ವಾರ್ಡ್‍ಗೊಂದರಂತೆ ಮೈಸೂರಿಗೆ ಕಸ ಸಂಗ್ರಹಿಸಲು 65 ಹೊಸ ಆಟೋ ಟಿಪ್ಪರ್ ವ್ಯವಸ್ಥೆ
ಮೈಸೂರು

ವಾರ್ಡ್‍ಗೊಂದರಂತೆ ಮೈಸೂರಿಗೆ ಕಸ ಸಂಗ್ರಹಿಸಲು 65 ಹೊಸ ಆಟೋ ಟಿಪ್ಪರ್ ವ್ಯವಸ್ಥೆ

May 31, 2020

ಮೈಸೂರು, ಮೇ 30(ಆರ್‍ಕೆ)- ಸ್ವಚ್ಛ ನಗರಿ ಖ್ಯಾತಿಯ ಮೈಸೂರು ನಗರದಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಮೈಸೂರು ನಗರ ಪಾಲಿಕೆಯು ವಾರ್ಡಿ ಗೊಂದರಂತೆ 65 ಹೊಸ ಆಟೋ ಟಿಪ್ಪರ್‍ಗಳನ್ನು ಒದಗಿಸಿದೆ.

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಪಾಲಿಕೆ ಪ್ರಧಾನ ಕಚೇರಿ ಆವರಣ ದಲ್ಲಿ ಶನಿವಾರ ಮಧ್ಯಾಹ್ನ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೊಸ ಟಿಪ್ಪರ್‍ಗಳ ಸೇವೆಗೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭ ಮಾತನಾಡಿದ ಸಚಿ ವರು, ಸಾಂಸ್ಕøತಿಕ ನಗರಿ ಮೈಸೂರು ಸ್ವಚ್ಛ ನಗರಿ ಎಂದೂ ಖ್ಯಾತಿಯಾಗಿರುವುದರಿಂದ ವೈಜ್ಞಾನಿಕವಾಗಿ ಘನ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಆ ಗರಿಮೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದರು.

ಅದಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯು ಹೊಸದಾಗಿ 65 ಹೊಸ ಆಟೋ ಟಿಪ್ಪರ್‍ಗಳನ್ನು ಖರೀದಿಸಿದ್ದು, ಅವು ನಾಳೆ (ಮೇ31)ಯಿಂದ ಮೈಸೂರಿನ ಎಲ್ಲಾ ವಾರ್ಡ್ ಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸ ಲಿವೆ. ಪೌರಕಾರ್ಮಿಕರು ಬಂದಾಗ ಸಾರ್ವ ಜನಿಕರು ಬೇರ್ಪಡಿಸಿದ ಒಣ ಮತ್ತು ಹಸಿ ಕಸವನ್ನು ನೀಡುವ ಮೂಲಕ ಸ್ವಚ್ಛತೆ ಕಾಪಾ ಡಲು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ಕಳೆದ 1 ವರ್ಷದ ಹಿಂದೆಯೇ ಹೊಸ ಆಟೋ ಟಿಪ್ಪರ್ ಖರೀದಿಸಲು ಅನುಮತಿ ಕೋರಿದ್ದ ಪಾಲಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದರಿಂದ 14ನೇ ಹಣಕಾಸು ಆಯೋ ಗದ ಅನುದಾನದ 4.3 ಕೊಟಿ ರೂ. ವೆಚ್ಚದ 65 ಆಟೋ ಟಿಪ್ಪರ್‍ಗಳನ್ನು ಕಸ ಸಂಗ್ರಹಿಸಲು ಖರೀದಿಸಲಾಗಿದೆ ಎಂದರು.

ಈಗ ಇರುವ ಆಟೋ ಟಿಪ್ಪರ್ ವಾಹನ ಗಳು ಹಳೆಯದ್ದಾಗಿದ್ದು, ಆಗಿಂದಾಗ್ಗೆ ಕೆಟ್ಟು ಹೋಗುತ್ತಿದ್ದರಿಂದ ವಾರ್ಡಿಗೊಂದರಂತೆ ಹೊಸ ವಾಹನಗಳನ್ನು ಪೂರೈಸಲಾಗಿದೆ. ಈಗಿರುವ ಡ್ರೈವರ್‍ಗಳನ್ನೇ ಹೊಸ ಆಟೋ ಟಿಪ್ಪರ್‍ಗಳಿಗೆ ನಿಯೋಜಿಸಲಾಗುವುದು. ಇನ್ನೂ 65 ಚಾಲಕರನ್ನು ನೇಮಿಸಿ ಕೊಳ್ಳಲು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಾಲಿಕೆ ಆರೋಗ್ಯಾ ಧಿಕಾರಿ ಡಾ.ಡಿ.ಜಿ.ನಾಗರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಮೇಯರ್ ತಸ್ನೀಂ, ಉಪಮೇಯರ್ ಶ್ರೀಧರ್, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಆರೋಗ್ಯಾಧಿಕಾರಿ ಡಾ. ಜಯಂತ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಿ, ಸದಸ್ಯರಾದ ಶೋಭಾ, ಲಕ್ಷ್ಮೀ ಶಿವಣ್ಣ, ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಎಕ್ಸೆಲ್ ಪ್ಲಾಂಟ್ ಕಸ ವಿಲೇವಾರಿ ಸಂಬಂಧ 3 ದಿನದಲ್ಲಿ ನಿರ್ಧಾರ
ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ
ಮೈಸೂರು, ಮೇ 30(ಆರ್‍ಕೆ)- ಮೈಸೂರಿನ ಸೀವೆಜ್‍ಫಾರಂನಲ್ಲಿ ಸಂಗ್ರಹವಾಗಿ ರುವ(ಎಕ್ಸೆಲ್ ಪ್ಲಾಂಟ್) ರಾಶಿ ರಾಶಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಂಬಂಧ ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಲು ಹೊಸದಾಗಿ ಖರೀದಿಸಿರುವ ಆಟೋ ಟಿಪ್ಪರ್‍ಗಳಿಗೆ ಚಾಲನೆ ನೀಡಿದ ಸಚಿವರು, ಸ್ವಚ್ಛ ನಗರಿ ಬಿರುದಿನ ಮೈಸೂರಲ್ಲಿ ಸೀವೆಜ್ ಫಾರಂನಲ್ಲಿ ಸಂಗ್ರಹವಾಗಿರುವ ರಾಶಿಗಟ್ಟಲೆ ತ್ಯಾಜ್ಯದಿಂದ ಸುತ್ತಲಿನ ಬಡಾವಣೆಗಳ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿರುವುದರಿಂದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು. ಈಗಾಗಲೇ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಸೀವೆಜ್ ಫಾರಂನ ಕಸದ ರಾಶಿಯನ್ನು ತೆರವು ಗೊಳಿಸುವ ಬಗ್ಗೆ ಹಲವು ಬಾರಿ ಸಭೆ ನಡೆಸಿ ಪುಣೆಯ ಖಾಸಗಿ ಕಂಪನಿಗೆ ಆ ಜವಾಬ್ದಾರಿ ವಹಿಸುವ ಬಗ್ಗೆಯೂ ಪ್ರಕ್ರಿಯೆ ಆರಂಭಿಸಿದ್ದರು ಎಂದು ತಿಳಿಸಿದರು.

ಆ ಯೋಜನೆಗೆ ನಗರಾಭಿವೃದ್ಧಿ ಸಚಿವರು 4.6 ಕೋಟಿ ರೂ. ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಸಣ್ಣಪುಟ್ಟ ಗೊಂದಲ ಬಗೆಹರಿಸಿ ಕಸ ತೆರವುಗೊಳಿ ಸುವುದು ಹಾಗೂ ಮರು ಬಳಕೆ ಮಾಡಿ ಅದರಿಂದ ಕಾಂಪೋಸ್ಟ್ ತಯಾರಿಸುವ ಬಗ್ಗೆ ಸ್ಪಷ್ಟತೆ ಬರಬೇಕಾಗಿದೆ. ಮೂರು ದಿನದೊಳಗಾಗಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ನುಡಿದರು.

Translate »