ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ: ಶೇ.33 ಸಿಬ್ಬಂದಿ ಹಾಜರಿಗೆ ಡಿಡಿಪಿಐ ಆದೇಶ
ಮೈಸೂರು

ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ: ಶೇ.33 ಸಿಬ್ಬಂದಿ ಹಾಜರಿಗೆ ಡಿಡಿಪಿಐ ಆದೇಶ

April 20, 2020

ಮೈಸೂರು,ಏ.19(ಎಸ್‍ಪಿಎನ್)- 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ ಮಾಡಿಕೊಳ್ಳುವ ದೃಷ್ಟಿಯಿಂದ ಇಲಾಖೆಯ ಶೇ.33ರಷ್ಟು ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗು ವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇ ಶಕ ಪಾಂಡುರಂಗ ತಿಳಿಸಿದರು. ರಾಜ್ಯ ಸರ್ಕಾರ 2 ದಿನಗಳ ಹಿಂದೆ ಏ.20ರಿಂದ ಎಲ್ಲಾ ನೌಕರರು ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಆದೇಶ ನೀಡಿತ್ತು. ಆದರೆ, ಈಗ ಅತ್ಯಗತ್ಯ ಸೇವೆಗಳಡಿ ಬರುವ ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗು ವಂತೆ ಮರು ಆದೇಶ ಹೊರಡಿಸಲಾಗಿದೆ ಎಂದರು.

ಲಾಕ್‍ಡೌನ್‍ನಿಂದಾಗಿ ಎಲ್ಲಾ ಸಿಬ್ಬಂದಿ ಮನೆಯಲ್ಲೇ ಇದ್ದರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಕಷ್ಟವಾಗಲಿದೆ. ಹಾಗಾಗಿ ಸಾಮಾಜಿಕ ಅಂತರ ಕಾಯ್ದು ಕೊಂಡೇ ಕೆಲಸಕ್ಕೆ ಹಾಜರಾಗುವಂತೆ ಕೆಲ ಸಿಬ್ಬಂದಿಗೆ ಮೌಖಿಕ ಆದೇಶ ನೀಡಲಾಗಿದೆ ಎಂದು ಪಾಂಡುರಂಗ `ಮೈಸೂರು ಮಿತ್ರ’ನಿಗೆ ಭಾನುವಾರ ತಿಳಿಸಿದರು.

ನಿಯೋಜನೆ ಶಿಕ್ಷಕರ ಬಿಡುಗಡೆ ಆದೇಶ: ಬೇರೆಬೇರೆ ಕಾರಣಗಳಿಗಾಗಿ ಮೂಲ ಶಾಲೆಯಿಂದ ಬೇರೆ ಶಾಲೆಗೆ ನಿಯೋಜನೆಗೊಂಡಿದ್ದ ಶಿಕ್ಷಕರು ಕೊರೊನಾ ಸೋಂಕು ಸಮಸ್ಯೆ ಕೊನೆಗೊಂಡ ನಂತರ ನಿಯೋಜಿತ ಶಾಲೆಗೆ ಕೆಲಸಕ್ಕೆ ಹಾಜರಾಗಲು ಕ್ರಮ ವಹಿಸು ವಂತೆಯೂ ಎಲ್ಲಾ ಬಿಇಓಗಳಿಗೆ ಆದೇಶಿಸಲಾಗಿದೆ ಎಂದರು. ಈಗಾಗಲೇ ಎಸ್‍ಎಸ್ ಎಲ್‍ಸಿ ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಲಾಗಿದೆ. ಹಾಗಿದ್ದೂ ಪರೀಕ್ಷೆಗೆ ಸದಾ ತಯಾರಾ ಗಿರುವಂತೆ ಮಾಡಲು ಮೈಸೂರಿನ 98.8 ಎಫ್‍ಎಂ ಹಾಗೂ ಸರಗೂರಿನ ಜನದನಿ ರೇಡಿಯೋ ಕೇಂದ್ರಗಳಿಂದ ಬೋಧನೆ ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದರು.

Translate »