ಕೆ.ಆರ್.ಪೇಟೆ ಬಳಿ ಇಂಜಿನಿಯರ್ ಅನುಮಾನಾಸ್ಪದ ಸಾವು
ಮಂಡ್ಯ

ಕೆ.ಆರ್.ಪೇಟೆ ಬಳಿ ಇಂಜಿನಿಯರ್ ಅನುಮಾನಾಸ್ಪದ ಸಾವು

April 19, 2022

ಕೃಷ್ಣರಾಜಪೇಟೆ,ಏ.೧೮(ಶ್ರೀನಿವಾಸ)- ತಾಲೂಕಿನ ಕಿಕ್ಕೇರಿ-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಐಕನಹಳ್ಳಿ ಗೇಟ್ ಬಳಿ ಅನುಮಾನಾಸ್ಪದವಾಗಿ ಬೈಕ್ ಅಪಘಾತ ನಡೆದಿದ್ದು ನರೇಗಾ ಇಂಜಿನಿಯರ್ ಮೃತಪಟ್ಟಿದ್ದು, ಇದು ಅಪಘಾತವೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.

ತಾಲೂಕಿನ ಚಿಕ್ಕತರಹಳ್ಳಿ ಗ್ರಾಮದ ಶ್ರೀನಿವಾಸಮೂರ್ತಿ ಅವರ ಎರಡನೇ ಮಗ ಸಿ.ಎಸ್. ಮಹೇಂದ್ರ (ಮೇಟಿ), (೨೯) ಮೃತ ಪಟ್ಟಿರುವ ಯುವಕ. ಮಹೇಂದ್ರ ಚನ್ನರಾಯಪಟ್ಟಣ ತಾಲೂಕು ಪಂಚಾಯತ್ ಕಸಬಾ ಹೋಬಳಿ ಕೇಂದ್ರದಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾನುವಾರ ಸಂಜೆ ಕೆಲಸದ ನಿಮಿತ್ತ ತಮ್ಮ ಸ್ವಗ್ರಾಮಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ತನಿಖೆ ನಡೆಸಿ ತಮ್ಮ ಮಗ ಮಹೇಂದ್ರನ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಬೇಕು ಎಂದು ಮೃತನ ಪೋಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Translate »