ಮೂರ್ನಾಲ್ಕು ದಿನದಲ್ಲಿ ತುಳಸೀದಾಸ್  ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ
ಮೈಸೂರು

ಮೂರ್ನಾಲ್ಕು ದಿನದಲ್ಲಿ ತುಳಸೀದಾಸ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ

April 29, 2021

ಮೈಸೂರು, ಏ.28(ಆರ್‍ಕೆ)-ಮೂರ್ನಾಲ್ಕು ದಿನದೊಳಗೆ ಮೈಸೂರಿನ ನಂಜುಮಳಿಗೆ ಸರ್ಕಲ್ ಬಳಿ ಜೆಎಲ್‍ಬಿ ರಸ್ತೆಯಲ್ಲಿರುವ ಸೇಟ್ ಮೋಹನದಾಸ್ ತುಳಸೀದಾಸ ಆಸ್ಪತ್ರೆ ನೂತನ ಕಟ್ಟಡದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸಾ ಸೇವೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ರೊಂದಿಗೆ ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ 100 ಆಕ್ಸಿಜನೇಟೆಡ್ ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿ ಸಲು ನಡೆಯುತ್ತಿರುವ ಸಿದ್ಧತಾ ಕಾರ್ಯ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಪಾಸಿ ಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವು ದರಿಂದ ಆಕ್ಸಿಜನ್ ಬೆಡ್‍ಗಳಿಗೆ ಬೇಡಿಕೆ ಜಾಸ್ತಿಯಾಗಿದೆ ಎಂದರು.
ಪರಿಸ್ಥಿತಿಯನ್ನು ನಿಭಾಯಿಸಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಸೌಲಭ್ಯ ಒದಗಿ ಸುವ ಸಲುವಾಗಿ ಪಾಲಿಕೆ, ಕಾವೇರಿ ಆಸ್ಪತ್ರೆ ಹಾಗೂ ಪೊಲೀಸರ ನೆರವಿನಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ತುಳಸೀದಾಸ ಆಸ್ಪತ್ರೆ ನೂತನ ಕಟ್ಟಡವನ್ನು 100 ಆಕ್ಸಿಜನ್‍ಯುಕ್ತ ಬೆಡ್‍ನೊಂದಿಗೆ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿ ಸಲು ಹಗಲು-ರಾತ್ರಿ ತಯಾರಿ ನಡೆಸು ತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಹಾಸಿಗೆ, ದಿಂಬು, ಬೆಡ್‍ಶೀಟ್, ಮಂಚ ಸೇರಿದಂತೆ ಅಗತ್ಯ ಸಾಮಗ್ರಿಗಳು ಬಂದಿದ್ದು, ಸೆಂಟ್ರಲೈಸ್ಡ್ ಆಕ್ಸಿಜನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಆಮ್ಲಜನಕ ಸಿಲಿಂಡರ್‍ಗಳ ವ್ಯವಸ್ಥೆಯೂ ಆಗಿದೆ. ಕಾವೇರಿ ಆಸ್ಪತ್ರೆಯ ಡಾ. ಚಂದ್ರಶೇಖರ್ ಅವರು, ವೈದ್ಯರು, ನರ್ಸ್, ಹೌಸ್ ಕೀಪಿಂಗ್ ಸೌಲಭ್ಯ ಒದಗಿಸುತ್ತಾರೆ. ಮೈಸೂರು ಮಹಾ ನಗರಪಾಲಿಕೆ ಆಯುಕ್ತರು ಸ್ವಚ್ಛತೆ, ಸ್ಯಾನಿಟೈಸ್ ಮತ್ತು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ ಹಾಗೂ ಲಕ್ಷ್ಮೀಪುರಂ ಠಾಣೆ ಪೊಲೀಸರು ದಿನದ 24 ತಾಸು ಆಸ್ಪತ್ರೆಗೆ ಸೂಕ್ತ ಬಂದೋ ಬಸ್ತ್ ಒದಗಿಸಲಿದ್ದಾರೆ ಎಂದು ಸಚಿವ ಸೋಮಶೇಖರ್ ನುಡಿ ದರು. ಆಕ್ಸಿಜನ್ ಅಗತ್ಯವಿರುವ ಕೊರೊನಾ ಸೋಂಕಿತ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಲು ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ತರಾತುರಿ ಯಲ್ಲಿ ತಯಾರಿ ನಡೆಯುತ್ತಿದ್ದು, ಅತೀ ಶೀಘ್ರ ರೋಗಿಗಳನ್ನು ದಾಖಲು ಮಾಡಿ ಕೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು. ಮೈಸೂರು ಜಿಲ್ಲೆಗೆ 20 ಡ್ಯೂರಾ ಆಕ್ಸಿಜನ್ ಸಿಲಿಂಡರ್, 100 ವೆಂಟಿಲೇಟರ್‍ಗಳನ್ನು ಕೇಳಿದ್ದೆವು. 50 ವೆಂಟಿಲೇಟರ್‍ಗಳು ಸದ್ಯದಲ್ಲೇ ಬರಲಿದ್ದು, ಸಿಲಿಂಡರ್‍ಗಳನ್ನು ಈಗಾಗಲೇ ಪೂರೈಸ ಲಾಗಿದೆ. ಬೇಡಿಕೆಗನುಗುಣವಾಗಿ ರೆಮ್ ಡಿಸಿವಿರ್ ಔಷಧ ಮಂಜೂರಾಗಿದೆ. ಯಾರಾ ದರೂ ಈ ಔಷಧದ ಕೃತಕ ಕೊರತೆ ಸೃಷ್ಟಿಸಿ, ದುರುಪಯೋಗ ಮಾಡಿಕೊಂಡಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಕೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಅಡಿಷನಲ್ ಡಿಸಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಮುಡಾ ಆಯುಕ್ತ ಡಾ. ಸಿ.ಬಿ.ನಟೇಶ್, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್ ಸೇರಿದಂತೆ ಇತರ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Translate »