ಬೆಂಗಳೂರು, ಜು.16 (ಕೆಎಂಶಿ)- ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೌನ ವಹಿಸಿದೆ. ಕೋವಿಡ್-19 ನಿಯಂತ್ರಣದಲ್ಲಿ ಮಗ್ನವಾಗಿರುವ ಸರ್ಕಾರ, ಪ್ರಸಕ್ತ ವರ್ಷ ದಸರಾ ಆಚರಿಸುವ ಸಂಬಂಧ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಕ್ಟೋಬರ್ 17ರಿಂದ ದಸರಾ ಮಹೋತ್ಸವ ಆರಂಭವಾಗ ಬೇಕಿದ್ದು, ಆಚರಣೆ ಮಾಡುವುದಾದರೆ, ಈಗಿ ನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು.
ರಾಜ್ಯದಲ್ಲಿ ಈ ಹಿಂದೆ ಬರ ಹಾಗೂ ಇನ್ನಿತರೆ ಪ್ರಕೃತಿ ವಿಕೋಪ ಉಂಟಾದ ಸನ್ನಿವೇಶಗಳಲ್ಲಿ ನಾಡದೇವತೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಸರಳವಾಗಿ ದಸರಾ ಆಚರಣೆ ಮಾಡಿದ ನಿದರ್ಶನಗಳಿವೆ. ಕೋವಿಡ್-19 ಸೋಂಕು ಇದೇ ರೀತಿ ಮುಂದುವರೆದರೆ, ವಿಜೃಂಭಣೆ ಯಿಂದ ದಸರಾ ಆಚರಣೆ ಕಷ್ಟಕರ. ಇದು ನಾಡದೇವತೆಯ ಭಕ್ತರ ಹಿತದೃಷ್ಟಿಯಿಂದಲೂ ಸರಿಯಿಲ್ಲದಿರಬಹುದು.
ಆದರೆ ಇದುವರೆಗೂ ಯಾವ ರೀತಿ ಆಚರಣೆ ಮಾಡಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾ ರದ ಮಟ್ಟದಲ್ಲಿ ಕನಿಷ್ಠ ಚರ್ಚೆಗಳು ನಡೆದಿಲ್ಲ. ಹೊಸದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಎಸ್.ಟಿ.ಸೋಮಶೇಖರ್ ತಮ್ಮ ಇಲಾಖೆ ವಿಷಯಗಳನ್ನೇ ಪುನರಾವರ್ತನೆ ಮಾಡಿಕೊಂಡು, ಅದೇ ಮಾಹಿತಿ ಗಳನ್ನು ದಿನಾ ನೀಡಿ, ರಾಜ್ಯ ಪ್ರವಾಸಕ್ಕಿಳಿದಿದ್ದಾರೆ.
ಮಹೋತ್ಸವದ ವಿಚಾರದಲ್ಲಿ ಉಸ್ತುವಾರಿ ಸಚಿವರದ್ದೇ ಮುಖ್ಯ ಜವಾಬ್ದಾರಿ. ಆದರೆ ಇದುವರೆಗೂ ಯಾವುದೇ ಸಭೆಗಳನ್ನು ಮಾಡಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಗಳೊಟ್ಟಿಗೂ ಸಮಾಲೋಚನೆ ನಡೆಸಿಲ್ಲ. ಕನ್ನಡ ಮತ್ತು ಸಂಸ್ಕøತಿ ಸಚಿವರ ಸಂಪರ್ಕವನ್ನೂ ಮಾಡಿಲ್ಲ. ಈ ಹಿಂದೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದ ವಿ.ಸೋಮಣ್ಣ, ದಸರಾ ಆಚರಣೆಗೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಿಂ ದಲೇ ಪೂರ್ವ ಸಿದ್ಧತೆ ಮಾಡುವುದಾಗಿ ಹೇಳಿದ್ದರು.
ಕೋವಿಡ್-19 ಇದೇ ಪರಿಸ್ಥಿತಿ ಮುಂದುವರೆದರೆ ವಿಜೃಂಭಣೆಯಿಂದ ದಸರಾ ಆಚರಣೆ ಇರಲಿ ಸಾಂಪ್ರ ದಾಯಿಕ ದಸರಾ ಸಂಬಂಧವೂ ಗೊಂದಲ ಉಂಟಾ ಗುವ ಸಾಧ್ಯತೆ ಇದೆ. ಆದರೆ ನಾಡದೇವತೆಗೆ ಪೂಜೆ ಸಲ್ಲಿಸಿ, ಸರಳವಾಗಿ ಆಚರಣೆ ಮಾಡಲು ಯಾರ ವಿರೋ ಧವೂ ಇಲ್ಲ. ಈ ಬಗ್ಗೆಯು ಉಸ್ತುವಾರಿ ಸಚಿವ ರಾಗಲೀ, ಸರ್ಕಾರವಾಗಲೀ ಗಮನಹರಿಸಿಲ್ಲ. ತಮ್ಮ ಆಪ್ತ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್‍ಗೆ ಒಳ ಗಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಒಂದು ವಾರದ ಅವಧಿ ನಾಳೆಗೆ ಪೂರ್ಣಗೊಳ್ಳಲಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಯಾವುದೇ ಸಚಿವರು ಮತ್ತು ಅಧಿಕಾರಿಗಳೊಟ್ಟಿಗೆ ಸಭೆಗಳನ್ನೂ ನಡೆಸಿಲ್ಲ. ಕೋವಿಡ್-19 ನಿಯಂತ್ರಣದಲ್ಲಿ ಸಚಿವರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕಳೆದ ಸೋಮವಾರ ನಡೆದ ಸಭೆಯಲ್ಲಿ ಕಿಡಿಕಾರಿದ್ದರು.
ಅಂದಿನ ಸಭೆಯಲ್ಲೇ ನಾನು ಇನ್ನು ಮುಂದೆ ಸಭೆ ಗಳನ್ನು ನಡೆಸುವುದಿಲ್ಲ. ಕೊರೊನಾ ಸೋಂಕು ನಿಯಂ ತ್ರಣಕ್ಕೆ ತಂದು ಮಾಹಿತಿ ನೀಡಿ ಎಂದಷ್ಟೇ ಖಾರವಾಗಿ ತಿಳಿಸಿ, ಸಚಿವರು ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಗಳು ಎಚ್ಚರಿಕೆ ನೀಡಿದ್ದರು. ಇದಾದ ನಂತರ ಅವರು ಮುಖ್ಯಕಾರ್ಯದರ್ಶಿಗಳೊಟ್ಟಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವುದನ್ನು ಹೊರತುಪಡಿಸಿ, ಉಳಿ ದಂತೆ ತಮ್ಮ ಸಹೋದ್ಯೋಗಿಗಳು ಇಲ್ಲವೇ ಅಧಿಕಾರಿ ಗಳೊಟ್ಟಿಗೆ ಸಮಾಲೋಚನೆ ಮಾಡಿಲ್ಲ.