‘ಕೊಡವಾಮೆರ ಕೊಂಡಾಟ’ ಸಂಘಟನೆ ವತಿಯಿಂದ ‘ಕೊಡವ ನಾಳ್‍ಪಟ್ಟಿ’ ಬಿಡುಗಡೆ
ಮೈಸೂರು

‘ಕೊಡವಾಮೆರ ಕೊಂಡಾಟ’ ಸಂಘಟನೆ ವತಿಯಿಂದ ‘ಕೊಡವ ನಾಳ್‍ಪಟ್ಟಿ’ ಬಿಡುಗಡೆ

April 26, 2021

ಮೈಸೂರು,ಏ.25(ಎಂಕೆ)-ಮೈಸೂರಿನ ‘ಕೊಡವಾಮೆರ ಕೊಂಡಾಟ’ ಸಂಘ ಟನೆ ವತಿಯಿಂದ ಗೂಗಲ್ ಮೀಟ್ ವೆಬಿನಾರ್ ಮೂಲಕ ಕೊಡವ ದಿನಚರಿ ಯನ್ನೊಳಗೊಂಡ ‘ಕೊಡವ ನಾಳ್‍ಪಟ್ಟಿ’ಯನ್ನು ಭಾನುವಾರ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾ ಟಿಸಿದ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತ ನಾಡಿ, ಕೊಡವ ಸಮುದಾಯ ಪ್ರಪಂಚದಲ್ಲಿಯೇ ವಿಭಿನ್ನ ಆಚ ರಣೆಯನ್ನು ಹೊಂದಿದ್ದು, ನಮ್ಮದೇ ಆದ ಕಟ್ಟು ಪಾಡು ಗಳಿವೆ. ಇಂತಹ ವಿಶೇಷ ಆಚ ರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗ ಬೇಕು. ಈ ನಿಟ್ಟಿನಲ್ಲಿ ಇಂದಿನ ಕೊಡವ ಯುವ ಸಮೂಹ ಕಾರ್ಯೋನ್ಮುಖವಾಗಿರುವುದು ಶ್ಲಾಘನೀಯ ಎಂದರು.

‘ಕೊಡವ ನಾಳ್‍ಪಟ್ಟಿ’ಯನ್ನು ಬಿಡುಗಡೆ ಮಾಡಿದ ವಿರಾಜಪೇಟೆ ಕೊಡವ ಸಮಾಜ ಪೆÇಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಕೊಡವರು ತಮ್ಮ ತನವನ್ನು ಉಳಿಸಿಕೊಂಡು ಕೊಡವರಾಗಿಯೇ ಉಳಿಯಬೇಕಾ ದರೆ ಮೊದಲು ಕೊಡವ ಭಾಷೆ ಉಳಿವಿನ ಅಗತ್ಯವಿದೆ. ಪ್ರತಿಯೊಬ್ಬರು ಭಾಷೆಯ ಬೆಳವಣಿಗೆಯೊಂದಿಗೆ ಸಮುದಾಯದ ಏಳಿಗೆಗೆ ಒತ್ತು ನೀಡುವಂತೆ ತಿಳಿಸಿದರು.

‘ಕೊಡವ ನಾಳ್‍ಪಟ್ಟಿ’ ಸಿದ್ಧಪಡಿಸಿದ ಜ್ಯೋತಿಷಿ ಕರೋಟಿರ ಶಶಿ ಸುಬ್ರಮಣಿ, ಟ್ರಾವೆಲ್ ಕೂರ್ಗ್ ಸಂಸ್ಥೆಯ ಮಾಲೀಕ ಚೆಯ್ಯಂಡ ಸತ್ಯಗಣಪತಿ, ಗೋಣಿಕೊಪ್ಪ ಮುಳಿಯ ಸಂಸ್ಥೆಯ ಪಾಲುದಾರರಾದ ಮೇರಿಯಂಡ ಬೋಪಣ್ಣ, ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಉಪಾಧ್ಯಕ್ಷೆ ಮೂವೇರ ರೇಖಾಪ್ರಕಾಶ್ ಇನ್ನಿತರರು ಭಾಗವಹಿಸಿದ್ದರು.

Translate »