ಮೈಸೂರು ಅರಸರೇ ಆತ್ಮನಿರ್ಭರ ಪರಿಕಲ್ಪನೆಗೆ ಆದ್ಯತೆ ನೀಡಿ ಸ್ವಾವಲಂಬಿ ರಾಜ್ಯ ಸ್ಥಾಪಿಸಿದ್ದರು
ಮೈಸೂರು

ಮೈಸೂರು ಅರಸರೇ ಆತ್ಮನಿರ್ಭರ ಪರಿಕಲ್ಪನೆಗೆ ಆದ್ಯತೆ ನೀಡಿ ಸ್ವಾವಲಂಬಿ ರಾಜ್ಯ ಸ್ಥಾಪಿಸಿದ್ದರು

August 17, 2020

ಮೈಸೂರು, ಆ.16(ಎಂಟಿವೈ)- ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ ಒಡೆಯರ್ ವಂಶ ಸ್ಥರು ತಮ್ಮ ಅವಧಿಯಲ್ಲಿ ಆತ್ಮನಿರ್ಭರ ಪರಿಕಲ್ಪನೆ ಯನ್ನು ಜಾರಿಗೆ ತಂದು, ಕರ್ನಾಟಕವನ್ನು ಸ್ವಾವ ಲಂಬಿ ರಾಜ್ಯವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿ ದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರ ಆಯೋಜಿಸಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆ ಸಮಾ ರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತ ನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ `ಆತ್ಮ ನಿರ್ಭರ ಭಾರತ’ ಘೋಷಣೆ ಮಾಡುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ದೇಸಿಯ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಆದರೆ, ಮೈಸೂ ರಿನ ಒಡೆಯರು ಅಂದೇ ಈ ಪರಿಕಲ್ಪನೆಯನ್ನು ಅನು ಷ್ಠಾನಗೊಳಿಸಿ, ದೇಶದಲ್ಲೇ ಮೊದಲು ಎನಿಸಿರುವ ಹಲವು ಕೈಗಾರಿಕೆಗಳು ಅಭಿವೃದ್ಧಿಗೊಳಿಸಿದ್ದರು. ಮೈಸೂರು ಲ್ಯಾಂಪ್ಸ್, ಭದ್ರಾವತಿ ಕಾಗದ ಕಾರ್ಖಾನೆ, ಹೆಚ್‍ಎಎಲ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ, ಶ್ರೀಗಂಧದ ಎಣ್ಣೆ ಕಾರ್ಖಾನೆ, ಮೈಶು ಗರ್ ಸಕ್ಕರೆ ಕಾರ್ಖಾನೆ, ಕೆಆರ್‍ಎಸ್ ಅಣೆಕಟ್ಟೆ, ಶಿವನ ಸಮುದ್ರ ಜಲವಿದ್ಯುತ್ ಘಟಕ, ಮೈಸೂರು ವಿಶ್ವ ವಿದ್ಯಾಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಇನ್ನೂ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿ ಮೈಸೂರು ಸಂಸ್ಥಾನವನ್ನು ಸ್ವಾವಲಂಬನೆಗೊಳಿಸಲು ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಮೈಸೂರು ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಕರ್ನಾ ಟಕವೇ ಹೆಮ್ಮೆಪಡುವಂತೆ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಒಡೆಯರ್ ವಂಶಸ್ಥರು ಅಭಿವೃದ್ಧಿ ಕಾರ್ಯ ಗಳಿಗೆ ಒತ್ತು ನೀಡಿದ್ದರಿಂದ ಮೈಸೂರು ಜಿಲ್ಲೆಯು ರಾಜ್ಯ ದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಬಣ್ಣಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ 49 ಪರಿಹಾರ ಕೇಂದ್ರ ಸಿದ್ಧಪಡಿಸಿಕೊಳ್ಳಲಾಗಿತ್ತು. ಜಲಾಶಯಗಳಲ್ಲಿ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದ ಪರಿಣಾಮವಾಗಿ ಈ ಎಲ್ಲ ಪರಿಹಾರ ಕೇಂದ್ರಗಳನ್ನು ಬಳಸಬೇಕಾದ ಅನಿವಾರ್ಯತೆ ಒದಗಿ ಬರಲಿಲ್ಲ. 2-3 ಪರಿಹಾರ ಕೇಂದ್ರಗಳನ್ನು ಮಾತ್ರ ಬಳಸುತ್ತಿದ್ದು, ಇಲ್ಲಿಗೆ 133 ಜನರನ್ನು ಸ್ಥಳಾಂತರಿಸಿ ಆಶ್ರಯ ನೀಡಲಾಯಿತು ಎಂದರು.

ಕಳೆದ 2 ವರ್ಷಗಳೂ ಪ್ರವಾಹದಿಂದ ಜಿಲ್ಲೆಯಲ್ಲಿ ಅಪಾರ ನಷ್ಟ-ಸಾವು ನೋವು ಸಂಭವಿಸಿತ್ತು. ಈ ಬಾರಿ ಸುಮಾರು 10 ದಿನಗಳು ಮುಂಚಿತವಾಗಿಯೇ ಮುಂಜಾಗ್ರತಾ ಕ್ರಮಕೈಗೊಳ್ಳುವ ಮೂಲಕ ಸಾವು-ನೋವು, ನಷ್ಟವನ್ನು ತಡೆಯಲಾಗಿದೆ. ಮುನ್ನೆಚ್ಚರಿಕೆ ವಹಿಸಿ ಕಬಿನಿ ಜಲಾಶಯದಿಂದ ನಿಯಂತ್ರಿತ ಪ್ರಮಾ ಣದ ನೀರನ್ನು ನದಿಗೆ ಹರಿಸಲಾಯಿತು. ಇದರಿಂದ ಅನಾಹುತ ಸಹ ತಪ್ಪಿಸಲಾಗಿದೆ ಎಂದರು.

ಇದೇ ವೇಳೆ ತ್ರಿವರ್ಣ ಧ್ವಜ ಬಣ್ಣಗಳ ಬಲೂನ್‍ಗಳನ್ನು ಹಾರಿಬಿಡಲಾಯಿತು. ಅಲ್ಲದೆ ಕೊರೊನಾ ವಾರಿಯರ್ಸ್, ಕೋವಿಡ್‍ನಿಂದ ಗುಣಮುಖರಾದವರಿಗೆ ಜಿ¯್ಲÁಡ ಳಿತ ವತಿಯಿಂದ ಸನ್ಮಾನಿಸಲಾಯಿತು. ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ 611 ಅಂಕ ಗಳಿಸಿರುವ ಕೆ.ಆರ್. ನಗರ ತಾಲೂಕಿನ ಭೇರ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಂ.ಆರ್.ಭಾವನಾ ಅವರಿಗೆ 10 ಸಾವಿರ ರೂ. ನಗದು ಬಹುಮಾನ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಮೇಯರ್ ತಸ್ನಿಂ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎಲ್.ನಾಗೇಂದ್ರ, ಎಂಎಲ್‍ಸಿ ಮರಿತಿಬ್ಬೇ ಗೌಡ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇನ್ನಿತರರು ಉಪಸ್ಥಿತರಿದ್ದರು.

Translate »