ಕೆರಗೋಡು ಬಳಿ ೮೦ ಲಕ್ಷ  ರೂ. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ಮೈಸೂರಿನ ಆರು ಮಂದಿ ಬಂಧನ
ಮಂಡ್ಯ

ಕೆರಗೋಡು ಬಳಿ ೮೦ ಲಕ್ಷ  ರೂ. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ಮೈಸೂರಿನ ಆರು ಮಂದಿ ಬಂಧನ

April 19, 2022

ಮAಡ್ಯ,ಏ.೧೮(ಮೋಹನ್‌ರಾಜ್)- ತಾಲೂ ಕಿನ ಗಂಟಗೌಡನಹಳ್ಳಿ-ದ್ಯಾಪಸAದ್ರ ಸಮೀಪ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸು ವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಿ, ಬರೋಬ್ಬರಿ ೮೦ ಲಕ್ಷ ರೂ ಮೌಲ್ಯದ ಚಿನ್ನಾ ಭರಣ, ನಗದು ಮತ್ತು ವಾಹನವನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.

ಸೋಮವಾರ ನಗರದ ಡಿಎಆರ್ ಮೈದಾನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಉದಯಗಿರಿ ಮೂಲದ ರಮೇಶ್, ವರುಣ್‌ಗೌಡ, ಪುನೀತ್, ಪ್ರಕಾಶ್, ರಾಜು ಮತ್ತು ಕೈಲಾಶ್‌ಕುಮಾರ್ ಬಂಧಿತ ರಾಗಿದ್ದು, ಇವರಿಂದ ೩ ಕೆಜಿ ಚಿನ್ನಾಭರಣ ಹಾಗೂ ೫೦ ಸಾವಿರ ರೂ ಹಣ, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬೈಕ್ ಅನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ಮೈಸೂರಿನ ವ್ಯಾಪಾರಿ ಲಲಿತ್ ಎಂಬವರು ಜ್ಯುವೆಲರಿ ಅಂಗಡಿಗಳಿಗೆ ಚಿನ್ನಾಭರಣಗಳನ್ನು ಸರಬರಾಜು ಮಾಡುವ ವೃತ್ತಿ ಮಾಡುತ್ತಿದ್ದರು. ಏ.೧೪ರಂದು ಲಲಿತ್ ಮತ್ತು ಮಾಧುರಾಂ ಅವರು ಕಾರಿನಲ್ಲಿ ಚಿನ್ನದ ಮೂಗುತಿ, ಉಂಗು ರವನ್ನು ಜಕ್ಕನಹಳ್ಳಿ, ಚಿಣ್ಯ, ಬಸರಾಳು ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾರೆ. ನಂತರ ಕೆರಗೋಡು ಗ್ರಾಮಕ್ಕೆ ಬರುವ ಮಾರ್ಗ ಮಧ್ಯೆ ಗಂಟಗೌಡನಹಳ್ಳಿ-ದ್ಯಾಪಸAದ್ರ ಸಮೀಪ ಸಿನಿಮಾ ಶೈಲಿಯಲ್ಲಿ ಹಿಂದಿನಿAದ ಬೈಕ್‌ನಲ್ಲಿ ಇಬ್ಬರು ಹಾಗೂ ಎದುರಿನಿಂದ ಕಾರಿನಲ್ಲಿ ನಾಲ್ವರು ಬಂದು ಅಡ್ಡ ಹಾಕಿ ಸುತ್ತಿಗೆಯಿಂದ ಕಾರಿನ ಗ್ಲಾಸ್‌ಗಳನ್ನು ಒಡೆದು ಮಾಧುರಾಂ ಮೇಲೆ ಹಲ್ಲೆ ನಡೆಸಿ ಚಿನ್ನಾ ಭರಣ ತುಂಬಿದ ಸೂಟ್‌ಕೇಸ್‌ಗಳನ್ನು ಕದ್ಯೊ ಯ್ದಿದ್ದರು. ಈ ಸಂಬAಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ವಿವರಿಸಿದರು.

ಪ್ರಕರಣ ಹಿನ್ನೆಲೆಯಲ್ಲಿ ನಾಲ್ಕು ತಂಡ ವನ್ನು ರಚಿಸಿ ತನಿಖೆ ಆರಂಭಿಸಲಾಯಿತು. ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಮಾಹಿತಿ, ಚಿನ್ನಾ ಭರಣ ಕಳೆದುಕೊಂಡವರಿAದ ಪಡೆದುಕೊಂಡ ವಿವರ ಹಾಗೂ ತಾಂತ್ರಿಕ ತಂಡದ ತನಿಖೆ ಯಿಂದ ಆರೋಪಿಗಳನ್ನು ಬಂಧಿಸಿದಾಗ ಇದು ವೃತ್ತಿ ವೈಷಮ್ಯದಿಂದ ನಡೆದ ಕೃತ್ಯ ವಾಗಿದೆ ಎಂದು ತಿಳಿದು ಬಂತು. ಲಲಿತ್ ಅವರ ಅಂಗಡಿಯಲ್ಲಿ ಸುಮಾರು ೧೪ ವರ್ಷ ಕೆಲಸ ಮಾಡಿ ನಂತರ ಕೆಲಸ ಬಿಟ್ಟಿದ್ದ ವ್ಯಕ್ತಿಯೇ ಪ್ರಮುಖ ಆರೋಪಿ ಯಾಗಿ ದ್ದಾನೆ. ಬಳಿಕ ಇವನಿಗೆ ಸಹಕರಿಸಿದ ಆಟೋ ಚಾಲಕರು, ಕೂಲಿ ಕಾರ್ಮಿಕ ಹಾಗೂ ಪ್ರಮುಖ ಆರೋಪಿ ಜತೆಗೆ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸೇರಿದಂತೆ ಆರು ಜನರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ತನಿಖಾ ತಂಡಕ್ಕೆ ನಗದು ಬಹುಮಾನ: ತನಿಖಾ ತಂಡದಲ್ಲಿ ಸಿಪಿಐ ಕ್ಯಾತೇಗೌಡ, ಪಿಎಸ್‌ಐ ಗಳಾದ ರಮೇಶ್, ಮಾರುತಿ, ಎಎಸ್‌ಐ ಚಿಕ್ಕಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇ ಗೌಡ, ಮಧುಕುಮಾರ್, ಇಂದ್ರಕುಮಾರ್ ಗಿರೀಶ್ ತನಿಖಾ ತಂಡ, ಡಿಸಿಆರ್‌ಬಿ ಪಿಐ ಎನ್.ವಿ.ಮಹೇಶ್, ಪಿಎಸ್‌ಐಗಳಾದ ಶೇಷಾದ್ರಿಕುಮಾರ್, ವೆಂಕಟೇಶ್, ಸಿಬ್ಬಂದಿ ಗಳಾದ ಕೆ.ಪಿ.ರವಿಕಿರಣ್, ಲೋಕೇಶ್, ಕೇಶವ ತಾಂತ್ರಿಕ ತಂಡ, ಪಿಐ ಆನಂದೇಗೌಡ, ಪಿಎಸ್‌ಐ ಗಳಾದ ರವಿಕುಮಾರ್, ರಮೇಶ್ ಕರಕಿಕಟ್ಟೆ, ಸಿಬ್ಬಂದಿ ಜೀಸನ್, ಉಮರ್, ಪ್ರಸನ್ನ, ಲಿಂಗ ರಾಜು, ಮಹೇಶ, ಆನಂದ, ಮಂಜುನಾಥ ಸಿಸಿಟಿವಿ ತಂಡ ಹಾಗೂ ಸೆನ್ ಪೊಲೀಸ್ ಠಾಣೆ ಪಿಐ ರಾಘವೇಂದ್ರ, ಪಿಎಸ್‌ಐಗ ಳಾದ ಕಮಲಾಕ್ಷಿ, ಜಯಲಕ್ಷö್ಮಮ್ಮ, ಸಿಬ್ಬಂದಿಗ ಳಾದ ಮಂಜುನಾಥ, ಲೋಕೇಶ್, ಪ್ರಸನ್ನ, ಕೃಷ್ಣಕುಮಾರ್ ಮಾಹಿತಿ ತಂಡದಲ್ಲಿದ್ದು, ಕೇವಲ ೪೮ ಗಂಟೆಯಲ್ಲಿಯೇ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ ತನಿಖಾ ತಂಡಕ್ಕೆ ಜಿಲ್ಲಾ ಎಸ್ಪಿ ೨೫ ಸಾವಿರ ರೂ ನಗದು ಬಹುಮಾನ ಘೋಷಿಸಿದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ಎಂ.ವೇಣು ಗೋಪಾಲ್, ಡಿವೈಎಸ್ಪಿ ಟಿ.ಮಂಜುನಾಥ್, ಡಿಎಆರ್ ಡಿವೈ ಎಸ್ಪಿ ವಿರೂಪಾಕ್ಷೇಗೌಡ ಇತರರಿದ್ದರು.

Translate »