ಆರ್ಯವೈಶ್ಯ ಮಹಾಸಭಾದ ಬಹುಪಯೋಗಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
ಮೈಸೂರು

ಆರ್ಯವೈಶ್ಯ ಮಹಾಸಭಾದ ಬಹುಪಯೋಗಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

August 31, 2020

ಮೈಸೂರು, ಆ.30(ಪಿಎಂ)- ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಚೌದ್ರಿ ಅಪ್ಪಾಜಿ ಶೆಟ್ಟರ ಧರ್ಮಛತ್ರ ಮತ್ತು ಉಚಿತ ವಿದ್ಯಾರ್ಥಿನಿಲಯ ಟ್ರಸ್ಟ್ ಸಹಯೋಗ ದಲ್ಲಿ ಮೈಸೂರಿನ ಲಷ್ಕರ್ ಮೊಹಲ್ಲಾದ ಗೀತಾ ಮಂದಿರ ರಸ್ತೆಯಲ್ಲಿ ನಿರ್ಮಿಸು ತ್ತಿರುವ ಬಹುಪಯೋಗಿ ಕಟ್ಟಡದ ಶಂಕುಸ್ಥಾಪನೆ ಭಾನುವಾರ ನೆರವೇರಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮಾತನಾಡಿ, ಆರ್ಯ ವೈಶ್ಯ ಮಹಾಸಭಾ ಹಲವು ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮುದಾಯದ ಅವಶ್ಯಕತೆಗಳಿಗೆ ಅನುಗುಣ ವಾಗಿ ಇಡೀ ರಾಜ್ಯದಲ್ಲಿ ಹಲವು ಸೇವಾ ಕಾರ್ಯಕ್ರಮ ನಡೆಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಯ ತರಬೇತಿಯನ್ನು ಪಡೆ ಯಲು ದೆಹಲಿಗೆ ಹೋಗಬೇಕಿದೆ. ಬದ ಲಾಗಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿಯೇ ತರಬೇತಿ ದೊರೆಯು ವಂತೆ ಮಹಾಸಭಾ ವ್ಯವಸ್ಥೆ ಮಾಡಿದೆ ಎಂದರು.

ಕೊರೊನಾ ಸಂಕಷ್ಟ ಕಾಲದಲ್ಲಿ ಮಹಾ ಸಭಾ ನೇತೃತ್ವದಲ್ಲಿ ದಾನಿಗಳ ಮೂಲಕ 6,017 ಯೂನಿಟ್ ರಕ್ತ ಸಂಗ್ರಹಿಸಿ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ನೀಡಿದ್ದು, ಇದು ನಿಜಕ್ಕೂ ಮಹತ್ಕಾರ್ಯವೇ ಸರಿ. ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಸ್ವತಃ 76 ಬಾರಿ ರಕ್ತದಾನ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ನಮ್ಮ ಸಮಾಜಕ್ಕೆ ಅಗತ್ಯ ಸೌಲಭ್ಯ ದೊರಕಿಸಿ ಕೊಡುವುದು, ಸಮುದಾಯದ ಗೌರವ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ. ಮೈಸೂರಲ್ಲಿ ಸಮುದಾಯದ ವಿದ್ಯಾರ್ಥಿ ಗಳಿಗೆ ಹಾಸ್ಟೆಲ್ ಕಟ್ಟಡ ನಿರ್ಮಿಸಲು ಇಂದು ಶಂಕುಸ್ಥಾಪನೆ ನೆರವೇರಿಸಿದ್ದು, ಇದೊಂದು ಸ್ವಾಗತಾರ್ಹ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾ ಡಿದ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ನಮ್ಮ ಮಹಾಸಭಾ 1908ರಲ್ಲಿ ಮೈಸೂರಿ ನಲ್ಲೇ ಅಸ್ತಿತ್ವಕ್ಕೆ ಬಂದಿತು. 1914ರ ನಂತರ ಬೆಂಗಳೂರನ್ನು ಮುಖ್ಯ ಕೇಂದ್ರವಾಗಿಸಿ ಕೊಂಡು ಕಾರ್ಯಚಟುವಟಿಕೆ ಮುಂದು ವರೆಸಿತು. 1922ರಲ್ಲಿ ಮೈಸೂರು ಮಹಾ ರಾಜರಿಂದ ಬೆಂಗಳೂರಿನಲ್ಲಿ ಮಹಾಸಭಾಗೆ ನಿವೇಶನವೂ ದೊರೆಯಿತು ಎಂದು ನೆನಪಿಸಿ ಕೊಂಡರು. ಮೈಸೂರಿನಲ್ಲಿ ಸಮುದಾ ಯದ ವಿದ್ಯಾರ್ಥಿಗಳ ಹಾಸ್ಟೆಲ್ 2021ರ ಡಿಸೆಂಬರ್‍ನಲ್ಲಿ ಉದ್ಘಾಟನೆಗೊಳ್ಳುವ ವಿಶ್ವಾಸ ವಿದೆ. ಮಹಾಸಭಾ ಕೇವಲ ನಮ್ಮ ಸಮಾ ಜಕ್ಕೆ ಸೀಮಿತಗೊಳ್ಳದೇ ಎಲ್ಲಾ ಸಮು ದಾಯ ದುರ್ಬಲರಿಗೂ ನೆರವಾಗುತ್ತಿದೆ. ವಿಧವೆಯರಿಗೆ, ಅಂಗವಿಕಲರಿಗೆ ಮಾಸಾ ಶನ, ವಿದ್ಯಾರ್ಥಿವೇತನ ಸೇರಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರಲ್ಲಿ ಶೇ.75ರಷ್ಟು ನಮ್ಮ ಸಮುದಾಯಕ್ಕೆ, ಶೇ.25ರಷ್ಟನ್ನು ಇನ್ನಿತರ ದುರ್ಬಲರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಹೆಚ್.ಪಿ.ಮಂಜುನಾಥ್, ಮಹಾನಗರ ಪಾಲಿಕೆ ಸದಸ್ಯ ಸಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »