ಇಂದು ಚಾಮುಂಡೇಶ್ವರಿ ಮಹಾ ರಥೋತ್ಸವ
ಮೈಸೂರು

ಇಂದು ಚಾಮುಂಡೇಶ್ವರಿ ಮಹಾ ರಥೋತ್ಸವ

October 9, 2022

ಅ.೧೧ರಂದು ತೆಪ್ಪೋತ್ಸವ
ಮೈಸೂರು, ಅ.೮(ಆರ್‌ಕೆ)-ನಾಳೆ (ಅ.೯) ಮೈಸೂರಿನ ಚಾಮುಂಡಿಬೆಟ್ಟ ದಲ್ಲಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಮಹಾ ರಥೋತ್ಸವ ಜರುಗಲಿದೆ.
ಧಾರ್ಮಿಕ ದತ್ತಿ ಇಲಾಖೆ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ವತಿಯಿಂದ ಭಾನು ವಾರ ಬೆಳಗ್ಗೆ ೭.೫೦ ರಿಂದ ೮.೧೦ ಗಂಟೆ ಯೊಳಗೆ ಸಲ್ಲುವ ಶುಭ ಮುಹೂರ್ತ ದಲ್ಲಿ ಶ್ರೀಮದ್ ದಿವ್ಯ ರಥಾರೋಹಣ ಮಂಟಪೋತ್ಸವವನ್ನು ಆಯೋಜಿ ಸಲಾಗಿದೆ. ಅ.೧೧ರಂದು ಮಂಗಳವಾರ ಸಂಜೆ ೭ ಗಂಟೆಗೆ ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ತೆಪ್ಪೋತ್ಸವ ಆಂದೋಳಿಕಾರೋಹಣ ಹಾಗೂ ಧ್ವಜಾರೋಹಣ ನಡೆಯಲಿದೆ.

Translate »