ರಸಗೊಬ್ಬರಕ್ಕೆ ಹೆಚ್ಚಿನ ಬೆಲೆ ಕೇಳಿದರೆ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಿ
ಮಂಡ್ಯ

ರಸಗೊಬ್ಬರಕ್ಕೆ ಹೆಚ್ಚಿನ ಬೆಲೆ ಕೇಳಿದರೆ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಿ

April 26, 2021

ಹನಗೋಡು, ಏ. 25(ಮಹೇಶ್)- ರೈತರು ರಸಗೊಬ್ಬರ ಅಂಗಡಿಗಳಲ್ಲಿ ದಾಸ್ತಾನು ಇರುವ ರಸಗೊಬ್ಬರವನ್ನು ಹಳೇ ಎಂಆರ್‍ಪಿ ದರದಲ್ಲೇ ಕೊಂಡುಕೊಳ್ಳÀಬೇಕು. ಅಂಗಡಿ ಯವರು ಹೆಚ್ಚಿನ ಬೆಲೆ ಕೇಳಿದರೆ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಬೇಕೆಂದು ಹುಣಸೂರು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ ತಿಳಿಸಿದರು.

ಹನಗೊಡು ರೈತ ಸಂಪರ್ಕ ಕೇಂದ್ರದಲ್ಲಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಟಾರ್ಪಾಲ್ ವಿತರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗೊಬ್ಬರ ಅಂಗಡಿಗಳಲ್ಲಿ ಹಾಲಿ ಲಭ್ಯವಿರುವ ರಸಗೊಬ್ಬರವನ್ನು ಗೊಬ್ಬರ ಚೀಲಗಳಲ್ಲಿ ನಮೂದಿಸಿರುವ ಬೆಲೆಯನ್ನಷ್ಟೆ ನೀಡಬೇಕು. ಕೆಲ ಅಂಗಡಿಗಳಲ್ಲಿ ಹೊಸ ದರದ ಗೊಬ್ಬರ ಚೀಲ ತೋರಿಸಿ ಹಳೇ ದರದ ಗೊಬ್ಬರ ನೀಡುತ್ತಿದ್ದಾರೆಂಬ ದೂರು ಬಂದಿದೆ. ಅಂತಹ ಅಂಗಡಿಗಳ ವ್ಯಾಪಾರ ಪರವಾನಗಿಯನ್ನು ರದ್ದು ಪಡಿಸಲಾಗುವುದೆಂದರು.

ಜಿಪಂ ಸದಸ್ಯ ಕಟ್ಟನಾಯಕ ಮಾತನಾಡಿ ರೈತರು ತಮ್ಮ ಜಮೀನಿನ ಬೆಳೆಯ ಫೋಟೋ ತೆಗೆದು ಕೃಷಿ ಇಲಾಖೆಯ ಆಪ್‍ನಲ್ಲಿ ಅಪ್‍ಲೋಡ್ ಮಾಡಿಸಿಕೊಳ್ಳ ಬೇಕು. ಇದರಿಂದ ಅತಿಯಾದ ಮಳೆ, ಪ್ರವಾಹ ಸೇರಿದಂತೆ ಹಾನಿ ಸಂದರ್ಭದಲ್ಲಿ ಪರಿಹಾರ ಪಡೆದು ಕೊಳ್ಳಲು ಹಾಗೂ ರೈತರು ಬೆಳೆದ ಉತ್ಪನ್ನಗಳನ್ನು ಎ.ಪಿ.ಎಂ.ಸಿ. ಮತ್ತಿತರ ಮಾರುಕಟ್ಟೆಗಳಲ್ಲಿ ಸÀರ್ಕಾರ ಘೋಷಿಸುವ ಬೆಂಬಲ ಬೆಲೆ ಮೂಲಕ ಮಾರಾಟಕ್ಕೆ ಮತ್ತು ಸÀರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಸಹಕಾರಿ ಯಾಗಲಿದೆ ಎಂದರು.

ಹನಗೋಡು ಕೃಷಿ ಅಧಿಕಾರಿ ಮಹಮದ್ ಅಕೀಂಪಾಷಾ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಹನಗೋಡು ಹೋಬಳಿಗೆ 529 ಟಾರ್ಪಾಲ್ ಬಂದಿದ್ದು, ಅರ್ಜಿ ಸಲ್ಲಿಸಿದ್ದ 479 ಜನ ಎಲ್ಲ ಸಾಮಾನ್ಯ ವರ್ಗದ ರೈತರಿಗೆ ಟಾರ್ಪಾಲ್ ಸಿಗಲಿದೆ. ಎಸ್ಸಿ /ಎಸ್‍ಟಿ ಮೀಸಲಾತಿಯಡಿಯಲ್ಲಿ 119 ಅರ್ಜಿಗಳು ಬಂದಿದ್ದರಿಂದ ಪ್ರತಿ ಪಂಚಾಯಿತಿಗಳಿಗೆ ವಹಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಜನಪ್ರತಿನಿಧಿಗಳು ಹಾಗೂ ರೈತರ ಸಮ್ಮಖದಲ್ಲಿ ಲಾಟರಿ ಎತ್ತಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ, ಮುದಗನೂರು ಸುಭಾಶ್, ತಾಪಂ ಸದಸ್ಯರಾದ ನಂದೀಶ್, ಮಂಜುಳ, ದೊಡ್ಡ ಹೆಜ್ಜೂರು ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಜಿಲ್ಲಾ ಎಸ್ಸಿ /ಎಸ್‍ಟಿ ಹಿತರಕ್ಷಣ ಸಮಿತಿ ಸದಸ್ಯ ಮಹದೇವ್, ಮಾಜಿ ಗ್ರಾಪಂ ಸದಸ್ಯ ನಾಗೇಶ, ಕೆ.ಡಿ.ಕುಮಾರ್, ಮುಖಂಡÀ ರಾಘು ಸೇರಿದಂತೆ ಇತರರಿದ್ದರು.

Translate »