ಮೈಸೂರು ಜಿಲ್ಲೆಯಲ್ಲಿ ಮಂಗಳವಾರ 737 ಜನರಿಗೆ ಕೊರೊನಾ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಮಂಗಳವಾರ 737 ಜನರಿಗೆ ಕೊರೊನಾ ಸೋಂಕು

September 2, 2020

ಮೈಸೂರು, ಸೆ.1(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಮಂಗಳವಾರವೂ 737 ಜನರಿಗೆ ಜಾಡ್ಯ ಅಂಟಿದೆ.

ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 18,686ಕ್ಕೆ ಏರಿಕೆಯಾಗಿದೆ. ಮಂಗಳವಾರ 178 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 12,931 ಸೋಂಕಿತರು ಗುಣಮುಖ ರಾದಂತಾಗಿದೆ. ಮತ್ತೆ 12 ಮಂದಿ ಸೋಂಕಿತರು ಮೃತಪಟ್ಟಿದ್ದು,
ಒಟ್ಟು ಸಾವಿನ ಸಂಖ್ಯೆ 456ಕ್ಕೆ ಏರಿದೆ. ಇನ್ನು 5,299 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ಕೋವಿಡ್ ಆಸ್ಪತ್ರೆ, ಹೆಲ್ತ್
ಕೇರ್ಸ್, ಕೋವಿಡ್ ಕೇರ್ ಸೆಂಟರ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

12 ಸಾವು: ಆರು ಮಂದಿ ಮಹಿಳೆಯರು ಹಾಗೂ ಆರು ಮಂದಿ ಪುರುಷರು ಸೇರಿ ಮತ್ತೆ 12 ಸೋಂಕಿತರು ಸಾವನ್ನ ಪ್ಪಿದ್ದಾರೆ. ಆ.29ರಂದು 55 ವರ್ಷದ ಮಹಿಳೆ, ಆ.30ರಂದು 30 ವರ್ಷದ ಮಹಿಳೆ, 73 ವರ್ಷದ ವೃದ್ಧ, ಆ.31ರಂದು 48, 62, 65 ವರ್ಷದ ಮಹಿಳೆಯರು, 60 ವರ್ಷದ ಇಬ್ಬರು ಹಾಗೂ 45 ವರ್ಷದ ವ್ಯಕ್ತಿ, ಸೆ.1ರಂದು 45, 79 ಹಾಗೂ 83 ವರ್ಷದ ವೃದ್ಧರು ಮೃತಪಟ್ಟಿದ್ದಾರೆಂದು ಮಂಗಳವಾರದ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ 9 ಸಾವಿರ: ಬೆಂಗಳೂರು ನಗರ 2967, ಮೈಸೂರು 737, ಹಾಸನ 461, ಬಳ್ಳಾರಿ 393, ದಕ್ಷಿಣಕನ್ನಡ 352, ತುಮಕೂರು 327, ಬೆಳಗಾವಿ 316, ದಾವಣಗೆರೆ 289, ರಾಯಚೂರು 245, ಶಿವಮೊಗ್ಗ 233, ಕಲಬುರಗಿ 220, ಚಿಕ್ಕಮಗಳೂರು 210, ಧಾರವಾಡ 199, ಮಂಡ್ಯ 197, ಕೊಪ್ಪಳ 195, ಗದಗ 194, ಚಿತ್ರದುರ್ಗ 164, ಉಡುಪಿ 161, ಹಾವೇರಿ 153, ಬೆಂಗಳೂರು ಗ್ರಾಮಾಂತರ 145, ಯಾದಗಿರಿ 142, ಬಾಗಲಕೋಟೆ 136, ಉತ್ತರಕನ್ನಡ 114, ಚಿಕ್ಕಬಳ್ಳಾಪುರ 106, ರಾಮನಗರ 105, ವಿಜಯಪುರ 67, ಕೋಲಾರ 64, ಬೀದರ್ 63, ಕೊಡಗು 54, ಚಾಮರಾಜನಗರ ಜಿಲ್ಲೆಯಲ್ಲಿ 49 ಸೇರಿದಂತೆ ರಾಜ್ಯದಲ್ಲಿ ಮಂಗಳವಾರ ದಾಖಲೆಯ 9,058 ಪ್ರಕರಣ ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,51,481ಕ್ಕೆ ಏರಿಕೆಯಾಗಿದೆ. ಮಂಗಳವಾರ ಡಿಸ್ಚಾರ್ಜ್ ಆದ 5,159 ಮಂದಿ ಸೇರಿದಂತೆ ಈವರೆಗೆ ಒಟ್ಟು 2,54,626 ಸೋಂಕಿತರು ಗುಣಮುಖರಾದಂತಾಗಿದೆ. ಮತ್ತೆ 135 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 5,837ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿನ್ನು 90,999 ಸಕ್ರಿಯ ಪ್ರಕರಣಗಳಿವೆ. ಇನ್ನೆರಡು ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಲಕ್ಷ ಗಡಿ ದಾಟುವ ಸಾಧ್ಯತೆ ಇದೆ.

ಟೆಸ್ಟಿಂಗ್ ವಿವರ: ರಾಜ್ಯದಲ್ಲಿ ಮಂಗಳವಾರ ಬರೋಬ್ಬರಿ 83,670 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈವರೆಗೆ ಒಟ್ಟು 29,79,477 ಟೆಸ್ಟಿಂಗ್ ನಡೆಸಲಾಗಿದೆ.

Translate »