ಮೀಸಲಾತಿ ಹೆಚ್ಚಳಕ್ಕೆ ಕಾನೂನು ರಕ್ಷಣೆ: ಸಿಎಂ
ಮೈಸೂರು

ಮೀಸಲಾತಿ ಹೆಚ್ಚಳಕ್ಕೆ ಕಾನೂನು ರಕ್ಷಣೆ: ಸಿಎಂ

October 9, 2022

ಬೆAಗಳೂರು, ಅ. ೮(ಕೆಎಂಶಿ)- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿ ರುವ ಸರ್ಕಾರದ ನಿರ್ಣಯಕ್ಕೆ ಕಾನೂನಿನ ರಕ್ಷಣೆ ಕೊಡುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ಮೂರ್ತಿ ನಾಗಮೋಹನ ದಾಸ್ ನೇತೃತ್ವದ ಸಮಿತಿ ವರದಿಯನ್ನೇ ಸರ್ಕಾರ ಒಪ್ಪಿಕೊಂಡಿದ್ದು, ಎಸ್ಸಿ ಮೀಸಲಾತಿ ಯನ್ನು ಶೇ.೧೫ರಿಂದ ೧೭ಕ್ಕೆ ಹಾಗೂ ಎಸ್‌ಟಿ ಮೀಸಲಾತಿ ಯನ್ನು ಶೇ.೩ರಿಂದ ೭ಕ್ಕೆ ಹೆಚ್ಚಳ ಮಾಡಲು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯ ಲಾಗಿದೆ. ಕೂಡಲೇ ರಾಜ್ಯಪತ್ರದಲ್ಲಿ ಈ ವಿಷಯವನ್ನು ಅಧಿ ಸೂಚನೆ ಹೊರಡಿಸಲಾಗುವುದು ಎಂದರು.

ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವುದಕ್ಕೆ ಕಾನೂನಿನ ರಕ್ಷಣೆ ಕೊಡಲು ಸಂವಿಧಾನದ ಷೆಡ್ಯೂಲ್ ೯ರ ಅಡಿ ಸೇರಿಸಬೇಕಾಗಿದೆ. ಅಲ್ಲಿಯವರೆಗೂ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ದೊರೆ ಯಬೇಕೆಂದು ಈ ಆದೇಶ ಹೊರಡಿಸಲಾಗುತ್ತಿದೆ ಎಂದು ಹೇಳಿದರು. ಸಂವಿಧಾನದ ಷೆಡ್ಯೂಲ್ ೯ರಲ್ಲಿ ಸೇರಿಸಲು ಸಮಯಬೇಕಾಗುತ್ತದೆ ಎಂದ ಅವರು, ಯಾವ ರೀತಿ ಸೇರಿಸಬೇಕೆಂಬ ವಿಧಿ, ವಿಧಾನಗಳ ಬಗ್ಗೆ ಕಾನೂನು ಸಚಿವರು, ಕಾನೂನು ಆಯೋಗ, ಅಡ್ವೋಕೇಟ್ ಜನರಲ್ ಮತ್ತು ಕಾನೂನು ಪರಿಣಿತರ ಜೊತೆ ಚರ್ಚೆ ಮಾಡಿ
ತೀರ್ಮಾನ ಮಾಡಲಾಗುವುದು ಎಂದರು. ಮೀಸಲಾತಿ ಪ್ರಮಾಣ ಶೇ.೫೦ರ ಗಡಿ ದಾಟುತ್ತಿದ್ದು, ಕಾನೂನಿನ ರಕ್ಷಣೆ ಸಿಗುತ್ತದೋ ಇಲ್ಲವೋ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ. ಇಂದ್ರಸಾನಿ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಯಿಂದ ದೂರ ಉಳಿದವರನ್ನು ವಿಶೇಷ ಪ್ರಕರಣವಾಗಿ ಪರಿಗಣಿಸ ಬಹುದು ಎಂದಿದೆ. ನ್ಯಾ. ನಾಗಮೋಹಮೋಹನ್ ದಾಸ್, ನ್ಯಾ. ಸುಭಾಷ್ ಅಡಿ ಅವರ ವರದಿಯಲ್ಲಿ ಈ ವಿಚಾರವಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಜನಸಂಖ್ಯೆ ಹೆಚ್ಚಳವಾಗಿರುವುದನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.೫೦ರನ್ನು ಮೀರಿರುವುದರಿಂದ ಯಾವ ರೀತಿ ಅನುಷ್ಠಾನ ಮಾಡಬೇಕೆಂಬ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತಿದೆ.
ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ವರದಿಯಲ್ಲಿ ತಳ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯವಿಲ್ಲ ಎಂಬ ಉಲ್ಲೇಖ ಮಾಡಿದ್ದಾರೆ. ಒಳಮೀಸಲಾತಿಗೆ ಸಂಬAಧಿಸಿದAತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಿದ್ದು, ಅದನ್ನು ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅದಕ್ಕೂ ಮುನ್ನ ಯಾವ ರೀತಿ ಒಳಮೀಸಲಾತಿ ಕಲ್ಪಿಸಬೇಕೆಂಬ ವರದಿ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ಎಂದು ಹೇಳಿದರು. ಒಳಮೀಸಲಾತಿಗೆ ಸಂಬAಧಿಸಿದAತೆ ಸುಪ್ರೀಂಕೋರ್ಟ್ನ ಎರಡು ಮೂರು ತೀರ್ಪುಗಳಿದ್ದು, ಅವುಗಳನ್ನು ಅಧ್ಯಯನ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳದ ವಿಚಾರವಾಗಿ ಬಲವಾದ ಆಧಾರಗಳಿವೆ ಎಂದು ಮುಖ್ಯಮಂತ್ರಿ ಸಮರ್ಥಿಸಿ ಕೊಂಡರು. ಇತರೆ ಸಮುದಾಯದ ಮೀಸಲಾತಿ ಬೇಡಿಕೆ ವಿಚಾರಕ್ಕೆ ಸಂಬAಧಿಸಿದAತೆ ವರದಿ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ನೋಡೋಣ ಎಂದು ಅವರು ಹೇಳಿದರು.

Translate »