ನವೆಂಬರ್ ಅಂತ್ಯದೊಳಗೆ ರಿಂಗ್ ರಸ್ತೆಯಲ್ಲಿ ದೀಪಗಳು ಬೆಳಗಲಿವೆ ಸಂಸದ ಪ್ರತಾಪ್ ಸಿಂಹ ವಾಗ್ದಾನ
ಮೈಸೂರು

ನವೆಂಬರ್ ಅಂತ್ಯದೊಳಗೆ ರಿಂಗ್ ರಸ್ತೆಯಲ್ಲಿ ದೀಪಗಳು ಬೆಳಗಲಿವೆ ಸಂಸದ ಪ್ರತಾಪ್ ಸಿಂಹ ವಾಗ್ದಾನ

October 9, 2022

ಮೈಸೂರು, ಅ. ೮(ಆರ್‌ಕೆ)- ನವೆಂಬರ್ ೩೦ ರೊಳಗೆ ಮೈಸೂರಿನ ರಿಂಗ್ ರಸ್ತೆ ಬೀದಿ ದೀಪ ಅಳವಡಿಸುವ ಯೋಜನೆಯನ್ನು ಪೂರ್ಣಗೊಳಿಸು ವುದಾಗಿ ಸಂಸದ ಪ್ರತಾಪ್ ಸಿಂಹ ವಾಗ್ದಾನ ಮಾಡಿದ್ದಾರೆ.

`ಮೈಸೂರು ಮಿತ್ರ’ನಲ್ಲಿ ಇಂದು ಮೈಸೂರು ನಗರ ಜಗಮಗಿಸುತ್ತಿರಲೂ… ರಿಂಗ್ ರಸ್ತೆ ಯಲ್ಲಿ ನೀಗದೂ ಕಗ್ಗತ್ತಲು’ ಶೀರ್ಷಿಕೆಯಡಿ ಪ್ರಕಟವಾದ ಸುದ್ದಿಗೆ ಪ್ರತಿಕ್ರಿಯೆ ನೀಡಿ ರುವ ಅವರು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ, ಈಗಿನ ಉಸ್ತುವಾರಿ ಎಸ್.ಟಿ.ಸೋಮಶೇಖರ್, ರಿಂಗ್ ರಸ್ತೆ ದೀಪ ಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ೪೨.೫ ಕಿ.ಮೀ. ಉದ್ದದ ರಿಂಗ್ ರಸ್ತೆಯುದ್ದಕ್ಕೂ ಗುಂಡಿ ತೆಗೆದು ಅಂಡರ್ ಗ್ರೌಂಡ್ ಕೇಬಲ್ ಹಾಕಿ, ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲು ಮುಡಾದಿಂದ ೧೨ ಕೋಟಿ ರೂ.ಗಳನ್ನು ಮಂಜೂರು ಮಾಡಿಸಲಾ ಗಿದೆ ಎಂದರು. ಮೈಸೂರು ಮಹಾನಗರ ಪಾಲಿಕೆಯು ಕಾಮಗಾರಿ ನಡೆಸಿ ಚೆಸ್ಕಾಂಗೆ ಪ್ರತೀ ತಿಂಗಳೂ ರಿಂಗ್ ರಸ್ತೆ ದೀಪಗಳ ವಿದ್ಯುತ್ ಬಿಲ್ ಪಾವತಿಸುವುದರೊಂದಿಗೆ ನಿರ್ವಹಣೆ ಮಾಡುವುದೆಂದು ನಿರ್ಧರಿಸ ಲಾಗಿತ್ತು. ಅದರಂತೆ ಟೆಂಡರ್ ಕರೆದಾಗ ಒಬ್ಬರೇ ಪಾಲ್ಗೊಂಡಿದ್ದರು. ಮತ್ತೊಮ್ಮೆ ಟೆಂಡರ್ ಕರೆದಾಗಲೂ ಒಬ್ಬರೇ ಪಾಲ್ಗೊಂಡಿ ದ್ದರಿಂದ ಪಾಲಿಕೆ ಅಧಿಕಾರಿಗಳು ಅದೇ ವ್ಯಕ್ತಿಗೆ ಕಾಮಗಾರಿಯನ್ನು ಒಪ್ಪಿಸಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದರು. ಈಗಾಗಲೇ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲಾಗಿದೆ. ಹಾಳಾಗಿರುವ ಕಂಬಗಳನ್ನು ಸರಿಪಡಿಸಿ, ಎಲ್‌ಇಡಿ ಬಲ್ಬ್ ಅಳವಡಿಸುವ ಕೆಲಸ ಶೀಘ್ರದಲ್ಲೇ ಆರಂಭವಾಗಲಿದ್ದು, ನವೆಂಬರ್ ೩೦ ರೊಳಗೆ ದೀಪಗಳನ್ನು ಬೆಳಗಿಸುತ್ತೇವೆ ಎಂದು ಅವರು ಇದೇ ಸಂದರ್ಭ ಭರವಸೆ ನೀಡಿದರು.

Translate »