ಮೈಸೂರಲ್ಲಿ 647 ಸೇರಿ ರಾಜ್ಯದಲ್ಲಿ ಮಂಗಳವಾರ 6473 ಮಂದಿ ಗುಣಮುಖ
ಮೈಸೂರು

ಮೈಸೂರಲ್ಲಿ 647 ಸೇರಿ ರಾಜ್ಯದಲ್ಲಿ ಮಂಗಳವಾರ 6473 ಮಂದಿ ಗುಣಮುಖ

August 12, 2020

ಮೈಸೂರು, ಆ.11(ಎಸ್‍ಬಿಡಿ)- ಮೈಸೂರಲ್ಲಿ ಮಂಗಳವಾರ 647 ಮಂದಿ ಸೇರಿ ರಾಜ್ಯದಲ್ಲಿ 6,473 ಕೊರೊನಾ ಸೋಂಕಿ ತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ ಮಂಗಳವಾರ ಡಿಸ್ಚಾರ್ಜ್ ಆದವರ ಸಂಖ್ಯೆ ಈವರೆಗಿನ ದಾಖಲೆ ಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 4,113 ಜನ ಕೊರೊನಾ ಜಯಿಸಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ ಒಟ್ಟು 1,05,599ಕ್ಕೆ ಏರಿಕೆಯಾಗಿದೆ.

ಹೊಸ ಪ್ರಕರಣ: ಮಂಗಳವಾರ ಮೈಸೂರಿನಲ್ಲಿ 238 ಸೇರಿದಂತೆ ರಾಜ್ಯದಲ್ಲಿ 6,257 ಹೊಸ ಪ್ರಕರಣ ದಾಖಲಾಗಿವೆ. ಜಿಲ್ಲೆಯ 238 ಸೋಂಕಿತರಲ್ಲಿ ಸಂಪರ್ಕಿತರು 69, ವಿಷಮಶೀತ ಜ್ವರ (ಐಎಲ್‍ಐ) ಇರುವವರು 42, ಉಸಿರಾಟದ ಸಮಸ್ಯೆ (ಸಾರಿ) ಇರುವವರು 13 ಹಾಗೂ ಟ್ರಾವೆಲ್ ಹಿಸ್ಟರಿ ಇರುವವರು 114 ಮಂದಿ ಇದ್ದಾರೆ. ಇದರೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ ಮೈಸೂರಲ್ಲಿ 8 ಸಾವಿರ ಗಡಿ(7,923) ತಲುಪಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,88,611ಕ್ಕೆ ಏರಿಕೆಯಾಗಿದೆ.

ಮೈಸೂರಲ್ಲೂ ಹೆಚ್ಚು ಸಾವು: ರಾಜ್ಯದಲ್ಲಿ ಬೆಂಗಳೂರಿನ(17) ನಂತರ ಮೈಸೂರಿನಲ್ಲೇ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಮಹಿಳೆಯರು ಸೇರಿ ಮತ್ತೆ 11 ಮಂದಿ ಮೃತಪಟ್ಟಿದ್ದಾರೆ. ಆ.8ರಂದು 80 ವರ್ಷದ ಇಬ್ಬರು ವೃದ್ಧರು, 73, 75 ವರ್ಷದ ವೃದ್ಧೆಯರು, ಆ.9ರಂದು 49, 75 ವರ್ಷದ ಮಹಿಳೆಯರು, 50, 75 ವರ್ಷದ ವೃದ್ಧರು ಹಾಗೂ ಆ.10ರಂದು 40, 74 ಹಾಗೂ 80 ವರ್ಷದ ವೃದ್ಧರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 251ಕ್ಕೆ ಹಾಗೂ ರಾಜ್ಯದಲ್ಲಿ 3,398ಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣ: ಮೈಸೂರು ಜಿಲ್ಲೆಯ ಒಟ್ಟು 3,559 ಸಕ್ರಿಯ ಪ್ರಕರಣಗಳಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 181, ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ಸ್‍ಗಳಲ್ಲಿ 73, ಕೋವಿಡ್ ಕೇರ್ ಸೆಂಟರ್ ಗಳಲ್ಲಿ 800, ಖಾಸಗಿ ಆಸ್ಪತ್ರೆಗಳಲ್ಲಿ 221, ಖಾಸಗಿ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 80 ಹಾಗೂ ಹೋಂ ಐಸೋಲೇಷನ್‍ನಲ್ಲಿ 2204 ಸೋಂಕಿತರು ಶುಶ್ರೂಷೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ 79,606 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ವಿವರ: ಬೆಂಗಳೂರು ನಗರ 1,610, ಬಳ್ಳಾರಿ 736, ಬೆಳಗಾವಿ 575, ಧಾರವಾಡ 276, ದಕ್ಷಿಣಕನ್ನಡ 243, ಮೈಸೂರು 238, ಉಡುಪಿ 219, ರಾಯಚೂರು 201, ಶಿವಮೊಗ್ಗ 189, ದಾವಣಗೆರೆ 172, ಕೊಪ್ಪಳ 169, ಕಲಬುರಗಿ 156, ಹಾಸನ 146, ಮಂಡ್ಯ 141, ಬಾಗಲಕೋಟೆ 135, ವಿಜಯಪುರ 121, ಯಾದಗಿರಿ 102, ರಾಮನಗರ 96, ಚಿಕ್ಕಮಗಳೂರು 93, ತುಮಕೂರು 89, ಗದಗ 78, ಬೀದರ್ 73, ಉತ್ತರಕನ್ನಡ 73, ಚಾಮರಾಜನಗರ 72, ಕೋಲಾರ 69, ಚಿತ್ರದುರ್ಗ 47, ಕೊಡಗು 41, ಹಾವೇರಿ 36, ಚಿಕ್ಕಬಳ್ಳಾಪುರ 33 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 28 ಹೊಸ ಪ್ರಕರಣ ದಾಖಲಾಗಿವೆ.

ಇಂದಿನ ಟೆಸ್ಟಿಂಗ್: ಮಂಗಳವಾರ ಮೈಸೂರಿನಲ್ಲಿ 811 ಸೇರಿ ರಾಜ್ಯದಲ್ಲಿ ಒಟ್ಟು 43,924 ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಇದರೊಂದಿಗೆ ಒಟ್ಟು ಟೆಸ್ಟಿಂಗ್ ಸಂಖ್ಯೆ ಜಿಲ್ಲೆಯಲ್ಲಿ 57,219 ಹಾಗೂ ರಾಜ್ಯದಲ್ಲಿ 17.73 ಲಕ್ಷವಾಗಿದೆ.

Translate »