ತಿ.ನರಸೀಪುರದಲ್ಲಿ ಉತ್ತಮ ಪ್ರತಿಕ್ರಿಯೆ
ಮಂಡ್ಯ

ತಿ.ನರಸೀಪುರದಲ್ಲಿ ಉತ್ತಮ ಪ್ರತಿಕ್ರಿಯೆ

April 26, 2021

ತಿ.ನರಸೀಪುರ,ಏ.25(ಎಸ್‍ಕೆ)- ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕರೆ ನೀಡಿದ್ದ ವೀಕೆಂಡ್ ಕಫ್ರ್ಯೂಗೆ ಎರಡನೇ ದಿನವಾದ ಭಾನು ವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ 8 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ನಿಗದಿ ಪಡಿಸಿದ್ದ ಸಮಯದಲ್ಲಿ ಸಾರ್ವಜನಿಕರು ಪಟ್ಟಣಕ್ಕೆ ದೌಡಾಯಿಸಿ ಅಗತ್ಯ ವಸ್ತುಗಳನ್ನು ಖರೀದಿ ಸಿದರು. ಶನಿವಾರ ಕಫ್ರ್ಯೂ ಜಾರಿಯಲ್ಲಿ ದ್ದರೂ, ಕೆಲವು ಮಂದಿ ಸಾರ್ವಜನಿಕರು ಕುತೂಹಲಕ್ಕಾಗಿ ಪಟ್ಟಣದಲ್ಲಿ ಸುತ್ತಾಟ ನಡೆಸಿದರಾದರೂ, ಇಂದು ಪೆÇಲೀಸರ ಬಿಗಿ ಕ್ರಮದಿಂದಾಗಿ ಯಾರೊಬ್ಬರೂ ಮನೆಯಿಂದ ಹೊರ ಬರಲಿಲ್ಲ. ಭಾನುವಾರ ವಾರಾಂತ್ಯವಾದ್ದ ರಿಂದ ಮಟನ್ ಮತ್ತು ಚಿಕನ್ ಖರೀದಿಸಲು ಅಂಗಡಿಗಳ ಮುಂದೆ ಸಾರ್ವಜನಿಕರ ಗುಂಪು ಹೆಚ್ಚಾಗಿತ್ತು.

ಕೆಲವೊಂದು ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ, ಮತ್ಯಾವುದೇ ವಾಹನಗಳ ಸುಳಿವು ಪಟ್ಟಣದಲ್ಲಿ ಕಂಡು ಬರಲಿಲ್ಲ. ಬೆಳಗ್ಗೆಯಿಂದಲೇ ಟೀ, ಕಾಫೀ ಶಾಪ್‍ಗಳು ಬಾಗಿಲು ಮುಚ್ಚಿದ್ದರಿಂದ ಟೀ, ಕಾಫಿಗಾಗಿ ಜನರು ಪರದಾಡುವಂತಾಯಿತು. ಮದುವೆ ಮಂಟಪಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲಿಸಿದ್ದರಿಂದ ಕಲ್ಯಾಣ ಮಂಟಪಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರಲಿಲ್ಲ.

ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪೆÇಲೀಸರು ಬಿಗಿ ಕಾವಲು ಮಾಡಿದ್ದರಿಂದ ಇಂದು ಪಟ್ಟಣ ರೌಂಡ್ಸ್ ಹಾಕಲು ಬರುತ್ತಿದ್ದ ಪಡ್ಡೆ ಹುಡುಗರ ಬೈಕಿನ ಸದ್ದು ಕೇಳಿ ಬರಲಿಲ್ಲ. ದಿನಸಿ ಅಂಗಡಿಗಳು, ಹೋಟೆಲ್‍ಗಳು 10 ಗಂಟೆಯಾಗುತ್ತಿದ್ದಂತೆ ಮುಚ್ಚಿದರು. ಖಾಸಗಿ, ಕೆಎಸ್‍ಆರ್‍ಟಿಸಿ ಬಸ್‍ಗಳ ಸೇವೆಗಳೂ ಸಹ 10 ಗಂಟೆ ನಂತರ ಸ್ಥಗಿತಗೊಂಡವು. ಮೆಡಿಕಲ್ ಸ್ಟೋರ್‍ಗಳು ಎಂದಿನಂತೆ ಸೇವೆಗೆ ತೆರೆದುಕೊಂಡಿದ್ದವು.

Translate »