ಹುಣಸೂರು ತಾಲೂಕಿನ 7 ಗ್ರಾಮಗಳು ಸೀಲ್‍ಡೌನ್
ಮೈಸೂರು

ಹುಣಸೂರು ತಾಲೂಕಿನ 7 ಗ್ರಾಮಗಳು ಸೀಲ್‍ಡೌನ್

April 29, 2021

ಹುಣಸೂರು, ಏ.28(ಕೆಕೆ)-ಹುಣ ಸೂರು ತಾಲೂಕಿನಲ್ಲಿ ಕೊರೊನಾ ಸೋಂಕಿನಿಂದ ಮಂಗಳವಾರ ಮೂವರು, ಬುಧವಾರ ಇಬ್ಬರು ಸೇರಿದಂತೆ ಹುಣ ಸೂರಿನಲ್ಲಿ ಹತ್ತು ದಿನಗಳಿಂದೀಚೆಗೆ 12ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಸೋಂಕು ಹೆಚ್ಚಾಗಿ ವ್ಯಾಪಿಸಿರುವ 12 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದ್ದಾರೆ.

ಕೋವಿಡ್-19 ಸೋಂಕಿನ ಪ್ರಖರತೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದರಿಂದ ಮೃತ ಪಡುತ್ತಿರುವವರ ಸಾವಿನ ಸಂಖ್ಯೆಯು ಹೆಚ್ಚಾಗಿ ಜನರಲ್ಲಿ ಭಯದ ಆತಂಕವನ್ನು ಸೃಷ್ಟಿಸುತ್ತಿದೆ. ಮಂಗಳವಾರ ನಗರದ ಮುಸ್ಲಿಂ ಬ್ಲಾಕ್‍ನಲ್ಲಿ ಇಬ್ಬರು, ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಒಬ್ಬರು ಹಾಗೂ ಬುಧವಾರ ನಗರದ ಮುಸ್ಲಿಂ ಬ್ಲಾಕ್‍ನಲ್ಲಿ ಒಬ್ಬರು, ಜಾಬಗೆರೆ ಗ್ರಾಮದಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಸೋಂಕು ವ್ಯಾಪಕವಾಗಿ ಹಬ್ಬಿರುವ ಅರಸು ಕಲ್ಲಹಳ್ಳಿ ಗ್ರಾಮದಲ್ಲಿ 30 ವರ್ಷದ ಯುವಕ ಮತ್ತು 51 ವರ್ಷದ ಪುರುಷ ಸಾವನ್ನ ಪ್ಪಿದರೆ, ನಗರದ ಮುಸ್ಲಿಂ ಬಡಾವಣೆಯಲ್ಲಿ 70 ವರ್ಷದ ವೃದ್ಧ ಸಾವಿಗೀಡಾಗಿದ್ದಾರೆ ಎಂದು ತಾಲೂಕು ಅರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮಾಹಿತಿ ನೀಡಿದ್ದಾರೆ. ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿ ಕೊಂಡಿರುವ ಅರಸು ಕಲ್ಲಹಳ್ಳಿ, ಮುಳ್ಳೂರು, ಕೃಷ್ಣಾಪುರ, ಕೆಂಪಮ್ಮನ ಹೊಸೂರು, ಹಳೇ ಪುರ, ಮೋದೂರು ಮತ್ತು ಕೊತ್ತೇಗಾಲ ಗ್ರಾಮಗಳನ್ನು ಮಂಗಳವಾರ ಸಂಪೂರ್ಣ ವಾಗಿ ಸೀಲ್‍ಡೌನ್ ಮಾಡಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಗ್ರಾಮ ವ್ಯಾಪ್ತಿಯಲ್ಲಿ ವಿಲೇಜ್ ಮತ್ತು ಪಂಚಾ ಯಿತಿ ಟಾಸ್ಕ್‍ಫೋರ್ಸ್ ಸಮಿತಿಗಳು ಹೆಚ್ಚಿನ ಗಮನ ಹರಿಸಲಿವೆ. ಸೋಂಕಿತರನ್ನು ಪತ್ತೆ ಹಚ್ಚುವ ಮತ್ತು ಔಷಧೋಪಚಾರ ಒದಗಿ ಸುವ ಕಾರ್ಯ ಮಾಡಲಿದ್ದಾರೆ. ಹಾಗೂ ಹೋಂ ಐಸೋಲೇಷನ್ ಮತ್ತು ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯತೆ ಕುರಿತು ಮನೆ ಮನೆಗೆ ತೆರಳಿ ಮಾಹಿತಿ ನೀಡುವ ಕಾರ್ಯ ನಡೆಯಲಿದೆ ಎಂದರು.

ಶವ ಸಂಸ್ಕಾರಕ್ಕೆ ಸಜ್ಜು: ಕೋವಿಡ್‍ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ತಾಲೂಕು ಆಡಳಿತ ಸಜ್ಜಾಗಿದ್ದು, ಅಂತ್ಯಕ್ರಿಯೆ ನಡೆಸಲು ಸಂಬಂಧಿಕರು ಮುಂದೆ ಬಾರದಿದ್ದರೆ 12 ಜನರ ಸ್ವಯಂ ಸೇವಕರ ತಂಡವೊಂದು ಅಂತ್ಯಕ್ರಿಯೆ ನಡೆಸಲು ಸಿದ್ಧವಾಗಿದೆ. ಅಲ್ಲದೆ ನಗರಸಭೆಯ ಪೌರಕಾರ್ಮಿಕರು ಮತ್ತು ಆರೋಗ್ಯ ಸಿಬ್ಬಂದಿಯನ್ನು ಬಳಸಿಕೊಳ್ಳ ಲಾಗುವುದು ಎಂದು ತಹಸಿಲ್ದಾರ್ ಬಸವ ರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಕೋವಿಡ್ ವಾರ್ ರೂಂ: ತಾಲೂಕು ಕಚೇರಿಯಲ್ಲಿ ಕೋವಿಡ್ ವಾರ್ ರೂಂ ಆರಂಭಿಸಲಾಗಿದ್ದು, 24 ಗಂಟೆ ಕಾರ್ಯ ನಿರತವಾಗಿದೆ ಎಂದು ನೋಡಲ್ ಅಧಿಕಾರಿ ಸಂತೋಷ್‍ಕುಮಾರ್ ತಿಳಿಸಿದ್ದಾರೆ. ಕೋವಿಡ್ ವಾರ್ ರೂಂನ ನೋಡಲ್ ಅಧಿಕಾರಿಯಾಗಿ ಸಂತೋಷ್‍ಕುಮಾರ್ ಮತ್ತು ಉಪ ತಹಸೀ ಲ್ದಾರ್ ನರಸಿಂಹಯ್ಯ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ. ತಲಾ ಇಬ್ಬರು ಅಧಿಕಾರಿ ಗಳು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವ ಹಿಸಲಿದ್ದಾರೆ. ಕೋವಿಡ್ ಸಂಬಂಧಿಸಿದ ದೂರುಗಳು, ಸಲಹೆ, ಸೂಚನೆಗಳು ಮತ್ತು ಮಾಹಿತಿ ಅಗತ್ಯವಿರುವವರು ದೂ.08 222 -252040 ಸಂಪರ್ಕಿಸಿ ಮಾಹಿತಿ ಪಡೆಯ ಬಹುದು. ವಾರ್ ರೂಂನಿಂದ ಹೋಂ ಐಸೋಲೇಷನ್ ಆಗಿರುವವರ ಮಾಹಿತಿ, ಟೆಲಿಮೆಡಿಕೇಷನ್, ಪ್ರಥಮ ಸಂಪರ್ಕ ಹೊಂದಿರುವವರ ಮಾಹಿತಿ ಮುಂತಾದ ಸೇವೆ ಗಳನ್ನು ವಾರ್ ರೂಂನಿಂದ ನೀಡಲಾಗುತ್ತಿದೆ.

Translate »