7 ಲಕ್ಷ ರೂ. ಮೌಲ್ಯದ ಬೀಟೆ ಮರ ವಶ: ಓರ್ವನ ಬಂಧನ
ಮೈಸೂರು

7 ಲಕ್ಷ ರೂ. ಮೌಲ್ಯದ ಬೀಟೆ ಮರ ವಶ: ಓರ್ವನ ಬಂಧನ

August 31, 2020

ಮೈಸೂರು, ಆ.30(ಎಂಟಿವೈ)- ದಾಖಲೆ ಯಿಲ್ಲದೆ ಸಾಮಿಲ್‍ವೊಂದಕ್ಕೆ ಕುಯ್ಯಿಸಲು ತಂದಿದ್ದ 7 ಲಕ್ಷ ರೂ. ಮೌಲ್ಯದ ಬೀಟೆ ಮರದ ದಿಮ್ಮಿಗಳನ್ನು ತಿ.ನರಸೀಪುರ ವಲಯದ ಅರಣ್ಯ ಸಿಬ್ಬಂದಿ ಹಾಗೂ ಅರಣ್ಯ ಸಂಚಾರಿ ದಳದ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ತಿ.ನರಸೀಪುರ ವಲಯದ ಅರಣ್ಯ ಸಿಬ್ಬಂದಿ ಹಾಗೂ ಅರಣ್ಯ ಸಂಚಾರಿ ದಳದ ಪೊಲೀಸರು ಜಂಟಿ ಕಾರ್ಯಾ ಚರಣೆ ನಡೆಸಿ ಬನ್ನೂರು ಹೋಬಳಿಯ ಕೊಡಗಳ್ಳಿ ಬಳಿಯಿರುವ ಸಾಮಿಲ್‍ವೊಂ ದಕ್ಕೆ ತೆರಳಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಬೀಟೆ ಮರದ ದಿಮ್ಮಿಗಳನ್ನು ಕುಯ್ಯಿಸಲು ತಂದಿರುವುದು ಪತ್ತೆಯಾಗಿದೆ. ಈ ಬೀಟೆ ಮರಕ್ಕೆ ರಹದಾರಿ, ದಾಖಲಾತಿಯಿಲ್ಲದಿರು ವುದು ಕಂಡು ಬಂದಿದೆ. ಕೂಡಲೆ ಮರದ ದಿಮ್ಮಿ ತಂದಿದ್ದ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಅಬ್ದುಲ್ ಖದೀರ್‍ನನ್ನು ಬಂಧಿಸಿ ದ್ದಾರೆ. ಅಲ್ಲದೆ ಮರದ ದಿಮ್ಮಿಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿ ಪ್ರಾಥ ಮಿಕ ವಿಚಾರಣೆ ವೇಳೆ ಹಾಸನ-ಚಿಕ್ಕಮಗ ಳೂರು ಮೂಲದ ಸಂತೋಷ್ ಎಂಬಾತ ನಿಂದ ಮರ ಖರೀದಿಸಿ ತಂದಿರುವುದಾಗಿ ಹೇಳಿಕೆ ನೀಡಿದ್ದಾನೆ. ಮರದ ದಿಮ್ಮಿಗಳನ್ನು ಕುಯ್ಯಿಸಿ ಮಾರಾಟ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. ಆತನನ್ನು ಮರದ ದಿಮ್ಮಿ ಮಾರಾಟ ಮಾಡಿದ ವ್ಯಕ್ತಿ ಬಂಧನಕ್ಕೆ ಅರಣ್ಯ ಸಿಬ್ಬಂದಿ ಬಲೆ ಬೀಸಿದ್ದಾರೆ. ನಂಜನ ಗೂಡು ನ್ಯಾಯಾಲಯದ ನ್ಯಾಯಾಧೀ ಶರ ಮುಂದೆ ಆರೋಪಿಯನ್ನು ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿ ಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್‍ಎಫ್‍ಓ ಶಶಿಧರ್, ಡಿಆರ್‍ಎಫ್‍ಗಳಾದ ಎಂ.ಎಸ್. ಉಮೇಶ್, ಮಂಜುನಾಥ್, ಸಿಬ್ಬಂದಿ ಚಂದ್ರಪ್ಪ, ಚೇತನ, ಲೋಕೇಶ್, ಚಾಲಕ ಮಂಜುನಾಥ್, ಅರಣ್ಯ ಸಂಚಾರಿ ದಳದ ಪೊಲೀಸ್ ಪೇದೆಗಳಾದ ರಘು, ಕೃಷ್ಣೇ ಗೌಡ ಪಾಲ್ಗೊಂಡಿದ್ದರು.

Translate »