ಮಂಡ್ಯದಲ್ಲಿ ಕೊರೊನಾ ಆರ್ಭಟ 688 ಮಂದಿಗೆ ಸೋಂಕು, ಮೂವರ ಸಾವು
ಮಂಡ್ಯ

ಮಂಡ್ಯದಲ್ಲಿ ಕೊರೊನಾ ಆರ್ಭಟ 688 ಮಂದಿಗೆ ಸೋಂಕು, ಮೂವರ ಸಾವು

April 25, 2021

ಮಂಡ್ಯ ಏ.24-ಮಂಡ್ಯ ಜಿಲ್ಲೆಯಲ್ಲಿಂದು ಕೊರೊನಾ ಮಹಾಮಾರಿ ಆರ್ಭಟಿಸಿದ್ದು, ಬರೋಬ್ಬರಿ 688 ಮಂದಿಗೆ ಕೊರೊನಾ ದೃಢಪಟ್ಟಿದೆ.

688 ಮಂದಿ ಪೈಕಿ ಮಂಡ್ಯದಲ್ಲಿ 251 ಮಂದಿಗೆ ಸೋಂಕು ಕಂಡು ಬಂದಿದ್ದರೆ, ನಾಗಮಂಗಲ 121, ಶ್ರೀರಂಗಪಟ್ಟಣ 84, ಕೆ.ಆರ್.ಪೇಟೆ 80, ಮದ್ದೂರು 67, ಮಳವಳ್ಳಿ ಹಾಗೂ ಪಾಂಡವಪುರದಲ್ಲಿ ತಲಾ 38 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಹೊರಜಿಲ್ಲೆಯಿಂದ ಬಂದವರ ಪೈಕಿ 9 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೇ ಸೋಂಕಿತರ ಸಂಖೆÉ್ಯ 24,760 ಕ್ಕೇರಿದೆ.

ಇಂದು 216 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದ ಇಬ್ಬರು ಸೇರಿದಂತೆ ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟಾರೇ ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಬಹಳ ದಿನಗಳ ಬಳಿಕ 600ರ ಗಡಿ ದಾಟಿದೆ.

Translate »