ಮೈಸೂರು, ಡಿ.2(ಆರ್‍ಕೆಬಿ)-ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 65ನೇ ರೈಲ್ವೆ ಪ್ರಶಸ್ತಿ ಸಪ್ತಾಹ ಕಾರ್ಯ ಕ್ರಮ ಮೈಸೂರಿನ ಯಾದವಗಿರಿಯ ಚಾಮುಂಡಿ ಆಫೀ ಸರ್ಸ್ ಕ್ಲಬ್‍ನಲ್ಲಿ ನಡೆದು, 2019-20ನೇ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ನೌಕರರು ಮತ್ತು ಸಿಬ್ಬಂದಿಗೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‍ವಾಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಮೈಸೂರಿನ ಯಾದವಗಿರಿಯ ಚಾಮುಂಡಿ ಆಫೀ ಸರ್ಸ್ ಕ್ಲಬ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದಲ್ಲಿ ಅರಸೀಕೆರೆ ರೈಲ್ವೆ ನಿಲ್ದಾಣ ಅತ್ಯುತ್ತಮ ನಿರ್ವಹಣೆಯ ನಿಲ್ದಾಣವೆಂದು ಹಾಗೂ ಕಬಕ ಪುತ್ತೂರ್ ರೈಲ್ವೆ ನಿಲ್ದಾಣ ದ್ವಿತೀಯ ಸ್ಥಾನಿಯಾಗಿ ಆಯ್ಕೆ ಮಾಡಿ ಪ್ರಶಸ್ತಿ ವಿತರಿಸಲಾಯಿತು. ಅತ್ಯುತ್ತಮ ರನ್ನಿಂಗ್ ರೂಂ ಪ್ರಶಸ್ತಿಯನ್ನು ಹಾಸನ ನಿಲ್ದಾಣದ ಚಾಲನಾ ಕೊಠಡಿ ನೀಡಲಾಯಿತು. ಮೈಸೂರಿಗೆ ಅತ್ಯುತ್ತಮ ವಾಣಿಜ್ಯ ಕಚೇರಿ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‍ವಾಲ್, ಮೈಸೂರು ವಿಭಾಗವು ಅತ್ಯುತ್ತಮ ನಿರ್ವಹಣಾ ನಿಲ್ದಾಣವೆಂದು ಮೈಸೂರು ನಿಲ್ದಾಣಕ್ಕೆ ದಕ್ಷತೆಯ ಪ್ರಶಸ್ತಿ ಲಭಿಸಿದೆ. ಮೈಸೂರು-ಹಜರತ್ ನಿಜಾಮುದ್ದೀನ್ ನಡುವೆ ಚಲಿ ಸುವ ಸ್ವರ್ಣಜಯಂತಿ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ಅನ್ನು ಅತ್ಯುತ್ತಮ ನಿರ್ವಹಣೆಯ ರೇಕ್ ಪ್ರಶಸ್ತಿ ಪಡೆದಿದೆ. ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ವಲಯ ಮಟ್ಟದಲ್ಲಿ ಮೈಸೂರು ವಿಭಾಗದ ಸಂಕೇತ ಮತ್ತು ದೂರಸಂಪರ್ಕ ಮತ್ತು ಭದ್ರತಾ ವಿಭಾಗಗಳು 65ನೇ ರೈಲ್ವೆ ಸಪ್ತಾಹದ ಪ್ರಶಸ್ತಿಯ ಸಂದರ್ಭದಲ್ಲಿ ವಿಭಾಗಕ್ಕೆ ದಕ್ಷತೆಯ ಪ್ರಶಸ್ತಿ ಫಲಕಗಳನ್ನು ತಂದುಕೊಟ್ಟಿವೆ. ಇದಕ್ಕಾಗಿ ಅಧಿಕಾರಿ, ಸಿಬ್ಬಂದಿ ಅಭಿನಂದನಾರ್ಹರು ಎಂದರು.
2019-2020ರ ಸಾಧನೆ: ಅಮ್ಮಸಂದ್ರದ ಖಾಸಗಿ ಸೈಡಿಂಗ್‍ನಲ್ಲಿನ ಒಂದು ಹಳಿ ತಪ್ಪಿದ ಘಟನೆ ಹೊರತು ಪಡಿಸಿ ಶೂನ್ಯ ಅಪಘಾತ. 2018-19ರಲ್ಲಿ 4.644 ಮಿಲಿಯನ್ ಟನ್‍ಗಳಿಗೆ ಹೋಲಿಸಿದರೆ 2019-20ರ ಸಾಲಿನಲ್ಲಿ ಒಟ್ಟು 8.14 ಮಿಲಿಯನ್ ಟನ್ ಲೋಡಿಂಗ್ ನಡೆಸಿ ವಿಭಾಗವು ಶೇ.+75 ಬೆಳವಣಿಗೆ ಸಾಧಿಸಿದೆ. ವಿಭಾಗದ ಇತಿಹಾಸದಲ್ಲಿಯೇ ಅತೀ ಹೆಚ್ಚು ಇದ್ದ 2012-13ರ 6.24 ಮಿಲಿಯನ್ ಟನ್‍ಗಳ ಹಿಂದಿನ ದಾಖಲೆಯನ್ನು ಮುರಿದಿದೆ ಎಂದರು.
ವಿಭಾಗದ ಪ್ರಮುಖ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಳಿ ದ್ವಿಗುಣಗೊಳಿಸುವ ಕಾರ್ಯಗಳ ಹೊರ ತಾಗಿಯೂ ವಿಭಾಗವು ಉತ್ತಮ ಸಮಯ ಪಾಲನೆ ಸಾಧಿಸಿದೆ. ಮೈಲ್ ಹಾಗೂ ಎಕ್ಸ್‍ಪ್ರೆಸ್‍ನ ಸಮಯ ಪಾಲನೆ ಶೇ.85.19. ಕಳೆದ ವರ್ಷಕ್ಕೆ ಹೋಲಿಸಿದರೆ ಮೂಲ ಆದಾಯ ಗಳಿಕೆಯು ರೂ. 844 ಕೋಟಿ ರೂ. ಗಳಾಗಿದ್ದು, ಇದು ಶೇ.29ರಷ್ಟು ಹೆಚ್ಚಾಗಿದೆ. ವಿಭಾಗವು ಈ ವರ್ಷ 412.8 ಲಕ್ಷ ಪ್ರಯಾಣಿಕರನ್ನು ಸಾಗಿಸಿದೆ (ಕಳೆದ ವರ್ಷ 445.18 ಲಕ್ಷ)., 5 ಶಾಶ್ವತ ವೇಗ ನಿರ್ಬಂಧ ಗಳನ್ನು ತೆಗೆದುಹಾಕಲಾಗಿದೆ. 220 ಕಿ.ಮೀ ಉದ್ದದ ಮಾರ್ಗಗಳಲ್ಲಿ ವೇಗವನ್ನು 100 ಕಿ.ಮೀ.ಗೆ ಹೆಚ್ಚಿಸಲಾ ಗಿದೆ. ತುಮಕೂರು- ಹುಬ್ಬಳ್ಳಿ ಮುಖ್ಯ ಮಾರ್ಗದಲ್ಲಿ ತುಮಕೂರು-ಮಲ್ಲಸಂದ್ರ-ಗುಬ್ಬಿ, ದಾವಣಗೆರೆ-ಅಮ ರಾವತಿ ಕಾಲೋನಿ-ಹರಿಹರ ಮತ್ತು ಬಾಣಸಂದ್ರ-ಕರಡಿ ನಡುವೆ 48 ಕಿ.ಮೀ.ಗಳ ಹಳಿ ದ್ವಿಗುಣಗೊಳಿಸು ವಿಕೆ ಕಾರ್ಯ ನಡೆದಿದೆ ಎಂದು ಹೇಳಿದರು.
ಪ್ರಯಾಣಿಕ ಸ್ನೇಹಿ ಕ್ರಮ: ಮೈಸೂರಿನ ಯಾರ್ಡ್ ಮರು ರೂಪಿಸುವಿಕೆಯನ್ನು 2019-20ರ ಅವಧಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ರೈಲ್ವೆ ಸಚಿವಾ ಲಯದ ‘ಡ್ಯಾಶ್ ಬೋರ್ಡ್’ನ ಪ್ರಮುಖ ಕಾರ್ಯ ಕ್ರಮವಾದ ಮೈಸೂರು ರೈಲ್ವೆ ನಿಲ್ದಾಣದ ಮರು-ಅಭಿವೃದ್ಧಿಯನ್ನು ‘ಸಾಫ್ಟ್ ಅಪ್‍ಗ್ರೆಡೇಶನ್’ ಅಡಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಮೈಸೂರು ಮತ್ತು ಹಾಸನದಲ್ಲಿ ಕೋಚ್‍ಗಳಿಗೆ ತ್ವರಿತ ನೀರು ಹಾಯಿ ಸುವ ವ್ಯವಸ್ಥೆಯನ್ನು ಪೂರ್ಣಗೊಳಿಸಿ ನೀರು ಹಾಯಿ ಸುವಿಕೆ ಸಮಯವನ್ನು 20 ನಿಮಿಷದಿಂದ 5 ನಿಮಿಷ ಕ್ಕಿಳಿಸಲಾಗಿದೆ. ರೈಲ್ವೆ ವಸ್ತು ಸಂಗ್ರಹಾಲಯದ ಮರು-ಅಭಿವೃದ್ಧಿ ಕಾರ್ಯವನ್ನು ದಾಖಲೆ ಸಮಯದಲ್ಲಿ ಸಂಪೂರ್ಣ ಮರು-ವಿನ್ಯಾಸಗೊಳಿಸಲಾಗಿದೆ ಎಂದರು.
ಅರಸಾಳು ನಿಲ್ದಾಣದಲ್ಲಿ ‘ಮಾಲ್ಗುಡಿ ಮ್ಯೂಸಿಯಂ’ ಅಭಿವೃದ್ಧಿ, ಎಲ್ಲಾ 11 ಜಿಲ್ಲಾ ಕೇಂದ್ರಗಳಲ್ಲಿ ಸ್ಮಾರಕ ಧ್ವಜ ಸ್ಥಾಪನೆ, ಮೈಸೂರÀಲ್ಲಿ 4ನೇ ಪಿಟ್‍ಲೈನ್ ನಿರ್ಮಾಣ, ಅರಸೀಕೆರೆಯಲ್ಲಿ ಪಿಟ್‍ಲೈನ್ ವಿಸ್ತರಣೆ, ಒಂದು ಸಣ್ಣ ಗುಂಡಿ ಒತ್ತಿ ಮೈಸೂರು ನಿಲ್ದಾಣದ ಬಗ್ಗೆ ಮಾಹಿತಿ, ನಿಲ್ದಾಣದ ನಿರ್ದಿಷ್ಟ ವೆಬ್‍ಸೈಟ್ ತಿತಿತಿ.mಥಿsuಡಿuಡಿಚಿiಟತಿಚಿಥಿsಣಚಿಣioಟಿ.ಛಿom ಪ್ರಾರಂಭ ಇತ್ಯಾದಿ ಕೈಗೊಳ್ಳಲಾಗಿದೆ.
ಆಯ್ದ 7 ನಿಲ್ದಾಣಗಳಲ್ಲಿ (ತಿಪಟೂರು, ದಾವಣಗೆರೆ, ನಂಜನಗೂಡು, ಚಾಮರಾಜನಗರ, ಹಾಸನ, ಶಿವ ಮೊಗ್ಗ ಟೌನ್ ಮತ್ತು ಕಡೂರು) ಪ್ಲ್ಯಾಟ್ ಫಾರ್ಮ್, ಸುರಂಗ ಮಾರ್ಗ, ಕಾಯುವ ಕೋಣೆಗಳು ಇತ್ಯಾದಿ ಗಳಲ್ಲಿ 50ರಿಂದ 180 ರವರೆಗಿನ ‘ಲಕ್ಸ್’ ಮಟ್ಟದ ಪ್ರಕಾಶದ ದೀಪದ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿ ಗರು ನಗರಕ್ಕೆ ಭೇಟಿ ನೀಡಿದ ನೆನಪುಗಳನ್ನು ಹಸಿರಾ ಗಿಡಲು ಮತ್ತು ‘ಮೇಡ್ ಇನ್ ಇಂಡಿಯಾ’ ಉತ್ಪನ್ನ ಗಳನ್ನು ಉತ್ತೇಜಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಬಿ.ಶ್ರೀನಿವಾಸುಲು, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಪ್ರಶಾಂತ್ ಮಾಸ್ತಿಹೊಳಿ ಇನ್ನಿತರರು ಉಪಸ್ಥಿತರಿದ್ದರು.
ಪರಿಷತ್ ಸದಸ್ಯ ವಿಶ್ವನಾಥರಿಂದ ಭಾರೀ ಹಣದ ಪ್ರಸ್ತಾಪ