ಗುರುವಾರ ಮೈಸೂರಲ್ಲಿ 695 ಮಂದಿಗೆ ಸೋಂಕು
ಮೈಸೂರು

ಗುರುವಾರ ಮೈಸೂರಲ್ಲಿ 695 ಮಂದಿಗೆ ಸೋಂಕು

January 14, 2022

ಮೈಸೂರು, ಜ.13(ಎಂಕೆ)- ಮೈಸೂರು ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಗುರುವಾರ 695 ಮಂದಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,83,420ಕ್ಕೆ ಏರಿಕೆ ಯಾಗಿದೆ. ಗುರುವಾರ ಗುಣಮುಖರಾದ 150 ಮಂದಿ ಸೇರಿ ಇದುವರೆಗೂ 1,78,168 ಮಂದಿ ಸೋಂಕಿನಿಂದ ಗುಣ ಮುಖರಾಗಿದ್ದು, ಪ್ರಸ್ತುತ 2821 ಸಕ್ರಿಯ ಪ್ರಕರಣ ಗಳಿವೆ. ಇಂದು ಒಬ್ಬರು ನಿಧನರಾಗಿದ್ದು, ಇಲ್ಲಿಯವರೆಗೆ 2,431 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಹೆಚ್.ಡಿ.ಕೋಟೆ 5, ಹುಣಸೂರು 16, ಕೆ.ಆರ್.ನಗರ 21, ಮೈಸೂರು ನಗರ 505, ಮೈಸೂರು ತಾಲೂಕು 30, ನಂಜನಗೂಡು 30, ಪಿರಿಯಾಪಟ್ಟಣ 17, ಸಾಲಿಗ್ರಾಮ 4, ಸರಗೂರು 0, ತಿ.ನರಸೀಪುರ 53 ಸೇರಿದಂತೆ ಒಟ್ಟು 695 ಪ್ರಕರಣ ಪತ್ತೆಯಾಗಿದೆ.

ರಾಜ್ಯ: ಗುರುವಾರ ರಾಜ್ಯದಲ್ಲಿ 25,005 ಮಂದಿ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 31,24,524ಕ್ಕೇರಿದೆ. ಇಂದು 2,363 ಮಂದಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು, ಇಲ್ಲಿಯವರೆಗೆ 29,70,365 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 1,15,733 ಸಕ್ರಿಯ ಪ್ರಕರಣವೆ. ಇಂದು ರಾಜ್ಯದಲ್ಲಿ 8 ಮಂದಿ ಸಾವನ್ನಪ್ಪಿದ್ದು, 38,397 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು 695, ಬಾಗಲಕೋಟೆ 5, ಬಳ್ಳಾರಿ 185, ಬೆಳಗಾವಿ 276, ಬೆಂಗಳೂರು ಗ್ರಾಮಾಂತರ 390, ಬೆಂಗಳೂರು ನಗರ 18,374, ಬೀದರ್ 97, ಚಾಮರಾಜನಗರ 176, ಚಿಕ್ಕಬಳ್ಳಾಪುರ 119, ಚಿಕ್ಕಮಗಳೂರು 90, ಚಿತ್ರದುರ್ಗ 78, ದಕ್ಷಿಣಕನ್ನಡ 625, ದಾವಣಗೆರೆ 92, ಧಾರವಾಡ 399, ಗದಗ 69, ಹಾಸನ 490, ಹಾವೇರಿ 19, ಕಲಬುರಗಿ 346, ಕೊಡಗು 72, ಕೋಲಾರ 293, ಕೊಪ್ಪಳ 32, ಮಂಡ್ಯ 406, ರಾಯಚೂರು 122, ರಾಮನಗರ 112, ಶಿವಮೊಗ್ಗ 212, ತುಮಕೂರು 547, ಉಡುಪಿ 379, ಉತ್ತರಕನ್ನಡ 250, ವಿಜಯಪುರ 39, ಯಾದಗಿರಿ 16 ಪ್ರಕರಣ ಸೇರಿದಂತೆ 25,005 ಮಂದಿಗೆ ಕೊರೊನಾ ಸೋಂಕು ತಗುಲಿದೆ.

Translate »