮೈಸೂರು-ಬೆಂಗಳೂರು ಮುಖ್ಯರಸ್ತೆಯ ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ಮಾಸ್ಕ್ ವಿತರಿಸಲಾಯಿತು.

ಕೊರೊನಾ ಹರಡುವುದನ್ನು ತಡೆ ಯಲು ಮಾಸ್ಕ್ ಕಡ್ಡಾಯಗೊಳಿಸಿದ್ದರೂ ಕೆಲವರು ಮಾಸ್ಕ್ ಧರಿಸದೇ ಓಡಾಡು ತ್ತಿದ್ದಾರೆ. ಹಾಗಾಗಿ ಸಂಚಾರ ಪೊಲೀಸರ ಜತೆಗೂಡಿ ವಾಹನ ಸವಾರರಿಗೆ ಉಚಿತ ವಾಗಿ `ಕೊರೊನಾ ವಾರಿಯರ್ಸ್‍ಗೆ ನಮ್ಮ ಬೆಂಬಲ’ ಎಂಬ ಘೋಷಣೆಯೊಂದಿಗೆ ಮಾಸ್ಕ್ ವಿತರಿಸಲಾಯಿತು ಎಂದು ಕಾವಾ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು ತಿಳಿಸಿದರು.

ಬೆಂಗಳೂರಿನ ಗಾರ್ಮೆಂಟ್ಸ್‍ವೊಂದರ ಸಹಯೋಗದಲ್ಲಿ ವಾಹನ ಸವಾರರಿಗೆ 500ಕ್ಕೂ ಹೆಚ್ಚು ಹಾಗೂ ಕೊರೊನಾ ವಾರಿಯರ್ಸ್‍ಗಳಾದ ಪೊಲೀಸರಿಗೆ ಉತ್ತಮ ಗುಣಮಟ್ಟದ ಹಾಗೂ ಮರು ಬಳಕೆ ಮಾಡಬಹುದಾದ 100 ಮಾಸ್ಕ್ ಗಳನ್ನು ವಿತರಿಸಿ ಜಾಗೃತಿ ಮೂಡಿಸ ಲಾಯಿತು ಎಂದು ಹಳೆಯ ವಿದ್ಯಾರ್ಥಿ ಗಳು ತಿಳಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಚಾಂದಿನಿ, ಕಾರ್ಯದರ್ಶಿ ಸೂರ್ಯ, ಸಹ ಕಾರ್ಯ ದರ್ಶಿ ಅನಿಲ್, ಖಜಾಂಚಿ ರಾಥೋಡ್ ಮತ್ತಿತರರು ಹಾಜರಿದ್ದರು.

Translate »