ನಂಜನಗೂಡಿನ ಜುಬಿಲಂಟ್‍ಗೆ ಭೇಟಿ ನೀಡಿದ್ದ 9 ವಿದೇಶಿಗರು ಪತ್ತೆ: ಸಚಿವ ಸುರೇಶ್‍ಕುಮಾರ್
ಮೈಸೂರು

ನಂಜನಗೂಡಿನ ಜುಬಿಲಂಟ್‍ಗೆ ಭೇಟಿ ನೀಡಿದ್ದ 9 ವಿದೇಶಿಗರು ಪತ್ತೆ: ಸಚಿವ ಸುರೇಶ್‍ಕುಮಾರ್

April 20, 2020

ಬೆಂಗಳೂರು,ಏ.19- ಮೈಸೂರಿನ ಕೊರೊನಾ ಹಾಟ್‍ಸ್ಪಾಟ್ ಆಗಿರುವ ನಂಜನಗೂಡಿಗೆ ಭೇಟಿ ನೀಡಿದ್ದ 10 ವಿದೇಶಿಗರ ಪೈಕಿ 9 ಜನರನ್ನು ಪತ್ತೆಹಚ್ಚಲಾಗಿದೆ ಎಂದು ಸಚಿವ ಎಸ್.ಸುರೇಶ್‍ಕುಮಾರ್ ಹೇಳಿದ್ದಾರೆ.

ನಂಜನಗೂಡಿನಲ್ಲಿ ಇಲ್ಲಿಯವರೆಗೆ 66 ಜನರಿಗೆ ಕೊರೊನಾ ಸೋಂಕು ತಗುಲಿದೆ. ನಂಜನಗೂಡಿಗೆ ಕಾಡುತ್ತಿರುವ ವೈರಸ್ ಮೂಲ ತನಿಖೆ ಮಾಡುವ ವೇಳೆ 10 ವಿದೇಶಿಗರು ಭೇಟಿ ನೀಡಿರುವುದು ತಿಳಿದುಬಂದಿದೆ. ತಕ್ಷಣ ಅವರನ್ನು ಪತ್ತೆ ಹಚ್ಚಲು ವಿದೇಶಾಂಗ ಸಚಿವಾಲಯದ ನೆರವು ಪಡೆಯಲಾಗಿತ್ತು. ಸಚಿವಾಲಯ ತನ್ನ ರಾಯಭಾರಿಗಳ ಮೂಲಕ ಚೀನಾ, ಜರ್ಮನಿ, ಜಪಾನ್ ಮತ್ತು ಅಮೆರಿಕದಿಂದ ಈ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡಲು ಯತ್ನಿಸಿತ್ತು ಎಂದಿದ್ದಾರೆ.

Translate »