ಮೈಸೂರಲ್ಲಿ ಭಾನುವಾರ 734 ಮಂದಿಗೆ ಕೊರೊನಾ
ಮೈಸೂರು

ಮೈಸೂರಲ್ಲಿ ಭಾನುವಾರ 734 ಮಂದಿಗೆ ಕೊರೊನಾ

August 31, 2020

ಮೈಸೂರು, ಆ.30(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಭಾನುವಾರ 734 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,544ಕ್ಕೆ ಏರಿದೆ. ಸೋಂಕಿನಿಂದ ಗುಣಮುಖರಾದ

255 ಮಂದಿಯನ್ನು ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ. ಇವರನ್ನೊಳಗೊಂಡಂತೆ ಈವರೆಗೆ 12,385 ಜನ ಸೋಂಕು ಜಯಿಸಿದಂತಾಗಿದೆ. ಇನ್ನು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗಿಲ್ಲ. ನಿತ್ಯವೂ 10ಕ್ಕಿಂತ ಹೆಚ್ಚು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆ.28ರಂದು 50 ವರ್ಷದ ವ್ಯಕ್ತಿ, ಆ.29ರಂದು 44 ಹಾಗೂ 78 ವರ್ಷದ ವ್ಯಕ್ತಿಗಳು, ಆ.30ರಂದು 40 ವರ್ಷದ ಮಹಿಳೆ, 60 ವರ್ಷದ ಇಬ್ಬರು ಮಹಿಳೆಯರು, 45, 48, 60, 68 ಹಾಗೂ 73 ವರ್ಷದ ವೃದ್ಧರು ಸೇರಿದಂತೆ 11 ಮಂದಿ ಮೃತಪಟ್ಟಿರುವುದಾಗಿ ಭಾನುವಾರ ವರದಿಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 438ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರಲ್ಲಿ ಗುಣಮುಖರಾದವರು ಹಾಗೂ ಸಾವಿನ ಸಂಖ್ಯೆಯನ್ನು ಹೊರತುಪಡಿಸಿ ಜಿಲ್ಲೆಯಲ್ಲಿನ್ನು 4,721 ಸಕ್ರಿಯ ಪ್ರಕರಣಗಳಿವೆ. ಇವರೆಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಹೆಲ್ತ್ ಕೇರ್ಸ್, ಕೋವಿಡ್ ಕೇರ್ ಸೆಂಟರ್ಸ್, ಖಾಸಗಿ ಆಸ್ಪತ್ರೆಗಳು ಹಾಗೂ ಹೋಂ ಐಸೋಲೇಷನ್‍ನಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

ರಾಜ್ಯದ ವಿವರ: ಬೆಂಗಳೂರು ನಗರ 2,821, ಮೈಸೂರು 734, ಬಳ್ಳಾರಿ 428, ದಾವಣಗೆರೆ 373, ಬೆಳಗಾವಿ 357, ದಕ್ಷಿಣಕನ್ನಡ 334, ತುಮಕೂರು 314, ಧಾರವಾಡ 300, ಶಿವಮೊಗ್ಗ 292, ಹಾಸನ 268, ಉಡುಪಿ 254, ಕೊಪ್ಪಳ 240, ಚಿಕ್ಕಮಗಳೂರು 207, ಕಲಬುರಗಿ 199, ಗದಗ 196, ಮಂಡ್ಯ 179, ರಾಯಚೂರು 147, ಬಾಗಲಕೋಟೆ 132, ವಿಜಯಪುರ 127, ಚಿಕ್ಕಬಳ್ಳಾಪುರ 127, ರಾಮನಗರ 114, ಉತ್ತರಕನ್ನಡ 113,
ಹಾವೇರಿ 105, ಚಿತ್ರದುರ್ಗ 95, ಕೋಲಾರ 82, ಬೀದರ್ 73, ಯಾದಗಿರಿ 67, ಕೊಡಗು 65, ಬೆಂಗಳೂರು ಗ್ರಾಮಾಂತರ 55 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 54 ಸೇರಿ ದಂತೆ ರಾಜ್ಯದಲ್ಲಿ ಭಾನುವಾರ 8,852 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಸೇರಿದಂತೆ ರಾಜ್ಯ ದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿಕೆಯಾಗಿದೆ. ಭಾನು ವಾರ ಡಿಸ್ಚಾರ್ಜ್ ಆದ 7,101 ಮಂದಿ ಸೇರಿದಂತೆ ಈವರೆಗೆ ಒಟ್ಟು 2,42, 229 ಸೋಂಕಿತರು ಗುಣಮುಖ ರಾಗಿದ್ದಾರೆ. ಚಿಕಿತ್ಸೆ ಫಲಿಸದೇ 106 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 5,589ಕ್ಕೆ ಹೆಚ್ಚಿದೆ. ರಾಜ್ಯದಲ್ಲಿನ್ನು 88,091 ಸಕ್ರಿಯ ಪ್ರಕರಣಗಳಿದ್ದು, ಇವರೆಲ್ಲಾ ಶುಶ್ರೂಷೆ ಪಡೆಯುತ್ತಿದ್ದಾರೆ. ರ್ಯಾಪಿಡ್ ಆಂಟಿಜೆನ್ ಟೆಸ್ಟ್ 26,176, ಆರ್‍ಟಿಪಿಸಿಆರ್ ಹಾಗೂ ಇತರೆ ವಿಧಾನದಿಂದ 40,781 ಸೇರಿ ಭಾನುವಾರ 66,957 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನು ಒಳಗೊಂಡಂತೆ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 28,52,675 ಟೆಸ್ಟಿಂಗ್ ನಡೆಸಲಾಗಿದೆ.

Translate »