ಮೈಸೂರು, ಆ.16- 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೃಹತ್ ರಕ್ತ ದಾನ ಶಿಬಿರವನ್ನು ತೇರಾಪಂಥಾ ಯುವಕ ಪರಿಷದಾ ಹಾಗೂ ರಕ್ತದಾನ ಮಹಾದಾನ ಗೋಭಕ್ತ ಸಂಘದ ವತಿ ಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಆಯುರ್ವೇದಿಕ್ ಆಸ್ಪತ್ರೆ ಸಭಾಂಗಣದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು
75ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ವಿಶೇಷವಾಗಿ ಸ್ವಾತಂತ್ರ್ಯ ದಿನಾ ಚರಣೆಯನ್ನು ಆಚರಿಸಿದ್ದಾರೆ. ಕೊರೊನಾ ಸಂಕಷ್ಟ ಸಮಯದಲ್ಲೂ ರಕ್ತದಾನದಂತಹ ಸಾಮಾಜಿಕ ಕಾಳಜಿಯ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಕ್ತ ದಾನ ಶಿಬಿರ ಆಯೋಜಿಸಿದ್ದು ಸ್ವಾತಂತ್ರ್ಯ ದಲ್ಲಿ ವೀರ ಮರಣ ಹೊಂದದಂತೆ ಮಹಾನ್ ಪುರುಷರ ಹೆಸರಿನಲ್ಲಿ ರಕ್ತದಾನ ಮಾಡಲು ಮುಂದಾಗಿರುವುದು ಶ್ಲಾಘನೀಯ. ಕೊರೊನಾ ಸಂಕಷ್ಟದ ಸಮಯದಲ್ಲಿ ನಾವು ನಮ್ಮ ಕುಟುಂಬ ನೆರೆಹೊರೆಯವರು ಆರೋ ಗ್ಯದ ದೃಷ್ಟಿಯಿಂದ ಅತ್ಯಂತ ಎಚ್ಚರಿಕೆಯಿಂ ದಿರಬೇಕು. ಈ ಸಂಕಷ್ಟ ಸಮಯದಲ್ಲಿ ರಕ್ತದಾನ ಕಾರ್ಯಕ್ರಮದಲ್ಲಿ ಕೈಜೋಡಿಸು ತ್ತಿರುವುದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದರು. ಈ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ್ಣ, ರಕ್ತದಾನ ಮಹಾದಾನ ಗೋಭಕ್ತ ಸಂಘದ ಪ್ರಕಾಶ್ ನಿಖಂ, ವೈದ್ಯರಾದ ಡಾ. ಮಮತಾ, ಡಾ.ಕಿರಣ್, ಮಾಜಿ ಪಾಲಿಕೆ ಸದಸ್ಯ ಪಾರ್ಥಸಾರಥಿ, ದೇವೇಂದ್ರ, ಪಹರಿಯಾ. ವಿಕಾಶ್ ರಾತೋಡ್, ಪ್ರಕಾಶ್ ರಾತೋಡ್, ದಾನಾ ರಾಮ್ ಪರಿಹಾರ್, ಗೂಡಾರಾಮ್ ಕಗ್, ಆನಂದ್ ಮಂದೋಟ್, ಚಿರಂಜೀಲಾಲ್ ಕುಮವತ್, ರಮೇಶ್ ಚೋಯಲ್, ರಾಕೇಶ್ ಇನ್ನಿತರರಿದ್ದರು.