ವಾರಾಂತ್ಯ ಕಫ್ರ್ಯೂಗೆ ವ್ಯಾಪಕ ಬೆಂಬಲ
ಮಂಡ್ಯ

ವಾರಾಂತ್ಯ ಕಫ್ರ್ಯೂಗೆ ವ್ಯಾಪಕ ಬೆಂಬಲ

April 25, 2021

ಭಾರತೀನಗರ,ಏ.24(ಅ.ಸತೀಶ್)-ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ಇಂದು ಜನ ಸಂಚಾರ ಬಹುತೇಕ ಸ್ಥಗಿತಗೊಂಡು, ವ್ಯಾಪಾರ-ವಹಿವಾಟು ಭಾರತೀನಗರದಲ್ಲಿ ಸ್ತಬ್ಧವಾಗಿತ್ತು. ಜನರಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತಲ್ಲದೆ, ಕಫ್ರ್ಯೂ ಸಂಪೂರ್ಣವಾಗಿ ಯಶಸ್ವಿಯಾಯಿತು.

ಕಫ್ರ್ಯೂಗೆ ಬೆಂಬಲ ವ್ಯಕ್ತಪಡಿಸಿ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಮನೆಯಲ್ಲೇ ಉಳಿದಿದ್ದರು. ಆಸ್ಪತ್ರೆ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಮತ್ಯಾವುದೇ ಅಂಗಡಿ-ಮುಂಗಟ್ಟುಗಳು ತೆರೆದಿರಲಿಲ್ಲ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸರಕು ಸಾಗಾಣೆ, ತರಕಾರಿ, ಹಾಲಿನ ವಾಹನಗಳು ಸಹ ಸಂಚರಿಸಲಿಲ್ಲ. ಮಂಡ್ಯ ರಸ್ತೆ, ಹಲಗೂರು ರಸ್ತೆ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡು ಬಂತು. ನಿತ್ಯ ಸಾವಿರಾರು ವಾಹನ ಸಂಚಾರದಿಂದ ಕೂಡಿರುತ್ತಿದ್ದ ಮದ್ದೂರು- ಮಳವಳ್ಳಿ ಮುಖ್ಯರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‍ಗಳು, ಆಟೋ, ಕಾರು, ದ್ವಿಚಕ್ರವಾಹನ ಕಂಡುಬರಲೇ ಇಲ್ಲ. ಕೆ.ಎಂ. ದೊಡ್ಡಿ ಪೊಲೀಸರು ವಾರಾಂತ್ಯ ಕಫ್ರ್ಯೂಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸಾರ್ವ ಜನಿಕರ ಪ್ರಶÀಂಸೆಗೆ ಕಾರಣವಾಯಿತು.

 

Translate »