ಮೈಸೂರು,ಜು.18(ಆರ್‍ಕೆ)- ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ದಲ್ಲಿ ಜು.20 (ಸೋಮವಾರ) ದೇವರ ದರ್ಶನ ರದ್ದುಪಡಿಸಲಾಗಿದೆ. ಆಷಾಢ ಮಾಸದ ಕಡೇ ದಿನವಾದ ಸೋಮವಾರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇರುವು ದರಿಂದ ಮುಂಜಾಗ್ರತಾ ಕ್ರಮವಾಗಿ ಜು.20ರಂದು ಚಾಮುಂಡೇಶ್ವರಿ ದೇವ ಸ್ಥಾನದಲ್ಲಿ ದೇವರ ದರ್ಶನವನ್ನು ರದ್ದುಪಡಿಸಿ ಜಿಲ್ಲಾಧಿಕಾರಿಗಳು ಜುಲೈ 16ರಂದು ಆದೇಶ ಹೊರಡಿಸಿದ್ದಾರೆ.
ಜೂನ್ 6ರ ಆದೇಶದ ಪ್ರಕಾರ ಪ್ರತಿ ಶನಿವಾರ, ಭಾನುವಾರ ಹಾಗೂ ಸಾರ್ವ ತ್ರಿಕ ರಜಾ ದಿನಗಳಂದು ಸಾರ್ವಜನಿ ಕರ ಪ್ರವೇಶ ನಿಷೇಧ ಮುಂದುವರೆ ದಿರುವುದರಿಂದ ಆ ದಿನಗಳಂದು ತುರ್ತು ಸೇವಾ ವಾಹನ ಮತ್ತು ಗ್ರಾಮಸ್ಥರ ವಾಹನ ಹೊರತುಪಡಿಸಿ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳನ್ನು ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧಿಸ ಲಾಗಿದೆ. ತಕ್ಷಣದಿಂದ ಜಾರಿಗೆ ಬರು ವಂತೆ ಚಾಮುಂಡಿಬೆಟ್ಟ ಹಾಗೂ ಉತ್ತನ ಹಳ್ಳಿ ದೇವಾಲಯದಲ್ಲಿ ದೇವಾಲಯ ಹಾಗೂ ದಾನಿಗಳಿಂದ ಪ್ರಸಾದ ವಿತರಿ ಸುವುದನ್ನೂ ನಿಷೇಧಿಸಲಾಗಿದ್ದು, ಅಲ್ಲಿನ ಧಾರ್ಮಿಕ ಕಾರ್ಯಕ್ರಮಗಳನ್ನು ಅರ್ಚ ಕರು ಮಾತ್ರ ನೆರವೇರಿಸುವರು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.