ಭಾನುವಾರ ಮೈಸೂರಲ್ಲಿ 700  ಮಂದಿಗೆ ಸೋಂಕು; 9 ಮಂದಿ ಸಾವು
ಮೈಸೂರು

ಭಾನುವಾರ ಮೈಸೂರಲ್ಲಿ 700 ಮಂದಿಗೆ ಸೋಂಕು; 9 ಮಂದಿ ಸಾವು

April 26, 2021

ಮೈಸೂರು, ಏ.25(ಎಸ್‍ಬಿಡಿ)- ಮೈಸೂರು ಜಿಲ್ಲೆ ಯಲ್ಲಿ ಸೋಂಕು ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿತ್ತಾದರೂ ಭಾನುವಾರ ಪುನಃ ಜಾಸ್ತಿಯಾಗಿದೆ. ಒಂದೇ ದಿನ 700 ಜನರಿಗೆ ಸೋಂಕು ದೃಢಪಟ್ಟಿದ್ದು, 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಳ: ಮೈಸೂರಿನಲ್ಲಿ 45, 60, 65, 77 ಹಾಗೂ 85 ವರ್ಷದ ಮಹಿಳೆಯರು, 61, 67, 68 ಹಾಗೂ 81 ವರ್ಷದ ಪುರುಷರು ಸೇರಿ ಒಟ್ಟು 9 ಸೋಂಕಿತರು ಸಾವನ್ನಪ್ಪಿರುವುದಾಗಿ ಭಾನು ವಾರದ ಬುಲೆಟಿನ್ ತಿಳಿಸಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸಾವಿನ ಸಂಖ್ಯೆ 1,153ಕ್ಕೆ ಹೆಚ್ಚಿದೆ.
5 ಸಾವಿರ ಸಕ್ರಿಯ: ಭಾನುವಾರದ ಸೋಂಕಿತರ ಸಂಖ್ಯೆ ಸೇರಿ ಮೈಸೂರಿನಲ್ಲಿ ಇಲ್ಲಿಯವರೆಗೆ 66,692 ಜನರಿಗೆ ಸೋಂಕು ಬಾಧಿಸಿದಂತಾಗಿದೆ. ಇಂದು 573 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ ಒಟ್ಟು 60,499 ಮಂದಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿನ್ನು 5,040 ಸಕ್ರಿಯ ಪ್ರಕರಣಗಳಿವೆ.

ಇವರಲ್ಲಿ 414 ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. 1124 ಸೋಂಕಿತರು ಹೋಂ ಐಸೊ ಲೇಷನ್‍ನಲ್ಲಿ, ಇನ್ನುಳಿದವರು ಕೋವಿಡ್ ಕೇರ್ ಸೆಂಟರ್, ಹೆಲ್ತ್ ಕೇರ್ಸ್ ಹಾಗೂ ಖಾಸಗಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

35 ಸಾವಿರ ಗಡಿ: ಬಾಗಲ ಕೋಟೆ 390, ಬಳ್ಳಾರಿ 732, ಬೆಳಗಾವಿ 336, ಬೆಂಗಳೂರು ಗ್ರಾಮಾಂತರ 864, ಬೆಂಗ ಳೂರು ನಗರ 20,733, ಬೀದರ್ 406, ಚಾಮರಾಜನಗರ 284, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 247, ಚಿತ್ರದುರ್ಗ 100, ದಕ್ಷಿಣ ಕನ್ನಡ 564, ದಾವಣಗೆರೆ 242, ಧಾರವಾಡ 546, ಗದಗ 76, ಹಾಸನ 768, ಹಾವೇರಿ 99, ಕಲಬುರಗಿ 626, ಕೊಡಗು 1,077, ಕೋಲಾರ 782, ಕೊಪ್ಪಳ 152, ಮಂಡ್ಯ 814, ಮೈಸೂರು 700, ರಾಯಚೂರು 643, ರಾಮನಗರ 225, ಶಿವಮೊಗ್ಗ 418, ತುಮಕೂರು 1,153, ಉಡುಪಿ 319, ಉತ್ತರಕನ್ನಡ 243, ವಿಜಯಪುರ 468 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 363 ಸೇರಿ ರಾಜ್ಯದಲ್ಲಿ ಭಾನುವಾರ 34,804 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ.

ಇದರೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 13,39,201ಕ್ಕೆ ಏರಿಕೆಯಾಗಿದ್ದು, ಭಾನುವಾರ ಗುಣಮುಖ ರಾಗಿ ಡಿಸ್ಚಾರ್ಜ್ ಆದವರು (6,982) ಸೇರಿ ಇಲ್ಲಿವರೆಗೆ 10,62,594 ಮಂದಿ ಸೋಂಕುಮುಕ್ತರಾಗಿದ್ದಾರೆ. ಭಾನುವಾರ 143 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 14,426ಕ್ಕೆ ಹೆಚ್ಚಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 2,62,162ಕ್ಕೆ ಏರಿಕೆಯಾಗಿದೆ.

Translate »